ಹನೂರು ಶೂಟೌಟ್ ಕೇಸ್: ವಿಜಯ್ ಮಾಮಾ, ನಮ್ಮ ಸಹಾಯಕ್ಕೆ ಬನ್ನಿ; ತಮಿಳುನಾಡು ಸಿಎಂ ನೆರವು ಕೋರಿದ ಮೃತ ಡೇವಿಡ್ ಪುತ್ರಿ..!
ಆಗಸ್ಟ್ 15ರಂದು ಕಾವೇರಿ ವನ್ಯಜೀವಿಧಾಮದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಕುಮಾರ್, ಆಂಥೋನಿ ಸ್ವಾಮಿ ಮತ್ತು ಪೀಟರ್ ಮೃತಪಟ್ಟಿದ್ದರು.

ಮೈಸೂರು: ಹನೂರು ಶೂಟೌಟ್'ನಲ್ಲಿ ಮೃತಪಟ್ಟ ಡೇವಿಡ್ ಕುಮಾರ್ ಅವರ ಪುತ್ರಿ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ "ವಿಜಯ್ ಮಾಮಾ" ಎಂದು ಆತ್ಮೀಯವಾಗಿ ಕರೆಯುತ್ತಾ, ತಮ್ಮ ಸಹಾಯಕ್ಕೆ ಬರುವಂತೆ ಮನವಿ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ವಿಜಯ್ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿರುವ ಬಾಲಕಿ, “ವಿಜಯ್ ಮಾಮಾ, ದಯವಿಟ್ಟು ನಮ್ಮ ಮನೆಗೆ ಬನ್ನಿ” ಎಂದು ಮನವಿ ಮಾಡಿದ್ದಾಳೆ.
ಕಣ್ಣೀರಿಡುತ್ತಲೇ ಮಾತನಾಡಿರುವ ಬಾಲಕಿ, ತಂದೆಯನ್ನು ಕಳೆದುಕೊಂಡ ಬಳಿಕ ತಮ್ಮ ಕುಟುಂಬ ತೀವ್ರ ಸಂಕಷ್ಟದಲ್ಲಿದೆ ಎಂದು ಹೇಳಿ, ಮನೆಗೆ ಭೇಟಿ ನೀಡಿ ನೆರವು ನೀಡುವಂತೆ ಕೋರಿದ್ದಾಳೆ.
ಆಗಸ್ಟ್ 15ರಂದು ಕಾವೇರಿ ವನ್ಯಜೀವಿಧಾಮದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಕುಮಾರ್, ಆಂಥೋನಿ ಸ್ವಾಮಿ ಮತ್ತು ಪೀಟರ್ ಮೃತಪಟ್ಟಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯ ಹಾಗೂ ಸ್ವತಂತ್ರ ತನಿಖೆಗೆ ಆಗ್ರಹಗಳು ಹೆಚ್ಚುತ್ತಿರುವ ನಡುವೆಯೇ ಮೃತ ಕುಮಾರ್ ಅವರ ಪುತ್ರಿಯ ಭಾವುಕಳಾಗಿ ತಮಿಳುನಾಡು ಸಿಎಂಗೆ ಮನವಿ ಮಾಡಿರುವ ವೀಡಿಯೋ ವೈರಲ್ ಆಗಿದೆ.
ಇದೇ ವೇಳೆ, ಮಹಿಮಾ ದಾಸ್ ಅವರ ವಿಡಿಯೋ ಬಿಡುಗಡೆಯಾದ ಬಳಿಕ ಅವರ ಪತ್ನಿ ಅರುಣಾ ಮೇರಿ, ಪತಿಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಿಂದ ತೆರಳಿದ ಬಳಿಕ ಮಹಿಮಾ ದಾಸ್ ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



