ರಾಜ್ಯ

ಬೇಡಿಕೆ ಹೆಚ್ಚಳ: ಕರ್ನಾಟಕದಲ್ಲಿ ಆಟೋ LPG ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್

ರಾಜ್ಯದಲ್ಲಿ ಸುಮಾರು 70 ಶೇಕಡಾ ಆಟೋ ರಿಕ್ಷಾಗಳು ಡ್ಯುಯಲ್ ಫ್ಯೂಯಲ್ ವ್ಯವಸ್ಥೆ ಹೊಂದಿರುವುದರಿಂದ ಅಗತ್ಯವಿದ್ದರೆ ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಇಂಡಿಯನ್ ಆಯಿಲ್ ಸಲಹೆ ನೀಡಿದೆ.

ಬೇಡಿಕೆ ಹೆಚ್ಚಳ: ಕರ್ನಾಟಕದಲ್ಲಿ ಆಟೋ LPG ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಆಟೋ LPG ಸರಬರಾಜನ್ನು ಹೆಚ್ಚಿಸಿದೆ. ಜಾಗತಿಕ ಭೂರಾಜಕೀಯ ಅಸ್ಥಿರತೆಯ ಪರಿಣಾಮವಾಗಿ ಬೇಡಿಕೆ ತೀವ್ರವಾಗಿ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ.

ರಾಜ್ಯದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (OMCs) ಒಟ್ಟು 72 ಆಟೋ ಎಲ್ ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳನ್ನು (ALDS) ನಡೆಸುತ್ತಿವೆ. ಇದರಲ್ಲಿ ಇಂಡಿಯನ್ ಆಯಿಲ್ 55 ಸ್ಟೇಷನ್‌ಗಳನ್ನು ನಿರ್ವಹಿಸುತ್ತಿದೆ. 300ಕ್ಕೂ ಹೆಚ್ಚು ಖಾಸಗಿ ಎಎಲ್ ಡಿಎಸ್ ಗಳಿದ್ದರೂ, ಅವುಗಳಲ್ಲಿ ಸುಮಾರು 80 ಶೇಕಡಾದಷ್ಟು ಕಾರ್ಯನಿರ್ವಹಿಸದಿರುವುದರಿಂದ ಸರಬರಾಜಿನಲ್ಲಿ ಕೊರತೆ ಉಂಟಾಗಿದೆ.

ಸೀಮಿತ ಮೂಲಸೌಕರ್ಯ ಮತ್ತು ವಿತರಣೆ ಸಾಮರ್ಥ್ಯವೂ ಲಭ್ಯತೆ ಮೇಲೆ ಪರಿಣಾಮ ಬೀರುತ್ತಿವೆ ಎಂದು ಕಂಪನಿ ತಿಳಿಸಿದೆ. ಬೆಲೆ ವ್ಯತ್ಯಾಸವೂ ಬೇಡಿಕೆ ಮೇಲೆ ಪ್ರಭಾವ ಬೀರಿದೆ. ಬೆಂಗಳೂರಿನಲ್ಲಿ ಸರ್ಕಾರಿ ಪೆಟ್ರೋಲ್ ಬಂಕ್‌ಗಳಲ್ಲಿ ಆಟೋ LPG ಲೀಟರ್‌ಗೆ 89.52 ರೂಪಾಯಿಗೆ ಲಭ್ಯವಿದ್ದರೆ, ಖಾಸಗಿ ಸ್ಟೇಷನ್‌ಗಳಲ್ಲಿ 99 ರೂಪಾಯಿಯಿಂದ 105ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇದರಿಂದ ಸರ್ಕಾರಿ ಬಂಕ್‌ಗಳಲ್ಲಿ ದೀರ್ಘ ಸಾಲಿನಲ್ಲಿ ಆಟೋಗಳು ನಿಂತಿರುವುದು ಕಂಡುಬರುತ್ತಿದೆ.

ರಾಜ್ಯದಲ್ಲಿ ಸುಮಾರು 70 ಶೇಕಡಾ ಆಟೋ ರಿಕ್ಷಾಗಳು ಡ್ಯುಯಲ್ ಫ್ಯೂಯಲ್ ವ್ಯವಸ್ಥೆ ಹೊಂದಿರುವುದರಿಂದ ಅಗತ್ಯವಿದ್ದರೆ ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಇಂಡಿಯನ್ ಆಯಿಲ್ ಸಲಹೆ ನೀಡಿದೆ.

ಆಟೋ ಚಾಲಕರು ಪ್ರತಿಭಟನೆಗೆ ಮುಂದು

ಬೆಂಗಳೂರಿನಲ್ಲಿ ಆಟೋ ಎಲ್ ಪಿಜಿ ಕೊರತೆಯನ್ನು ವಿರೋಧಿಸಿ ಆಟೋ ಚಾಲಕರ ಸಂಘಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಸರ್ಕಾರದ ನಿರ್ಲಕ್ಷ್ಯದಿಂದ ಜೀವನೋಪಾಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದ್ದಾರೆ.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ. ಮಂಜುನಾಥ್, ಆದಾಯ ಕುಸಿತ ಮತ್ತು ಇಂಧನ ಲಭ್ಯತೆಯ ಅಸ್ಥಿರತೆಯಿಂದ ಚಾಲಕರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದಾರೆ. ಸಾರಿಗೆ ಇಲಾಖೆ ಸೇರಿದಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಹೇಳುತ್ತಾರೆ.

ಬಹುತೇಕ ಚಾಲಕರಿಗೆ ಆರ್ಥಿಕವಾಗಿ ನಷ್ಟವುಂಟಾಗಿದೆ. ಇಎಂಐ ಪಾವತಿಸಲು ಸಾಧ್ಯವಾಗುತ್ತಿಲ್ಲ. ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿ ಆಟೋಗೆ ದಿನಕ್ಕೆ ಕನಿಷ್ಠ 6 ಲೀಟರ್ ಎಲ್ ಪಿಜಿ ಪೂರೈಕೆ ಖಚಿತಪಡಿಸಬೇಕು ಎಂದು ಸಂಘಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ. ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 300 ಟನ್ ಆಟೋ ಎಲ್ ಪಿಜಿ ಬೇಡಿಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಿಎನ್ ಜಿ ಪರಿವರ್ತನೆಗೆ ಸರ್ಕಾರ ನೆರವು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಆಟೋ ಸಂಘ ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.