ರಾಜ್ಯ

ರಾಯಚೂರು: 3 ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್: PSI ಸೌಮ್ಯಾ ಎತ್ತಂಗಡಿ!

ಮೂರು ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ ರಾಯಚೂರಿನ ಇಡಪನೂರು ಠಾಣೆ ಮಹಿಳಾ ಪಿಎಸ್ ಐ ಸೌಮ್ಯಾ ಹಿರೇಮಠರನ್ನು ಎತ್ತಂಗಡಿ ಮಾಡಲಾಗಿದೆ. ಲಂಚದ ಬಗ್ಗೆ ಪಿಎಸ್ ಐ ಸೌಮ್ಯಾ ಹಾಗೂ ಕಾನ್ಸ್ ಟೇಬಲ್ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.

ರಾಯಚೂರು: 3 ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್: PSI ಸೌಮ್ಯಾ ಎತ್ತಂಗಡಿ!
ಸಂಗ್ರಹ ಚಿತ್ರ
Published On :

ರಾಯಚೂರು: ಮೂರು ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ ರಾಯಚೂರಿನ ಇಡಪನೂರು ಠಾಣೆ ಮಹಿಳಾ ಪಿಎಸ್ ಐ ಸೌಮ್ಯಾ ಹಿರೇಮಠರನ್ನು ಎತ್ತಂಗಡಿ ಮಾಡಲಾಗಿದೆ. ಲಂಚದ ಬಗ್ಗೆ ಪಿಎಸ್ ಐ ಸೌಮ್ಯಾ ಹಾಗೂ ಕಾನ್ಸ್ ಟೇಬಲ್ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಹೀಗಾಗಿ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ಇಡಪನೂರು ಠಾಣೆ ಪಿಎಸ್ ಐ ಸೌಮ್ಯಾ ಹಿರೇಮಠ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇಡಪನೂರು ಗ್ರಾಮದ ಸರ್ವೆ ನಂಬರ್ 917 ಜಮೀನು ವಿವಾದ ವಿಚಾರವಾಗಿ ಭೀಮನಗೌಡ ಹಾಗೂ ಅನುಸೂಯ ಎಂಬುವವರ ನಡುವೆ ಭೂ ವಿವಾದವಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರು ದೂರು ದಾಖಲಿಸಿದ್ದರು. ಇನ್ನು ಅನಸೂಯಾ ವಿರುದ್ಧದ ಕೆಲ ಸೆಕ್ಷನ್ ಗಳನ್ನು ಕೈಬಿಡಲು ಸೌಮ್ಯಾ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಆಡಿಯೋ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.