ರಾಜ್ಯ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವ್ಯರ್ಥ ಖರ್ಚು: ಪಾರದರ್ಶಕತೆಗೆ RTI ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹ

ಭೀಮಪ್ಪ ಗಡಾದ್ ಅವರು ಮಾಹಿತಿ ಹಕ್ಕು ಅರ್ಜಿಯಿಂದ ಪಡೆದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಇದರ ವಿವರಗಳು ರಾಜ್ಯದ ಜನರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವ್ಯರ್ಥ ಖರ್ಚು: ಪಾರದರ್ಶಕತೆಗೆ RTI ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹ
ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್
Published On :

ಬೆಳಗಾವಿ: ಜಿಲ್ಲೆಯ ರಾಜಕೀಯ ವಲಯ ಹಾಗೂ ಆಡಳಿತ ವಲಯದಲ್ಲಿ ಭುಗಿಲೆದ್ದಿರುವ ಮಹತ್ವದ ಆರೋಪವನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಬೆಳಗಾವಿಯಲ್ಲಿ ಬಿಚ್ಚಿಟ್ಟಿದ್ದಾರೆ.

ಸುವರ್ಣ ಸೌಧದಲ್ಲಿ ನಡೆದಿರುವ ದುಂದು ವೆಚ್ಚಗಳನ್ನು ಬಹಿರಂಗಪಡಿಸಿರುವ ಅವರು, ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಖುರ್ಚಿ ಮತ್ತು ಭಾವಚಿತ್ರಗಳ ಹೆಸರಿನಲ್ಲಿ ಪೋಲಾಗಿ ಬಳಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಭೀಮಪ್ಪ ಗಡಾದ್ ಅವರು ಮಾಹಿತಿ ಹಕ್ಕು ಅರ್ಜಿಯಿಂದ ಪಡೆದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಇದರ ವಿವರಗಳು ರಾಜ್ಯದ ಜನರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎನ್ನಲಾಗಿದೆ.

ಗಡಾದ್ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಸುವರ್ಣ ಸೌಧದಲ್ಲಿ ಕೇವಲ ಸಭಾಧ್ಯಕ್ಷರ ಪೀಠದ ನಿರ್ಮಾಣಕ್ಕೆ ಮಾತ್ರ 42,93,940 ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಬಹಿರಂಗವಾಗಿದೆ. ಈ ವಿನ್ಯಾಸ, ಅಳತೆ, ಒಳಸಜ್ಜೆ ಮತ್ತು ಕಲಾತ್ಮಕ ಕೆಲಸಗಳ ಹೆಸರಿನಲ್ಲಿ ಈ ಭಾರೀ ಮೊತ್ತ ಖರ್ಚಾಗಿರುವುದಾಗಿ ಮಾಹಿತಿ ಪಡೆದುಕೊಳ್ಳಲಾಗಿದೆ.

ಅಷ್ಟೇ ಅಲ್ಲದೆ, ಸುವರ್ಣ ಸೌಧದ ಒಳಭಾಗದಲ್ಲಿ ಅಳವಡಿಸಿರುವ ಭಾವಚಿತ್ರಗಳ 11 ಸೆಟ್‌ಗಳಿಗೆ 68,67,964 ವೆಚ್ಚ ಮಾಡಲಾಗಿದೆ ಎಂಬ ದಾಖಲೆ ಗಡಾದ್ ಅವರ ಕೈಯಲ್ಲಿ ಲಭ್ಯವಾಗಿದೆ. ಒಟ್ಟು 1 ಕೋಟಿಗೂ ಮೀರಿದ ವೆಚ್ಚ ಖರ್ಚಾದರೂ, ಇದಕ್ಕೆ ಕಲಾತ್ಮಕ ಮೌಲ್ಯಕ್ಕಿಂತಲೂ ಹೆಚ್ಚು ಅತಿಯಾದ ಖರ್ಚಿನ ವಾಸನೆ ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗಡಾದ್ ಅವರ ಈ ದಾಖಲೆ ಬಿಡುಗಡೆ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ವೇದಿಕೆಯಾಗಿದೆ.

ಈ ದುಂದು ವೆಚ್ಚಕ್ಕೆ ಯಾರು ಜವಾಬ್ದಾರರು? ಇದರಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಪರಿಶೀಲಿಸುವರೇ? ಈ ವೆಚ್ಚ ನಿಜವಾಗಿಯೂ ಅವಶ್ಯಕವಾಗಿತ್ತೇ? ಈ ಪ್ರಶ್ನೆಗಳು ಈಗ ಸುವರ್ಣ ಸೌಧದ ಗಡಿಗಳನ್ನು ದಾಟಿ ಸಾಮಾಜಿಕ ಜಾಲತಾಣಗಳವರೆಗೆ ಮುನ್ನೆಲೆಗೆ ಬಂದಿವೆ.

ಇದಲ್ಲದೆ, ಫೆಬ್ರವರಿ 4, 2025 ರಂದು ಮೊದಲ ಮಹಡಿಯ ಪಶ್ಚಿಮ ಭಾಗದಲ್ಲಿ ಅನುಭವ ಮಂಟಪ ಕಲಾಕೃತಿಯನ್ನು ಸ್ಥಾಪಿಸಲು ಮತ್ತು ಕರ್ನಾಟಕದಾದ್ಯಂತ ಗಮನಾರ್ಹ ಕಲಾತ್ಮಕ ಮೆಚ್ಚುಗೆಯನ್ನು ಗಳಿಸಿದ ಕಲಾಕೃತಿಯಾದ ಮಹಾತ್ಮ ಗಾಂಧಿ ಭಾವಚಿತ್ರವನ್ನು ಹಸ್ತಾಂತರಿಸಲು 25,84,200 ರೂ.ಗಳನ್ನು ಮಂಜೂರು ಮಾಡಲಾಯಿತು.

ಭಾವಚಿತ್ರಗಳಿಗೆ ಸುಮಾರು 68 ಲಕ್ಷ ರೂ. ಮತ್ತು ಸ್ಪೀಕರ್ ಕುರ್ಚಿಗೆ 43 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಅಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗಿದೆ ಮತ್ತು ಖರ್ಚುಗಳನ್ನು ಯಾರು ಅಧಿಕೃತಗೊಳಿಸಿದ್ದಾರೆ ಎಂದು ನಾಗರಿಕರು ಹೆಚ್ಚಾಗಿ ಪ್ರಶ್ನಿಸುತ್ತಿದ್ದಾರೆ ಎಂದು ಗಡಾದ್ ಹೇಳಿದರು. ಪ್ರವಾಸೋದ್ಯಮ ಇಲಾಖೆಯಲ್ಲಿರುವಂತೆಯೇ ಈ ಕಲಾಕೃತಿಗಳಿಗೆ ಉಚಿತ ಸಾರ್ವಜನಿಕ ಪ್ರವೇಶವನ್ನು ಅನುಮತಿಸಲು ಮತ್ತು ಮಾರ್ಗದರ್ಶಿಗಳನ್ನು ನೇಮಿಸಲು ಸರ್ಕಾರವನ್ನು ಅವರು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.