BTS 2025: ಶೇ.37 ರಷ್ಟು ಮಾಲಿನ್ಯ ಕಡಿತ- ಪ್ರಿಯಾಂಕ್ ಖರ್ಗೆ
"ಹೆಚ್ಚಿದ ಮೆಟ್ರೋ ಬಳಕೆ ಮತ್ತು ಸಂಬಂಧಿತ ಉಪಕ್ರಮಗಳಿಂದ ಶೇ. 37 ರಷ್ಟು ಇಂಗಾಲ ಹೊರಸೂಸುವಿಕೆಯಲ್ಲಿ ಕಡಿತ ಸಾಧಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

ಬೆಂಗಳೂರು: ನವೆಂಬರ್ 20 ರಂದು ಮುಕ್ತಾಯಗೊಂಡ ಬೆಂಗಳೂರು ಟೆಕ್ ಶೃಂಗಸಭೆ (BTS) 2025 ರಲ್ಲಿ ಇಂಗಾಲ ಹೊರಸೂಸುವಿಕೆಯಲ್ಲಿ ಶೇ. 37 ರಷ್ಟು ಕಡಿತ ಸಾಧಿಸಿರುವುದಾಗಿ ಪ್ರಿಯಾಂಕ್ ಖರ್ಗೆ ಭಾನುವಾರ ಘೋಷಿಸಿದ್ದಾರೆ. ಖರ್ಗೆ ನೇತೃತ್ವದಲ್ಲಿ ಶೃಂಗಸಭೆ ನಡೆಸಲಾಯಿತು.
"ಹೆಚ್ಚಿದ ಮೆಟ್ರೋ ಬಳಕೆ ಮತ್ತು ಸಂಬಂಧಿತ ಉಪಕ್ರಮಗಳಿಂದ ಇಂಗಾಲ ಹೂರಸೂಸುವಿಕೆಯಲ್ಲಿ ಶೇ. 37 ರಷ್ಟು ಕಡಿತ ಸಾಧಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರತಿನಿಧಿಗಳಿಗೆ 5,000ಕ್ಕೂ ಹೆಚ್ಚು ಬಾರಿ ಉಚಿತವಾಗಿ ಮೆಟ್ರೋದಲ್ಲಿ ಕರೆದೊಯ್ಯಲಾಗಿದೆ. ಇದರರ್ಥ ಸ್ಥಳಕ್ಕೆ 5,000 ಕಡಿಮೆ ವಾಹನದ ಪ್ರಯಾಣ ಎಂಬುದಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಸುಮಾರು 92,500 ಜನರು ಭಾಗವಹಿಸಿದ್ದ ಶೃಂಗಸಭೆಯಲ್ಲಿ 9,700 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗಿತ್ತು. ಅದನ್ನೆಲ್ಲ ಮರುಬಳಕೆ ಮಾಡಲಾಗಿದೆ. ಸುಸ್ಥಿರತೆ ಜಾಗೃತಿಯಾಗಿ ಸುಮಾರು 12,000 ಭಾಗವಹಿಸಿದ್ದ ಶೃಂಗಸಭೆಯಲ್ಲಿ 850 ಮಳಿಗೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಹೇಳಿದ್ದಾರೆ.
"ನಾವೀನ್ಯತೆ ಮತ್ತು ಸುಸ್ಥಿರತೆ ಒಟ್ಟಿಗೆ ಹೋಗಬಹುದು ಮತ್ತು ಬೆಳೆಯಬಹುದು ಎಂಬುದನ್ನು ಬಿಟಿಎಸ್ ತೋರಿಸುವುದನ್ನು ಮುಂದುವರೆಸಿದೆ" ಎಂದು ಖರ್ಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



