BESCOM ಗ್ರಾಹಕರಿಗೆ ವಿದ್ಯುತ್ ಶಾಕ್: ಆದಾಯ ಕೊರತೆ ತುಂಬಲು ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚಳ..!
ಈ ಆದೇಶ 2026 ಮೇ 1 ರಿಂದ 2027ರ ಏಪ್ರಿಲ್ 31ರವರೆಗೆ ಬಳಕೆಯಾಗುವ ವಿದ್ಯುತ್ ಬಿಲ್‌ಗೆ ಅನ್ವಯವಾಗಲಿದೆ.

ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ಕೊಟ್ಟಿದೆ. ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ (KERC) ಆದೇಶ ಹೊರಡಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜುನಿಗಮ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಗಳಿಗೆ (ಸೆಸ್-ಮೈಸೂರು) 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿ ಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 15 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ.
ಈ ಆದೇಶ 2026 ಮೇ 1 ರಿಂದ 2027ರ ಏಪ್ರಿಲ್ 31ರವರೆಗೆ ಬಳಕೆಯಾಗುವ ವಿದ್ಯುತ್ ಬಿಲ್‌ಗೆ ಅನ್ವಯವಾಗಲಿದೆ.
ಇದೇ ವೇಳೆ 2024-25ರಲ್ಲಿ ನಿರ್ವಹಣಾ ವೆಚ್ಚಕ್ಕಿಂತ ಹೆಚ್ಚು ಆದಾಯ ಸಂಗ್ರಹ ಮಾಡಿರುವ ಹೆಸ್ಕಾಂ (ಹುಬ್ಬಳ್ಳಿ) ತನ್ನ ಗ್ರಾಹಕರಿಗೆ 2026-27ನೇ ಸಾಲಿನಲ್ಲಿ ಪ್ರತಿ ತಿಂಗಳು ಪ್ರತಿ ಯುನಿಟ್‌ಗೆ 10 ಪೈಸೆಯಂತೆ ಮರುಪಾವತಿ ಮಾಡಬೇಕು.
ಜತೆಗೆ ಜೆಸ್ಕಾಂ (ಕಲಬುರಗಿ) ಗ್ರಾಹಕರಿಗೆ 10 ಪೈಸೆ, ಮಂಗಳೂರಿನ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಸಹಕಾರ ಸೊಸೈಟಿಯ (ಎಚ್‌ಆರ್‌ಇಸಿಎಸ್) ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ಬರೋಬ್ಬರಿ 155 ಪೈಸೆಯಷ್ಟು ಹಣವನ್ನು ಮರು ಪಾವತಿ ಮಾಡಬೇಕು ಎಂದು ಆದೇಶ ಮಾಡಿದೆ.
ತನ್ಮೂಲಕ 2026-27ನೇ ಸಾಲಿಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರರಬಾಜು ಕಂಪೆನಿ ಗ್ರಾಹಕರಿಗೆ 15 ಪೈಸೆ ಹೊರೆ ಬಿದ್ದಿದೆ. ಆದರೆ ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಹುಕ್ಕೇರಿ ಎಸ್ಕಾಂಗಳ ಗ್ರಾಹಕರಿಗೆ ವಿದ್ಯುತ್ ದರ ಕಡಿಮೆಯಾಗಲಿದೆ.
ಎಸ್ಕಾಂಗಳಿಂದ ಮರುಪಾವತಿ ಪಡೆಯಲು ಅರ್ಹರಾಗಿರುವ 2024-25 ಸಾಲಿನಲ್ಲಿ ಬಳಕೆ ಮಾಡಿರುವ ವಿದ್ಯುತ್ ಪ್ರಮಾಣದ ಆಧಾರದ ಮೇಲೆ 2026-27ನೇ ಸಾಲಿನಲ್ಲಿ ಮರುಪಾವತಿ ಪಡೆಯುತ್ತಾರೆ.
ಇದನ್ನು ವಿದ್ಯುತ್ ಬಿಲ್‌ನಲ್ಲಿ 'ಎಫ್‌ವೈ 25 ಟ್ರೂ ಅಪ್ ಚಾರ್ಜಸ್' ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿ ಲೆಕ್ಕಾಚಾರ ಮಾಡಲಾಗುತ್ತದೆ.
ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಪ್ರತಿ ವರ್ಷ ನಿರೀಕ್ಷಿತ ವೆಚ್ಚ ಮತ್ತು ಆದಾಯದ ಆಧಾರದ ಮೇಲೆ ದರಗಳನ್ನು ನಿಗದಿಪಡಿಸುತ್ತವೆ. ಆದರೆ, ನೈಜ ವೆಚ್ಚದಲ್ಲಿ ಉಂಟಾಗುವ ವ್ಯತ್ಯಾಸ, ವಿದ್ಯುತ್ ಖರೀದಿ ಬೆಲೆ ಏರಿಕೆ, ಬಳಕೆ ಮಾದರಿಗಳ ಬದಲಾವಣೆ ಹಾಗೂ ಕಾರ್ಯಾಚರಣಾ ವೆಚ್ಚಗಳ ಹೆಚ್ಚಳದಿಂದಾಗಿ ಆದಾಯ ಕೊರತೆ ಉಂಟಾಗುತ್ತದೆ. ಈ ವ್ಯತ್ಯಾಸವನ್ನು ಸರಿಪಡಿಸುವ ಪ್ರಕ್ರಿಯೆಯೇ “ಟ್ರೂ-ಅಪ್” ತಿದ್ದುಪಡಿ ಆಗಿದೆ.
ಈ ಬಾರಿ BESCOM ವ್ಯಾಪ್ತಿಯಲ್ಲಿ ಸುಮಾರು 2,068 ಕೋಟಿ ರೂಪಾಯಿ ಆದಾಯ ಕೊರತೆ ಕಂಡುಬಂದಿದೆ ಎಂದು KERC ತಿಳಿಸಿದೆ.
ಈ ಕೊರತೆಯನ್ನು ಸರಿಪಡಿಸಲು ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚುವರಿ ವಸೂಲಿಗೆ ಅನುಮತಿ ನೀಡಲಾಗಿದೆ.
BESCOM ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳು ಒಳಗೊಂಡಿವೆ.
ಇನ್ನುಳಿದಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ 121.71 ಕೋಟಿ ರು. ಆದಾಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರತಿ ಯುನಿಟ್‌ಗೆ 15 ಪೈಸೆ ಹೆಚ್ಚಳ ಮಾಡಲಾಗಿದೆ.
ಆದರೆ, ಮಂಗಳೂರಿನ ಮೆಸ್ಕಾಂ 276.48 ಕೋಟಿ ರು. ಉಳಿತಾಯ ದಾಖಲಿಸಿರುವುದರಿಂದ ಪ್ರತಿ ಯುನಿಟ್‌ಗೆ 9 ಪೈಸೆ ಮರುಪಾವತಿಗೆ ಸೂಚಿಸಲಾಗಿದೆ. ಹೆಸ್ಕಾಂ 133.46 ಕೋಟಿ ರು. ದಾಖಲಿಸಿರುವುದರಿಂದ 10 ಪೈಸೆ, ಜೆಸ್ಕಾಂ 90.40 ಕೋಟಿ ರು. ಉಳಿತಾಯ ದಾಖಲಿಸಿರುವುದಕ್ಕೆ 10 ಪೈಸೆ ಮರುಪಾವತಿಗೆ ಆದೇಶಿಸಲಾಗಿದೆ.
ಎಚ್‌ಆರ್ ಇಸಿಎಸ್ (ಹುಕ್ಕೇರಿ) 381 ಮಿಲಿಯನ್ ಯುನಿಟ್ ವಿದ್ಯುತ್ ಪೂರೈಕೆ ಮಾಡಿದ್ದು, 267.35 ಕೋಟಿ ರು. ಖರ್ಚು ಮಾಡಿದೆ. ಇದಕ್ಕಿಂತ ಹೆಚ್ಚು ಆದಾಯ ಗಳಿಸಿರುವ ಹಿನ್ನೆಲೆಯಲ್ಲಿ ಪ್ರತಿ ಯುನಿಟ್‌ಗೆ 155 ಪೈಸೆಯಂತೆ ಮರುಪಾವತಿ ಆದೇಶಿಸಲಾಗಿದೆ.
ದರ ಬದಲಾವಣೆ (ಪ್ರತಿ ಯೂನಿಟ್'ಗೆ) ಇಂತಿವೆ...
BESCOM: ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚುವರಿ ವಸೂಲಿ
CESC (ಮೈಸೂರು ಸೆಸ್ಕ್): ಪ್ರತಿ ಯುನಿಟ್‌ಗೆ 15 ಪೈಸೆ ಹೆಚ್ಚುವರಿ ವಸೂಲಿ
HESCOM (ಹುಬ್ಬಳ್ಳಿ ಹೆಸ್ಕಾಂ): ಪ್ರತಿ ಯುನಿಟ್‌ಗೆ 10 ಪೈಸೆ ಇಳಿಕೆ
GESCOM (ಕಲಬುರಗಿ ಜೆಸ್ಕಾಂ): ಪ್ರತಿ ಯುನಿಟ್‌ಗೆ 10 ಪೈಸೆ ಇಳಿಕೆ
MESCOM (ಮಂಗಳೂರು ಮೆಸ್ಕಾಂ): ಪ್ರತಿ ಯುನಿಟ್‌ಗೆ 9 ಪೈಸೆ ಇಳಿಕೆ
HRECS (ಹುಕ್ಕೇರಿ ಎಚ್‌ಆರ್‌ಇಸಿಎಸ್): ಪ್ರತಿ ಯುನಿಟ್‌ಗೆ 155 ಪೈಸೆ ಇಳಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



