ಮೋದಿನೇ 'ಡಿ.ಕೆ, ಡಿ.ಕೆ' ಅಂತಿದ್ದಾರೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತಿದ್ದೀರಾ? ಫ್ರೀಡಂ ಹಬ್ಬದಲ್ಲಿ ಡಿ.ಕೆ ಶಿವಕುಮಾರ್ ಟಾಂಗ್
ಇದು ನವಯುಗ, ಇದು ನಿಮ್ಮ ಯುಗ, ನವ ಕರ್ನಾಟಕ, ನಿಮ್ಮ ಬೆಂಗಳೂರು. ನಮ್ಮ ಹಿರಿಯರು ಕೊಟ್ಟ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ನಾವು ಇದನ್ನ ಉಳಿಸಿಕೊಳ್ಳಬೇಕು. ಇಡೀ ದೇಶ ನಿಮ್ಮನ್ನ ನೋಡ್ತಾ ಇದೆ.

ಬೆಂಗಳೂರು: ವಿಧಾನಸೌಧದಲ್ಲಿ ಆಯೋಜಿಸಿದ್ದ ಫ್ರೀಡಂ ಹಬ್ಬ ಸಮಾರಂಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡುವಾಗ ಜನರು, ‘ಮೋದಿ ಮೋದಿ’.. ಅಂತ ಕೂಗಿದ ಪ್ರಸಂಗ ನಡೆಯಿತು.
ಸಮಾರಂಭದಲ್ಲಿ ಸಿಎಂ ಮಾತು ಆರಂಭಿಸುತ್ತಿದ್ದಂತೆ ಜನರು, ‘ಮೋದಿ ಮೋದಿ’ ಅಂತಾ ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಮೋದಿನೇ ಡಿಕೆ ಡಿಕೆ ಅಂತಿದ್ದಾರೆ.. ನೀವು ಮೋದಿ ಮೋದಿ ಅಂತಿದ್ದೀರಾ’ ಎಂದು ಜನರಿಗೆ ಟಾಂಗ್ ಕೊಟ್ಟರು. ಆಗ ಮತ್ತೆ ಜನರು, ‘ಡಿಕೆ ಡಿಕೆ’ ಅಂತ ಕೂಗಿದರು.
80ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಕೋರುತ್ತೇನೆ. ಇದು ನವಯುಗ, ಇದು ನಿಮ್ಮ ಯುಗ, ನವ ಕರ್ನಾಟಕ, ನಿಮ್ಮ ಬೆಂಗಳೂರು. ನಮ್ಮ ಹಿರಿಯರು ಕೊಟ್ಟ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ನಾವು ಇದನ್ನ ಉಳಿಸಿಕೊಳ್ಳಬೇಕು. ಇಡೀ ದೇಶ ನಿಮ್ಮನ್ನ ನೋಡ್ತಾ ಇದೆ.
ಇಂದು ಮಧ್ಯಾಹ್ನ 15 ಸಾವಿರ ಮಂದಿ ವಿಧಾನಸೌಧಕ್ಕೆ ಬಂದಿದ್ದರು. ಮೊದಲು ಜನ ಇಲ್ಲಿ ಬಂದು ಪೋಟೊ ತೆಗೆದುಕೊಂಡು, ಕಡಲೆಕಾಯಿ ತಿನ್ಕೊಂಡು ಹೋಗ್ತಿದ್ರು. ಈ ದೇಗುಲದಲ್ಲಿ ನೀವು ನಾವು ಸೇರಿದ್ದು ಒಂದು ಪುಣ್ಯ. ನನಗೆ ಭಾಷಣ ಮುಖ್ಯ ಅಲ್ಲ. ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ ಎಂದರು.
ಭಾರತ್ ಜೋಡೊದಲ್ಲಿ ನಿಮಗೆಲ್ಲಾ ಅವಕಾಶ ಇದೆ. ಆ ಸ್ಪರ್ಧೆಯಲ್ಲಿ ನೀವೆಲ್ಲಾ ಪಾಲ್ಗೊಳ್ಳಬೇಕು. ನೀವು ಭವಿಷ್ಯ ದೇಶದ ಶಕ್ತಿ. ಅಭಿವೃದ್ಧಿಶೀಲ ರಾಷ್ಟ್ರ ಮಾಡಲು ಪ್ರಯತ್ನ ಮಾಡ್ತಾ ಇದ್ದೇವೆ. ಮುಂದೆ ಇನ್ನೂ ಹೆಚ್ಚಿನ ಕಾರ್ಯಕ್ರಮ ಮಾಡೋಣ. ಯಾರಿಗೂ ಯಾವುದೇ ತೊಂದರೆ ಆಗದೇ ರಕ್ಷಣೆ ಕೊಡಬೇಕು. ಎಲ್ಲಾ ನಿಲ್ಲಿಸಿ ನಮ್ಮ ಸರ್ಕಾರಕ್ಕೆ ಈ ರಾಜ್ಯಕ್ಕೆ ಆರ್ಶೀವಾದ ಮಾಡಿ ಅಂತಾ ಯುವಜನತೆ, ಜನರಲ್ಲಿ ಸಿಎಂ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



