ರಾಜ್ಯ

'ನಟರತ್ನ ಕುಮಾರಣ್ಣ ನಾಟಕ ಮಂಡಳಿ'ಯಿಂದ ಬಿಡದಿಯ 35 ಎಕರೆಯಲ್ಲಿ ಡ್ರಾಮಾ: ಅಶೋಕ್- ಶಕುನಿ, ರವಿಕುಮಾರ್ -ದುಶ್ಯಾಸನ!

ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿರುವ ರವಿಕುಮಾರ್ ಇಲ್ಲವೇ ಛಲವಾದಿಯಣ್ಣ ದುಶ್ಯಾಸನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪ್ರದೀಪ್ ಈಶ್ವರ್​ ಲೇವಡಿ ಮಾಡಿದ್ದಾರೆ.

'ನಟರತ್ನ ಕುಮಾರಣ್ಣ ನಾಟಕ ಮಂಡಳಿ'ಯಿಂದ ಬಿಡದಿಯ 35 ಎಕರೆಯಲ್ಲಿ ಡ್ರಾಮಾ: ಅಶೋಕ್- ಶಕುನಿ, ರವಿಕುಮಾರ್ -ದುಶ್ಯಾಸನ!
ಪ್ರದೀಪ್ ಈಶ್ವರ್
Published On :

ಬೆಂಗಳೂರು: ನಾಳೆ ನಾಟಕ ರತ್ನ ಎಚ್.ಡಿ ಕುಮಾರಸ್ವಾಮಿ ನಾಟಕ ಮಂಡಳಿಯಿಂದ ಬಿಡದಿಯ 25 ಎಕರೆ ಜಾಗದಲ್ಲಿ ನಾಟಕ ಪ್ರಾರಂಭವಾಗುತ್ತೆ. ನಟ, ನಾಟಕರತ್ನ ಕುಮಾರಸ್ವಾಮಿ ಅವರೇ ಮುಖ್ಯಪಾತ್ರಧಾರಿ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಳೆಯಿಂದ ಬಿಡದಿ ನಾಟಕ ಪ್ರಾರಂಭವಾಗುತ್ತೆ ಎಂದಿದ್ದಾರೆ. ನಟ , ನಾಟಕರತ್ನ ಕುಮಾರಸ್ವಾಮಿ ಅವರ ನಾಟಕ. ಮುಖ್ಯಪಾತ್ರದಾರಿ ಕುಮಾರಣ್ಣ, ಶಕುನಿ ಪಾತ್ರದಾರಿ ಅಶೋಕಣ್ಣ ಮಾಡುತ್ತಾರೆ.

ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿರು ರವಿಕುಮಾರ್ ಇಲ್ಲವೇ ಛಲವಾದಿಯಣ್ಣ ದುಶ್ಯಾಸನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ.

ಸಮಯವನ್ನು ಕುಮಾರಣ್ಣ ನಿಗದಿ ಮಾಡಲಿ, ನನ್ನದು 75 ಲಕ್ಷ ರೂಪಾಯಿ ವಾಚ್, ಅವರದ್ದು ಸಿಂಪಲ್ ವಾಚ್ ಹೀಗಾಗಿ ಸಮಯ ಅವರೇ ನಿಗದಿ ಮಾಡಲಿ ಎಂದಿದ್ದಾರೆ, ಸ್ಥಳ ನಿಖಿಲ್ ಕುಮಾರಸ್ವಾಮಿಯವರ 35 ಎಕರೆ ಎಂದು ಬಿಡದಿ ವಿಚಾರವನ್ನ ನಾಟಕಕ್ಕೆ ಹೋಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.