Caste Census: ಜಾತಿ ಗಣತಿ ಸಮೀಕ್ಷೆ ಪ್ರಶ್ನೆಗಳಿಗೆ ಸುಸ್ತಾದ ಡಿಸಿಎಂ; ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ, ಚಿನ್ನದ ಬಗ್ಗೆ ಕೇಳಿದ್ದಕ್ಕೆ ಗರಂ!
ಸಮೀಕ್ಷೆಯಲ್ಲಿ ಭಾಗಿಯಾದ ಡಿಸಿಎಂ ಡಿಕೆ ಶಿವಕುಮಾರ್ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾದರು. ಕಾಲಂನಲ್ಲಿ ಇವೆಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮದೇ ಸಮೀಕ್ಷೆ ಬಗ್ಗೆ ಚಕಾರವೆತ್ತಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಶುರುವಾಗಿದೆ. ಆ ನಿಟ್ಟಿನಲ್ಲಿ ಸಮೀಕ್ಷೆ ಮಾಡುವ ವ್ಯಕ್ತಿಗಳು ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆಗೆ ತೆರಳಿದ್ದರು. ಈ ವೇಳೆ ಕೆಲವು ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದ ಡಿಸಿಎಂ, ಇನ್ನೂ ಕೆಲವು ಪ್ರಶ್ನೆಗಳಿಗೆ ಗರಂ ಆದರು.
ಪ್ರಶ್ನೆಗೆ ಸುಸ್ತಾದ ಡಿಸಿಎಂ
ಸಮೀಕ್ಷೆಯಲ್ಲಿ ಭಾಗಿಯಾದ ಡಿಸಿಎಂ ಡಿಕೆ ಶಿವಕುಮಾರ್ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾದರು. ಕಾಲಂನಲ್ಲಿ ಇವೆಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮದೇ ಸಮೀಕ್ಷೆ ಬಗ್ಗೆ ಚಕಾರವೆತ್ತಿದ್ದಾರೆ.
ಡಿಕೆಶಿ ಅವರಿಗೆ ಸಮೀಕ್ಷೆ ಮಾಡುವವರು ಕೇಳಿದ ಪ್ರಶ್ನೆಗಳು
ಜನ್ಮ ಜಿಲ್ಲೆ ಬೆಂಗಳೂರು ದಕ್ಷಿಣ ಎಂದ ಡಿಕೆಶಿ, ಎಂಕಾಮ್ ಶಿಕ್ಷಣ ಪಡೆದಿದ್ದೇನೆ ಎಂದರು. ಉದ್ಯೋಗದ ಬಗ್ಗೆ ಪ್ರಶ್ನೆಗೆ, 'ಕೃಷಿ ಎಂದು ಹಾಕಿ' ಎಂದರು. ಧರ್ಮ: ಹಿಂದೂ, ಜಾತಿ: ಒಕ್ಕಲಿಗ ಗೌಡ ಒಕ್ಕಲಿಗ(154), ಜಾತಿ ಪ್ರಯಾಣ ಪತ್ರ ಶಾಲೆಯಲ್ಲಿ ಪಡೆದಿದ್ದೇನೆ. 31ರ ವಯಸ್ಸಿನಲ್ಲಿ ಮದುವೆಯಾಗಿದ್ದೇನೆ . ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರ ನೀಡಿದರು. ಮೀಸಲಾತಿ ಸೌಲಭ್ಯವನ್ನು ಪಡೆದಿಲ್ಲ, ಉದ್ಯೋಗದ ಪ್ರಶ್ನೆಗೆ ಪಬ್ಲಿಕ್ ಸರ್ವಂಟ್,ಸ್ವ ಉದ್ಯೋಗ ಎಂದು ಬರೆದುಕೊಳ್ಳಿ ಎಂದರು.
ಕುಲ ಕಸುಬು ಕೃಷಿ ಸಾಗುವಳಿ ಎಂದ ಅವರು, ಆದಾಯದ ಬಗ್ಗೆ ಪ್ರಶ್ನೆ ಬಂದಾಗ ದೊಡ್ಡ ಸ್ಲಾಬ್ ಹಾಕು ಎಂದು ಹೇಳಿದರು. ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆಗೆ 'ಮಂತ್ರಿ ಹಾಕು' ಎಂದು ಹೇಳಿದರು. ಈ ವೇಳೆ ಅಂಥ ಆಯ್ಕೆ ಇಲ್ಲ ಎಂದಿದ್ದಕ್ಕೆ, 'ಮಾಜಿ ಜಿಲ್ಲಾ ಪಂಚಾಯತ್ ಮೆಂಬರ್' ಎಂದು ಹಾಕುವಂತೆ ತಿಳಿಸಿದರು. ಮಾರ್ಕೆಟಿಂಗ್ ಸೊಸೈಟಿ, ಬೇಕಾದಷ್ಟು ನಿಗಮ ಮಂಡಳಿಗಿದ್ದೇನಲ್ಲ ಎಂದು ಡಿಕೆಶಿ ಹೇಳಿದರು.
ಸಮೀಕ್ಷೆದಾರನಿಗೆ ಕೆಲವು ಪ್ರಶ್ನೆಗಳನ್ನು ಡಿಕೆಶಿ ಕೇಳಿದಾಗ, 'ಯಾಕೆ ಹಿರಿಯ ಅಧಿಕಾರಿಯನ್ನು ಕೇಳ್ತೀಯಾ?' ನೀನೇ ಕೇಳು, ಅವರೇನು ನಿನ್ನ ಪಿಎ ನಾ? ಎಂದ ಡಿಕೆಶಿ ಗದರಿದ್ದಾರೆ. ಇಷ್ಟು ಪ್ರಶ್ನೆಗಳನ್ನು ಕೇಳಿದ ಬಳಿಕ, ಪ್ರಶ್ನೆಗಳು ತುಂಬಾ ಆದವು. ಇದೆಲ್ಲವೂ ಬಹಳ ಸಿಂಪಲ್ ಆಗಿ ಇರಬೇಕು ಎಂದು ಹೇಳಿದರು. ಬಳಿಕ ಉಷಾ ಶಿವಕುಮಾರ್‌ಗೆ ಪ್ರಶ್ನೆಗಳನ್ನು ಕೇಳಲಾಯಿತು.
ಮನೆ ಸಂಖ್ಯೆ 128 ಇರಬೇಕು.. ಅಂಚೆ ವಿಳಾಸ ದೊಡ್ಡಾಲಹಳ್ಳಿ. ಕುಟುಂಬ ಹೊಂದಿರುವ ಆಸ್ತಿ 50-50 ಎಕರೆ ಹಾಕಿ ಎಂದು ಡಿಕೆಶಿ ಹೇಳಿದರು. ಬ್ಯುಸಿನೆಸ್‌ಗೋಸ್ಕರ ಸಾಲ ಇದೆ. ಬ್ಯಾಂಕ್‌ನಲ್ಲಿ ಮಾಡಿದ್ದೇವೆ. 25 ಹಸು ಇದೆ, ಎತ್ತು ಇದೆ, ಕುರಿ ಮೇಕೆ ಹತ್ತತ್ತು ಹಾಕು ಎಂದು ಹೇಳಿದರು. ಹೈನುಗಾರಿಕೆ ,ಕೋಳಿ ಸಾಕಾಣಿಕೆ ,ರೇಷ್ಮೆ ಇದೆ. ವಾಣಿಜ್ಯ ಕಟ್ಟಡ 4 ಹಾಕೊಳ್ಳಿ, ತೋಟದ ಮನೆ ಇದೆ. ಇತರ ಕಟ್ಟಡ ಪಟ್ಟಿಕೊಡಬೇಕು ಅಷ್ಟೇ ಎಂದರು.
ಎರಡು ಫಾರ್ಮ್ ಹೌಸ್, ಕಂಪ್ಯೂಟರ್, ಪ್ರಿಡ್ಜ್ ಒಂದ್ 5 ಹಾಕಿಕೊಳ್ಳಿ. ಎಸಿ ಇದೆ ಎಂದು ಹೇಳಿದರು. ಫ್ಯಾಕ್ಸ್ ಇದ್ಯಾ ಎನ್ನುವ ಪ್ರಶ್ನೆಗೆ, 'ಇದನೆಲ್ಲಾ ಯಾಕೆ ಹಾಕಿದ್ರಿ.ಈಗ ಯಾರದ್ದಿರುತ್ತೆ ಫ್ಯಾಕ್ಸ್' ಎಂದು ಉತ್ತರಿಸಿದರು.
ಚಿನ್ನ ಕೇಳಿದ್ದಕ್ಕೆ ಗರಂ ಆದ ಡಿಸಿಎಂ
ಜ್ಯುವೆಲರಿ ಇದೆಯಾ ಇಲ್ಲವಾ ಎನ್ನುವ ಪ್ರಶ್ನೆಗೆ ಡಿಸಿಎಂ ಗರಂ ಆದರು. ಪರ್ಸನಲ್ ಡೀಟೆಲ್ಸ್‌ಗೆ ಹೋಗಬಾರರದು ಎಂದರು. ಆ ಮೂಲಕ ಸಮೀಕ್ಷೆಯಲ್ಲಿನ ಕೆಲ ಪ್ರಶ್ನೆಗೆ ಡಿಸಿಎಂ ಅಪಸ್ವರ ಎತ್ತಿದರು. ಹಾಲಿ ನಿವಾಸ, ನನ್ ಹೆಂಡ್ತಿ ಮನೆ ಎಂದು ತಮಾಷೆಯಾಗಿ ಉತ್ತರಿಸಿದರು.
ಇದೆಲ್ಲಾ ಯಾಕ್ ಹಾಕಿದ್ದೀರಾ
ಪ್ಯಾಕ್ಸ್ ಇದೆಯಾ ಎಂದು ಪ್ರಶ್ನೆಗೆ ಡಿಸಿಎಂ ಇದನೆಲ್ಲಾ ಯಾಕೆ ಹಾಕಿದ್ರಿ. ಈಗ ಯಾರದ್ದಿರುತ್ತೆ ಪ್ಯಾಕ್ಸ್ ಎಂದಿದ್ದಾರೆ. ಜೊತೆಗೆ ನಮ್ಮ ಮನೆಯಲ್ಲೇ 1 ಗಂಟೆ ಆಯ್ತು ದಿನಕ್ಕೆ ಎಷ್ಟು ಸಮೀಕ್ಷೆ ಮಾಡ್ತೀರಾ ಎಂದು ಅಧಿಕಾರಿಗೆ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.
ಸಿಂಪಲ್ ಆಗಿ ಸಮೀಕ್ಷೆ ಮಾಡಿ ಸಾಕು
ಇದಕ್ಕೆ ಉತ್ತರಿಸಿದ ರಾಜೇಂದ್ರ ಜೋಳನ್, ಸರ್, ನಮಗೆ ದಿನಕ್ಕೆ 20 ಮಾಡಲು ಹೇಳಿದ್ದಾರೆ. ಆದರೆ ಈ ಪ್ರಶ್ನಾವಳಿಯಲ್ಲಿ ಕಷ್ಟ ಎಂದಿದ್ದಾರೆ. ಕುರಿ ಕೋಳಿ, ಟ್ರ್ಯಾಕ್ಟರ್ ಕೇಸ್, ಖಾಯಿಲೆ ಬಗ್ಗೆ ಎಲ್ಲಾ ಬೇಕಾ? ಸಿಂಪಲ್ ಆಗಿ ಸಮೀಕ್ಷೆ ಮಾಡಿ. ನಮಗೇನೆ ತಾಳ್ಳೆ ಇಲ್ಲ, ಇನ್ನು ಜನರು ಎಲ್ಲಿಂದ ಮಾಹಿತಿ ಕೊಡ್ತಾರೆ, ನಡೀರಪ್ಪ ಅಂತಾರೆ. ಆರ್ಥಿಕ ಸಾಮಾಜಿಕ ಮಾಹಿತಿ ತಕೊಂಡ್ರೆ ಸಾಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



