ರಾಜ್ಯ

KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್; ಈ ಊರಿಗೆ ಹೋಗುವವರಿಗೆ ಶೇ.10 ರಷ್ಟು ಡಿಸ್ಕೌಂಟ್!

ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ: ಬೆಂಗಳೂರಿನಿಂದ ಈ ಊರಿಗೆ ಹೋಗುವವರಿಗೆ ಬಸ್ ಟಿಕೆಟ್ ದರದಲ್ಲಿ ಶೇ.10 ರಷ್ಟು ರಿಯಾಯಿತಿ! 90 ಹೆಚ್ಚುವರಿ ವಿಶೇಷ ಬಸ್.

KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್; ಈ ಊರಿಗೆ ಹೋಗುವವರಿಗೆ ಶೇ.10 ರಷ್ಟು ಡಿಸ್ಕೌಂಟ್!
ಕೆಎಸ್‌ಆರ್‌ಟಿಸಿ — Online Desk
Published On :

ಬೆಂಗಳೂರು: ಇನ್ನೇನು ಹಬ್ಬದ ಸೀಸನ್ ಪ್ರಾರಂಭವಾಗುತ್ತಿದೆ. ಹಾಗಾಗಿ, ಕೆಲಸದ ನಿಮಿತ್ತ ಸಿಲಿಕನ್ ಸಿಟಿ ಬೆಂಗಳೂರಿಗೆ ಬಂದವರಲ್ಲಿ ಬಹುತೇಕರು ಹಬ್ಬಕ್ಕೆ ಊರಿಗೆ ಹೋಗುವ ಪ್ಲಾನ್ ಮಾಡುತ್ತಿರುತ್ತಾರೆ. ಅಂತಹ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ವಿಶೇಷ ರಿಯಾಯಿತಿ ಹಾಗೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:

KSRTCಯಲ್ಲಿ ಶೇ.10 ವರೆಗೆ ಡಿಸ್ಕೌಂಟ್!

ಹೌದು, ಓಣಂ ಹಬ್ಬ ಮತ್ತು ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳದ ವಿವಿಧ ಭಾಗಗಳಿಗೆ ಪ್ರಯಾಣಿಸುವವರಿಗಾಗಿ KSRTC ವಿಶೇಷ ರಿಯಾಯಿತಿ ಹಾಗೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಪ್ರಕಟಿಸಿದೆ. ಹಾಗಾಗಿ, ಆನ್‌ಲೈನ್‌ನಲ್ಲಿ ಮುಂಗಡವಾಗಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಶೇ.10ರ ವರೆಗೆ ರಿಯಾಯಿತಿ ಸಿಗಲಿದೆ. ಅದರಂತೆ,

  • ಗ್ರೂಪ್ ಬುಕಿಂಗ್ ಡಿಸ್ಕೌಂಟ್: ಒಂದೇ ಟಿಕೆಟ್‌ನಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಒಟ್ಟಿಗೆ ಸೀಟು ಕಾಯ್ದಿರಿಸಿದರೆ ಮೂಲ ದರದಲ್ಲಿ ಶೇ.5 ರಷ್ಟು ರಿಯಾಯಿತಿ ಸಿಗಲಿದೆ.

  • ರಿಟರ್ನ್ ಜರ್ನಿ ಡಿಸ್ಕೌಂಟ್: ಹೋಗುವ ಮತ್ತು ಬರುವ ಎರಡು ಕಡೆಯ ಟಿಕೆಟ್‌ಗಳನ್ನು ಒಟ್ಟಿಗೇ ಬುಕ್ ಮಾಡಿದರೆ, ಬರುವ ಪ್ರಯಾಣದ ಟಿಕೆಟ್ ದರದ ಮೇಲೆ ಶೇ.10 ರಷ್ಟು ಡಿಸ್ಕೌಂಟ್ ದೊರೆಯಲಿದೆ.

90 ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ

ಮುಂದುವರೆದು, ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಪ್ರಯಾಣಿಕರು ಓಣಂ ಹಬ್ಬಕ್ಕೆ ತೆರಳಲು ಕೆಎಸ್‌ಆರ್‌ಟಿಸಿ, ಆಗಸ್ಟ್ 21 ರಿಂದ ಆಗಸ್ಟ್ 25 ರವರೆಗೆ ಬೆಂಗಳೂರಿನಿಂದ ಕೇರಳದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಇದರೊಂದಿಗೆ, ಹಬ್ಬ ಮುಗಿಸಿ ಪ್ರಯಾಣಿಕರು ಮರಳಿ ಬರಲು ಆಗಸ್ಟ್ 30 ರಂದು ಕೇರಳದ ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

ಟಿಕೆಟ್ ಬುಕ್ ಮಾಡುವುದು ಹೇಗೆ?

ಸಾರ್ವಜನಿಕರು ಅಧಿಕೃತ ವೆಬ್‌ಸೈಟ್ ಆದ KSRTC ಕನ್ಸೇಷನ್ ಮತ್ತು ಬುಕಿಂಗ್ ಪೋರ್ಟಲ್ ಅಥವಾ KSRTC ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡವಾಗಿ ಸೀಟುಗಳನ್ನು ಕಾಯ್ದಿರಿಸಬಹುದು. ಇದಲ್ಲದೆ ಕೇರಳದ ಪ್ರಮುಖ ನಗರಗಳಲ್ಲಿರುವ ಹಾಗೂ ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರದಂತಹ ಪ್ರಮುಖ KSRTC ಟಿಕೆಟ್ ಕೌಂಟರ್‌ಗಳಲ್ಲಿಯು ನೇರವಾಗಿ ಟಿಕೆಟ್ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.