ರಾಜ್ಯ

ಮಂಗಳೂರು: ಧಾರ್ಮಿಕ ಮೆರವಣಿಗೆ ವೇಳೆ ಪಾದಚಾರಿ ಸೇತುವೆ ಕುಸಿದು 8 ಜನರಿಗೆ ಗಾಯ, Video!

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಮೆರವಣಿಗೆಯ ವೇಳೆ ಪಾದಚಾರಿ ಸೇತುವೆ ಕುಸಿದು ಎಂಟು ಮಂದಿಗೆ ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಮೂಡುಬಿದಿರೆ ತಾಲ್ಲೂಕಿನ ಹೊಸಬೆಟ್ಟು ಬಳಿ 'ಧರ್ಮನೇಮ' ಆಚರಣೆಯ ಸಿದ್ಧತೆಯ ಭಾಗವಾಗಿ...

ಮಂಗಳೂರು: ಧಾರ್ಮಿಕ ಮೆರವಣಿಗೆ ವೇಳೆ ಪಾದಚಾರಿ ಸೇತುವೆ ಕುಸಿದು 8 ಜನರಿಗೆ ಗಾಯ, Video!
ಧಾರ್ಮಿಕ ಮೆರವಣಿಗೆ — PTI
Published On :

ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಮೆರವಣಿಗೆಯ ವೇಳೆ ಪಾದಚಾರಿ ಸೇತುವೆ ಕುಸಿದು ಎಂಟು ಮಂದಿಗೆ ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಮೂಡುಬಿದಿರೆ ತಾಲ್ಲೂಕಿನ ಹೊಸಬೆಟ್ಟು ಬಳಿ 'ಧರ್ಮನೇಮ' ಆಚರಣೆಯ ಸಿದ್ಧತೆಯ ಭಾಗವಾಗಿ ಭಕ್ತರು ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

ಅಧಿಕಾರಿಗಳ ಪ್ರಕಾರ, ಸನದ್ಗುಡ್ಡೆ ಪಡಿಹೊಡಿಬೆಟ್ಟು ದೇವಾಲಯದಿಂದ ಪ್ರಾರಂಭವಾಗಿ ತಕೋಡೆ ಬರ್ಕೆಯಲ್ಲಿರುವ ನಿವಾಸದ ಕಡೆಗೆ ಸಾಗುತ್ತಿದ್ದ ಮೆರವಣಿಗೆಯಲ್ಲಿ ಸುಮಾರು 25 ಜನರು ಭಾಗವಹಿಸಿದ್ದರು. ಸಾಂಪ್ರದಾಯಿಕ ಸಂಗೀತ ವಾದ್ಯಗಳೊಂದಿಗೆ ಗುಂಪು ಕಿರಿದಾದ ಪಾದಚಾರಿ ಸೇತುವೆಯನ್ನು ದಾಟುತ್ತಿದ್ದಾಗ ಅಪಘಾತ ಸಂಭವಿಸಿತ್ತು.

ಪಲ್ಲಕ್ಕಿ ಹೊತ್ತು ತೆರಳುತ್ತಿದ್ದಾಗ ಸುಮಾರು 10 ಅಡಿ ಆಳದ ಕಂದಕಕ್ಕೆ ಬಿದ್ದಿದ್ದರು. ಹರೀಶ್ ಎಂಬುವರ ಎರಡೂ ಕಾಲುಗಳು ಮುರಿದಿದ್ದು ಮಾರೂರಿನ ಸುನಿಲ್ ಶೆಟ್ಟಿಗೆ ಗಂಭೀರ ಗಾಯಗಳಾಗಿವೆ. ಇತರ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದು ಚಿಕಿತ್ಸೆಗಾಗಿ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪಾದಚಾರಿ ಸೇತುವೆಯನ್ನು ಸುಮಾರು ಐದು ದಶಕಗಳ ಹಿಂದೆ ನಿರ್ಮಿಸಲಾಗಿದ್ದು, ಅದು ದುರ್ಬಲ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.