ಇದೀಗ ಮತ್ತೊಂದು ಕ್ಷೇತ್ರದಲ್ಲಿ ಬೆಂಗಳೂರು ದೇಶದಲ್ಲಿಯೇ ನಂಬರ್ 1: ಮಾಹಿತಿ ಹಂಚಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ!
ಬೆಂಗಳೂರಿನ ಸಾಧನೆಯನ್ನು ಭಾರತದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ, ದೆಹಲಿ 74 ಒಪ್ಪಂದಗಳಲ್ಲಿ $538 ಮಿಲಿಯನ್ ಮತ್ತು ಮುಂಬೈ 34 ಒಪ್ಪಂದಗಳಲ್ಲಿ $402 ಮಿಲಿಯನ್ ನಿಧಿಯನ್ನು ದಾಖಲಿಸಿವೆ.

ಬೆಂಗಳೂರು: ಭಾರತದ ಸ್ಟಾರ್ಟ್‌ಅಪ್ ಇಕೋ ಸಿಸ್ಟಂಗಳಲ್ಲಿ ಬೆಂಗಳೂರು 2026 ರ ಮೊದಲ ತ್ರೈಮಾಸಿಕದಲ್ಲಿ 89 ಒಪ್ಪಂದಗಳ ಮೂಲಕ $823 ಮಿಲಿಯನ್ ನಿಧಿಯೊಂದಿಗೆ ತನ್ನ ನಾಯಕತ್ವವನ್ನು ಮುಂದುವರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಸಾಧನೆಯನ್ನು ಭಾರತದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ, ದೆಹಲಿ 74 ಒಪ್ಪಂದಗಳಲ್ಲಿ $538 ಮಿಲಿಯನ್ ಮತ್ತು ಮುಂಬೈ 34 ಒಪ್ಪಂದಗಳಲ್ಲಿ $402 ಮಿಲಿಯನ್ ನಿಧಿಯನ್ನು ದಾಖಲಿಸಿವೆ.
ಇದು ಬಂಡವಾಳ ಹರಿವು ಮತ್ತು ಒಪ್ಪಂದದ ವೇಗ ಎರಡರಲ್ಲೂ ಇರುವ ಸ್ಪಷ್ಟ ಅಂತರವನ್ನು ಒತ್ತಿಹೇಳುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು ಇಂದು ಅಮೆರಿಕ, ಯುರೋಪ್ ಹಾಗೂ ಚೀನಾದ ಹೊರಗೆ ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿ ಮತ್ತು ಜಾಗತಿಕವಾಗಿ 5 ನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿ ನಿಂತಿದೆ. ನಮ್ಮ ನಾಯಕತ್ವವು ಬಂಡವಾಳ ಹಾಗೂ ಉತ್ತಮ ಗುಣಮಟ್ಟದ ಉದ್ಯಮಿಗಳನ್ನು ಆಕರ್ಷಿಸುತ್ತಲೇ ಇರುವ ಪ್ರಬಲ, ಸಂಯೋಜಿತವಾದ ಇಕೋ ಸಿಸ್ಟಂನಿಂದ ಮೂಡಿ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ಡೀಪ್ ಟೆಕ್'ನಿಂದ ದೈನಂದಿನ ತಂತ್ರಜ್ಞಾನದವರೆಗೆ, ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಪ್ರತಿಯೊಂದು ಪ್ರಮುಖ ವಲಯದಲ್ಲೂ ಪ್ರಾಬಲ್ಯ ಸಾಧಿಸಿವೆ ಎಂದು ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇಂದು ಬೆಂಗಳೂರು ನಗರವನ್ನು ಭಾರತದ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರದಲ್ಲಿರಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


