ರಾಜ್ಯ

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’: ಮೈಲಾರಲಿಂಗನ ಕಾರ್ಣಿಕ, ರೈತರ ಸಂತಸ? Video

ಭರತ ಹುಣ್ಣಿಮೆ ನಿಮಿತ್ತ ಮೈಲಾರ ಲಿಂಗೇಶ್ವರನ ಈ ವರ್ಷದ ಕಾರ್ಣಿಕ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದು ಮುಂದಿನ ವರ್ಷ ಹೇಗಿರಲಿವೆ ಎಂಬುದರ ಬಗ್ಗೆ ಭವಿಷ್ಯ ನುಡಿದಿವೆ.

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’: ಮೈಲಾರಲಿಂಗನ ಕಾರ್ಣಿಕ, ರೈತರ ಸಂತಸ? Video
ಮೈಲಾರ ಗೊರವಯ್ಯ ಕಾರ್ಣಿಕ (ಸಂಗ್ರಹ ಚಿತ್ರ)
Published On :

ವಿಜಯನಗರ: ಹರಪನಹಳ್ಳಿಯ ದೊಡ್ಡ ಮೈಲಾರ ಲಿಂಗೇಶ್ವರನ ಈ ವರ್ಷದ ಕಾರ್ಣಿಕ ಹೊರಬಿದ್ದಿದ್ದು ಗೊರವಯ್ಯನ ಕಾರ್ಣಿಕ ವ್ಯಾಪಕ ವೈರಲ್ ಆಗುತ್ತಿದೆ.

ಭರತ ಹುಣ್ಣಿಮೆ ನಿಮಿತ್ತ ಮೈಲಾರ ಲಿಂಗೇಶ್ವರನ ಈ ವರ್ಷದ ಕಾರ್ಣಿಕ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದು ಮುಂದಿನ ವರ್ಷ ಹೇಗಿರಲಿವೆ ಎಂಬುದರ ಬಗ್ಗೆ ಭವಿಷ್ಯ ನುಡಿದಿವೆ. ಗೊರವಯ್ಯನ ಕಾರ್ಣಿಕಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್

ಫೆಬ್ರವರಿ 1ರಂದು ಹರಪನಹಳ್ಳಿಯ ದೊಡ್ಡ ಮೈಲಾರದ ಜಾತ್ರೆ ನಡೆದಿತ್ತು. ಈ ಜಾತ್ರೆಯಂದು ಗೊರವಯ್ಯನ ಕಾರ್ಣಿಕ ನುಡಿದಿದ್ದಾರೆ. ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ಕಾರ್ಣಿಕದ ಅರ್ಥ ಏನು?

ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ಎಂದರೆ ರಾಜ್ಯದಲ್ಲಿ ಸಮೃದ್ಧಿ ಮತ್ತು ಸಂತೋಷ ಇರಲಿದೆ ಎಂಬುದರ ಸೂಚನೆ ಎಂದು ದೇವಸ್ಥಾನದ ಅರ್ಚಕರು ವಿಶ್ಲೇಷಣೆ ಮಾಡುತ್ತಾರೆ. ಒಳ್ಳೆಯ ಸುದ್ದಿಯ ಕಾರ್ಣಿಕ ಕೇಳಿ ಭಕ್ತಾದಿಗಳು ಸಂತೋಷಗೊಂಡಿದ್ದಾರೆ.

ಕಾರ್ಣಿಕದ ಕುರಿತು

ಭರತ ಹುಣ್ಣಿಮೆಯಂದು ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳಲ್ಲಿ ನುಡಿಯುವ ಹೇಳಿಕೆ ಅಥವಾ ಕಾರ್ಣಿಕ ನುಡಿಗಳು ಮುಂದಿನ ವರ್ಷ ಹೇಗಿರಲಿವೆ ಎಂಬುದರ ಬಗ್ಗೆ ಭವಿಷ್ಯ ನುಡಿಯುತ್ತವೆ.

ಜಾತ್ರೆಗಳಂದು ನುಡಿಯುವ ಭವಿಷ್ಯವಾಣಿ ಕೇಳಲು ದೂರ ದೂರದ ಊರುಗಳಿಂದ ಜನರು ಆಗಮಿಸುತ್ತಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಮೈಲಾರದ ಗೊರವಯ್ಯ ನುಡಿಯುವ ಕಾರ್ಣಿಕ ಸಹ ಮಹತ್ವವನ್ನು ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.