2030ರ ವೇಳೆಗೆ ಅಂತರಿಕ್ಷದಲ್ಲಿ 1 ಲಕ್ಷ ವಸ್ತುಗಳು ಸಂಗ್ರಹ: ಇಸ್ಟ್ರಾಕ್ ಮುಖ್ಯಸ್ಥ ಎ.ಕೆ ಅನಿಲ್ ಕುಮಾರ್
SMOPS-2026 ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಮಾತನಾಡಿದ ಅವರು, ಈ ಪೋರ್ಟಲ್ ಅಭಿವೃದ್ಧಿಯಲ್ಲಿ ಅನೇಕ ದೇಶಗಳು ಮತ್ತು ಸಂಸ್ಥೆಗಳು ಸಹಕರಿಸುತ್ತಿವೆ ಎಂದು ತಿಳಿಸಿದರು.

ಬೆಂಗಳೂರು: ಜಗತ್ತಿನ ವಿವಿಧ ಅಂತರಿಕ್ಷ ಸಂಸ್ಥೆಗಳ ಕಾರ್ಯಾಚರಣೆಗಳು ಹೆಚ್ಚುತ್ತಿರುವ ಹಿನ್ನೆಲೆ, 2030ರ ವೇಳೆಗೆ ಅಂತರಿಕ್ಷದಲ್ಲಿ ಸುಮಾರು ಒಂದು ಲಕ್ಷ ವಸ್ತುಗಳು ಇರಲಿವೆ ಎಂದು ಅಂದಾಜಿಸಲಾಗಿದೆ. ಉಪಗ್ರಹಗಳು ಸಂಚರಿಸುವ ಕಕ್ಷೆಗಳ (orbital shells) ಸಾಮರ್ಥ್ಯ ಸೀಮಿತವಾಗಿರುವುದರಿಂದ, ಅಂತರಿಕ್ಷದ ಸಾಮರ್ಥ್ಯ ಮತ್ತು ಲಭ್ಯತೆಯನ್ನು ಅರ್ಥಮಾಡಿಕೊಳ್ಳಲು “ಸ್ಪೇಸ್ ಕ್ಯಪಾಸಿಟಿ ಇಂಡೆಕ್ಸ್” ಪೋರ್ಟಲ್ ಸಿದ್ಧಪಡಿಸಲಾಗುತ್ತಿದೆ ಎಂದು ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ (ISTRAC) ನಿರ್ದೇಶಕ ಎ.ಕೆ. ಅನಿಲ್ ಕುಮಾರ್ ಹೇಳಿದ್ದಾರೆ.
SMOPS-2026 ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಮಾತನಾಡಿದ ಅವರು, ಈ ಪೋರ್ಟಲ್ ಅಭಿವೃದ್ಧಿಯಲ್ಲಿ ಅನೇಕ ದೇಶಗಳು ಮತ್ತು ಸಂಸ್ಥೆಗಳು ಸಹಕರಿಸುತ್ತಿವೆ ಎಂದು ತಿಳಿಸಿದರು.
ಮುಂದಿನ ವರ್ಷಗಳಲ್ಲಿ 50 ಸಾವಿರದಿಂದ 60 ಸಾವಿರವರೆಗೆ ದೊಡ್ಡ ಮಟ್ಟದ ಅಂತರಿಕ್ಷ ಕಾರ್ಯಾಚರಣೆಗಳು ಮತ್ತು ಉಪಗ್ರಹ ಗುಂಪುಗಳು (constellations) ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಆದರೆ, ಸಾಮರ್ಥ್ಯದ ಜೊತೆಗೆ ಡಿಕ್ಕಿ (collision) ಮತ್ತು ಅಂತರಿಕ್ಷ ಕಸದ (space debris) ಸಮಸ್ಯೆಯೂ ಹೆಚ್ಚುತ್ತಿದೆ. 10 ಸೆಂ.ಮೀ ಗಿಂತ ದೊಡ್ಡ ಗಾತ್ರದ ಸುಮಾರು 50 ಸಾವಿರ ಅಂತರಿಕ್ಷ ಕಸದ ವಸ್ತುಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಅವರು ಹೇಳಿದರು. ಕಾರ್ಯನಿರ್ವಹಣೆಯಲ್ಲಿರುವ ಉಪಗ್ರಹಗಳು ಡಿಕ್ಕಿಯಾಗದಂತೆ ನೋಡಿಕೊಳ್ಳಲು ಅಂತರಿಕ್ಷ ಸಂಸ್ಥೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
2015ರ ವೇಳೆಗೆ ಅಂತರಿಕ್ಷದಲ್ಲಿದ್ದ ವಸ್ತುಗಳಲ್ಲಿ 95 ಶೇಕಡಾ ಕಸದ ವಸ್ತುಗಳು ಮತ್ತು 5 ಶೇಕಡಾ ಮಾತ್ರ ಕಾರ್ಯನಿರ್ವಹಣೆಯಲ್ಲಿರುವ ಉಪಗ್ರಹಗಳಾಗಿದ್ದವು. 2020ರಲ್ಲಿ ಕಾರ್ಯನಿರ್ವಹಣೆಯ ಉಪಗ್ರಹಗಳು 25 ಶೇಕಡಾ ಆಗಿದ್ದು, ಕಸದ ವಸ್ತುಗಳು 75 ಶೇಕಡಾ ಆಗಿದ್ದವು. 2030ರ ವೇಳೆಗೆ ಈ ಅನುಪಾತ 50-50 ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



