ರಾಜ್ಯ

ಬಳ್ಳಾರಿ: 1.5 ಲಕ್ಷ ರೂ ಗೆ ನವಜಾತ ಶಿಶು ಮಾರಾಟ; ನಾಲ್ವರ ಬಂಧನ

ಮಗು ಅಪಹರಣ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಎಸ್‌ಪಿ ಶೋಭಾ ರಾಣಿ ವಿಜೆ ಅವರು ಪ್ರಕರಣವನ್ನು ಬೇಧಿಸಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಳ್ಳಾರಿ: 1.5 ಲಕ್ಷ ರೂ ಗೆ ನವಜಾತ ಶಿಶು ಮಾರಾಟ; ನಾಲ್ವರ ಬಂಧನ
ಸಂಗ್ರಹ ಚಿತ್ರ
Published On :

ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಆಸ್ಪತ್ರೆಯಿಂದ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಒಂದು ವಾರದೊಳಗೆ ಬಳ್ಳಾರಿಯಲ್ಲಿ ದಾಖಲಾಗಿರುವ 2ನೇ ಪ್ರಕರಣ ಇದಾಗಿದೆ. ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಗೊಳಗಾಗಿದ್ದ 65 ವರ್ಷದ ವ್ಯಕ್ತಿ ಮತ್ತು ಇತರ ಮೂವರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಶಮಿನ್ ಇಸ್ಮಾಯಿಲ್ (25), ಇಸ್ಮಾಯಿಲ್ ಯಾಕೋಬ್ ಸಬ್ (65), ಬಾಷಾ ಸಾಬ್ (55) ಮತ್ತು ಬಸವರಾಜ ಸಜ್ಜನ್ (43) ಎಂದು ಗುರ್ತಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬರಾದ ಸಜ್ಜನ್ ದತ್ತು ಪಡೆಯಲು ಬಿಐಎಂಎಸ್ ಆಸ್ಪತ್ರೆಯ ಬಳಿ ವಾಸವಿದ್ದ ಇಸ್ಮಾಯಿಲ್ ಅವರನ್ನು ಸಂಪರ್ಕಿಸಿದ್ದು, ಆರೋಪಿಗಳು ದತ್ತು ಬದಲು ಮಗುವನ್ನು ಅಪಹರಣ ಮಾಡುವ ಸಲಹೆ ನೀಡಿದ್ದಾರೆ.

ಇದರಂತೆ ಇಸ್ಮಾಯಿಲ್ ಮಗುವನ್ನು ಅಪಹರಿಸಿ ಸೆಪ್ಟೆಂಬರ್ 12 ರಂದು ಆರೋಗ್ಯ ತಪಾಸಣೆಗಾಗಿ ಬಿಐಎಂಎಸ್‌ಗೆ ಬಂದಿದ್ದ ಸಜ್ಜನ್‌ಗೆ ರೂ.1.5 ಲಕ್ಷಕ್ಕೆ ಮಾರಾಟ ಮಾಡಿದ್ದ.

ಈ ನಡುವೆ ಮಗು ಅಪಹರಣ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಎಸ್‌ಪಿ ಶೋಭಾ ರಾಣಿ ವಿಜೆ ಅವರು ಪ್ರಕರಣವನ್ನು ಬೇಧಿಸಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಆಸ್ಪತ್ರೆಯ ಸಿಸಿಟಿವಿ ದಾಖಲೆಗಳು ಮತ್ತು ಇತರ ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ಪ್ರಕರಣ ಬೇಧಿಸಲಾಯಿತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 137(2), 143(4), 3(5) ಮತ್ತು ಬಿಎನ್‌ಎಸ್-2003 ಅಡಿಯಲ್ಲಿ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ, ವಿಜಯನಗರದಲ್ಲಿ ನವಜಾತ ಶಿಶು ಅಪಹರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆಶಾ ಕಾರ್ಯಕರ್ತೆಯರು ಸೇರಿದಂತೆ ನಾಲ್ವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಆರೋಪಿಗಳು ಹೆಣ್ಣು ಮಗುವನ್ನು ರೂ.10,000ಗೆ ಮಾರಾಟ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.