ಹೋಟೆಲ್ ಬೆನ್ನಲ್ಲೇ PG-ಹಾಸ್ಟೆಲ್‌ಗಳಿಗೂ ಶಾಕ್! GBAಯಿಂದ ಹಠಾತ್ ತಪಾಸಣೆ, ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ
ನಗರದ ಹಲವು ಪ್ರತಿಷ್ಠಿತ ಹೋಟೆಲ್ ಕಿಚನ್‌ಗಳಲ್ಲಿ ಹುಳು ಬಿದ್ದ ಹಿಟ್ಟು, ಅಡುಗೆ ಕೋಣೆಯಲ್ಲೇ ಓಡಾಡುತ್ತಿದ್ದ ಜಿರಳೆಗಳು ಮತ್ತು ಶುಚಿತ್ವದ ಕೊರತೆಯ ಸತ್ಯಗಳು ಹೊರಬಂದಿದ್ದವು. ಇದೀಗ ನಗರದ ಸಾವಿರಾರು ಯುವಕ-ಯುವತಿಯರು ಆಶ್ರಯ ಪಡೆದಿರುವ ಪಿಜಿ ಮತ್ತು ಹಾಸ್ಟೆಲ್‌ಗಳ ಸರದಿ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ನಗರದ ಹಲವು ಪ್ರತಿಷ್ಠಿತ ಹೋಟೆಲ್ ಕಿಚನ್‌ಗಳ ಮೇಲೆ ಇತ್ತೀಚೆಗೆ ನಡೆದ ದಿಢೀರ್ ದಾಳಿಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದವು. ಹುಳು ಬಿದ್ದ ಹಿಟ್ಟು, ಅಡುಗೆ ಕೋಣೆಯಲ್ಲೇ ಓಡಾಡುತ್ತಿದ್ದ ಜಿರಳೆಗಳು ಮತ್ತು ಶುಚಿತ್ವದ ಕೊರತೆಯ ಸತ್ಯಗಳು ಹೊರಬಂದಿದ್ದವು. ಹೋಟೆಲ್‌ಗಳ ಕರಾಳ ಮುಖ ಬಯಲಾದ ಬೆನ್ನಲ್ಲೇ, ಇದೀಗ ನಗರದ ಸಾವಿರಾರು ಯುವಕ-ಯುವತಿಯರು ಆಶ್ರಯ ಪಡೆದಿರುವ ಪಿಜಿ ಮತ್ತು ಹಾಸ್ಟೆಲ್‌ಗಳ ಸರದಿ ಬಂದಿದೆ.
ಹೌದು, ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಆಸರೆಯಾಗಿರುವ ಪೇಯಿಂಗ್ ಗೆಸ್ಟ್ (PG) ವಸತಿ ನಿಲಯಗಳ ಮೇಲೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ನಗರ ಪಾಲಿಕೆಗಳು ಕಣ್ಣಿಟ್ಟಿವೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಠಾತ್ ಕಾರ್ಯಾಚರಣೆ ಆರಂಭವಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಪಿಜಿಗಳಿಗೆ ಭಾರೀ ಸಂಕಷ್ಟ ಎದುರಾಗಲಿದೆ.
ಕರ್ನಾಟಕ ಹೈಕೋರ್ಟ್ ನಿರ್ದೇಶನ ಹಾಗೂ ಸಾರ್ವಜನಿಕರಿಂದ ಬಂದ ದೂರುಗಳ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗೇರ್ ಸ್ಕೂಲ್ ರಸ್ತೆ, ನ್ಯೂ ಹಾರಿಜಾನ್ ಕಾಲೇಜು ಪರಿಸರ ಹಾಗೂ ತೂಬರಹಳ್ಳಿ ಭಾಗಗಳಲ್ಲಿರುವ ಪಿಜಿಗಳನ್ನು ತಪಾಸಣೆ ಮಾಡಲು ನಗರ ಯೋಜನಾ ಉಪ ನಿರ್ದೇಶಕರು, ಕಾರ್ಯಪಾಲಕ ಎಂಜಿನಿಯರ್, ಆರೋಗ್ಯ ವೈದ್ಯಾಧಿಕಾರಿ ಹಾಗೂ ಘನತ್ಯಾಜ್ಯ ನಿರ್ವಹಣಾ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವನ್ನು ನಿಯೋಜಿಸಲಾಗಿದೆ. ಈ ಮೂಲಕ ಸಾರ್ವಜನಿಕರ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಪಿಜಿಗಳ ಮೇಲೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಹಾಗಾದ್ರೆ, ಪಿಜಿಗಳಲ್ಲಿ ಏನೆಲ್ಲ ತಪಾಸಣೆ ನಡೆಯಲಿದೆ?
ಆಹಾರ ತಯಾರಿಸುವ ಸ್ಥಳಗಳ ಶುಚಿತ್ವ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ, ಕಟ್ಟಡ ಸುರಕ್ಷತೆ ಹಾಗೂ ಅಗ್ನಿಶಾಮಕ ನಿಯಮಗಳ ಪಾಲನೆ, ವ್ಯಾಪಾರ ಪರವಾನಗಿ, ಘನತ್ಯಾಜ್ಯ ನಿರ್ವಹಣೆ ಮತ್ತು ಪಾರ್ಕಿಂಗ್ ಹಾಗೂ ಸಾರ್ವಜನಿಕ ರಸ್ತೆ ಒತ್ತುವರಿ ಬಗ್ಗೆ ತಪಾಸಣೆ ನಡೆಯಲಿದೆ. ನಿಯಮ ಮೀರಿದ್ದರೆ ಅಥವಾ ಅವಧಿ ಮೀರಿದ ಆಹಾರ ಬಳಸಿದರೆ ಪರವಾನಗಿ ರದ್ದು ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



