ರಾಜ್ಯ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಕೊಲೆಯಾದ ಯುವಕನನ್ನು 22 ವರ್ಷದ ವಿಜಯ್ ಎಂದು ಗುರುತಿಸಲಾಗಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿನ ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ.

ಕೊಲೆಯಾದ ಯುವಕನನ್ನು 22 ವರ್ಷದ ವಿಜಯ್ ಎಂದು ಗುರುತಿಸಲಾಗಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿನ ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಆರೋಪಿಗಳಾದ ಕಿರಣ್ ಮತ್ತು ವಿನೋದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ ವಿಜಯ್ ಬೈಕ್​​ಗೆ ವಿನೋದ್ ಬೈಕ್ ಟಚ್ ಆಗಿದೆ. ಇದೇ ವಿಚಾರವಾಗಿ ಗಲಾಟೆ ಕೂಡ ನಡೆದಿತ್ತು. ವಿಷಯವನ್ನು ಅಲ್ಲಿಗೆ ಬಿಡದೆ ಇಂದು ಬೆಳಗ್ಗೆ ವಿಜಯ್ ನನ್ನು ಹುಡುಕಿಕೊಂಡು ಆರೋಪಿಗಳಾದ ಕಿರಣ್ ಮತ್ತು ವಿನೋದ್ ಹೋಗಿದ್ದರು. ಮನೆ ಬಳಿ ತೆರಳಿದ್ದಾಗ ವಿಜಯ್ ಸಿಗದಿದ್ದರಿಂದ ಫೋನ್ ಮಾಡಿ ಆತನನ್ನು ಮತ್ತೆ ಬಾರ್ ಬಳಿಗೆ ಕರೆಸಿಕೊಂಡಿದ್ದರು. ವಿಜಯ್​​ ಸ್ಥಳಕ್ಕೆ ಬರುತ್ತಿದ್ದಂತೆ ಗಲಾಟೆ ಶುರುಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವಿಜಯ್ ಹೊಟ್ಟೆಗೆ ಚಾಕು ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಜೆ.ಸಿ.ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಇನ್ನು ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಬೈಕ್​​ ಟಚ್​​ ಆದ ವಿಚಾರ ಕೊಲೆಗೆ ಕೇವಲ ಪ್ರಚೋದನೆ ಮಾತ್ರ. ಹುಡುಗಿ ವಿಚಾರಕ್ಕೆ ಸಂಬಂಧಿಸಿ ಆರೋಪಿ ಕಿರಣ್​​ ಮತ್ತು ವಿಜಯ್​​ ನಡುವೆ ಹಿಂದಿನಿಂದಲೂ ದ್ವೇಷವಿತ್ತು. ವಿಜಯ್​​ಗೆ ಅದಾಗಲೇ ಮದುವೆಯಾಗಿದ್ದರೂ ಮಾಜಿ ಪ್ರೇಯಸಿಗೆ ಕಾಟ ನೀಡುತ್ತಿದ್ದ. ಆಕೆ ಈಗ ಕಿರಣ್​​ ಲವರ್​​ ಆಗಿದ್ದು, ಇದೇ ಕಾರಣಕ್ಕೆ ವಿಜಯ್​​ ಮೇಲೆ ಕಿರಣ್​​ಗೆ ಕೋಪ ಇತ್ತು. ಹೀಗಾಗಿ ವಿಜಯ್​​ನ ಕೊಲೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.