ರಾಜ್ಯ

ಡ್ರಗ್‌ ಪೆಡ್ಲರ್‌ಗಳ ಜತೆ ಪಾರ್ಟಿ: ಚಾಮರಾಜಪೇಟೆ ಇನ್ಸ್ ಪೆಕ್ಟರ್‌ ಸೇರಿ 11 ಪೊಲೀಸರ ಅಮಾನತು

ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಟಿ ಮಂಜಣ್ಣ ಅವರನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಡ್ರಗ್‌ ಪೆಡ್ಲರ್‌ಗಳ ಜತೆ ಪಾರ್ಟಿ: ಚಾಮರಾಜಪೇಟೆ ಇನ್ಸ್ ಪೆಕ್ಟರ್‌ ಸೇರಿ 11 ಪೊಲೀಸರ ಅಮಾನತು
ಅಮಾನತು (ಸಾಂಕೇತಿಕ ಚಿತ್ರ)
Published On :

ಬೆಂಗಳೂರು: ಡ್ರಗ್‌ ಪೆಡ್ಲರ್‌ಗಳ ಜೊತೆ ಪಾರ್ಟಿ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಸೇರಿದಂತೆ 11 ಪೊಲೀಸರನ್ನು ಅಮಾನತು ಮಾಡಲಾಗಿದೆ.

ಡ್ರಗ್‌ ಪೆಡ್ಲರ್ಸ್‌ ಜೊತೆಗೆ ಪಾರ್ಟಿ ಮಾಡಿದ ಎರಡು ಪೊಲೀಸ್‌ ಠಾಣೆಗಳ ಒಟ್ಟು 11 ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಚಾಮರಾಜಪೇಟೆಯ ಏಳು ಪೊಲೀಸರು ಹಾಗೂ ಜೆ.ಜೆ.ನಗರದ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಟಿ ಮಂಜಣ್ಣ ಅವರನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಅಮಾನತುಗೊಳಿಸಿ ಆದೇಶಿಸಿದ್ದರೆ, ಉಳಿದ ಸಿಬ್ಬಂದಿಗಳನ್ನು ಡಿಸಿಪಿ ಗಿರೀಶ್‌ ಅವರು ಅಮಾನತುಗೊಳಿಸಿದ್ದಾರೆ.

ಚಾಮರಾಜಪೇಟೆ ಠಾಣೆಯ ಹೆಡ್‌ಕಾನ್ಸ್ ಸ್ಟೇಬಲ್‌ ರಮೇಶ್‌ ಶಿವರಾಜ್‌ ಹಾಗೂ ಕಾನ್ಸ್ ಸ್ಟೇಬಲ್‌ಗಳಾದ ಮಧುಸೂದನ್‌, ಪ್ರಸನ್ನ, ಶಂಕರ್‌, ಆನಂದ್‌ ಹಾಗೂ ಜೆ.ಜೆ.ನಗರ ಪೊಲೀಸ್‌ ಠಾಣೆಯ ಎಎಸ್‌‍ಐ ಕುಮಾರ್‌, ಹೆಡ್‌ ಕಾನ್ಸ್ ಸ್ಟೇಬಲ್‌ ಆನಂದ್‌, ಸಿಬ್ಬಂದಿ ಬಸವಗೌಡ ಸೇರಿ 11 ಮಂದಿಯನ್ನು ಅಮಾನತು ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.