ರಾಜ್ಯ

Bengaluru: ಲೈಟ್ ಆಫ್ ಮಾಡುವ ವಿಚಾರಕ್ಕೆ ಗಲಾಟೆ; ಡಂಬಲ್ ನಲ್ಲಿ ಸಹೋದ್ಯೋಗಿ ಹತ್ಯೆ; ಪೊಲೀಸರಿಗೆ ವ್ಯಕ್ತಿ ಶರಣು!

ನಗರದ ಗೋವಿಂದರಾಜ ನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸೋಮಲ ವಂಶಿ (24) ಎಂಬಾತ ತನ್ನ ಸಹೋದ್ಯೋಗಿ ಭೀಮೇಶ್ ಬಾಬು (41) ಎಂಬುವವರನ್ನು ಹತ್ಯೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ.

Bengaluru: ಲೈಟ್ ಆಫ್ ಮಾಡುವ ವಿಚಾರಕ್ಕೆ ಗಲಾಟೆ; ಡಂಬಲ್ ನಲ್ಲಿ ಸಹೋದ್ಯೋಗಿ ಹತ್ಯೆ; ಪೊಲೀಸರಿಗೆ ವ್ಯಕ್ತಿ ಶರಣು!
ಡಂಬಲ್ (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಕಚೇರಿಯ ಲೈಟ್ ಆಫ್ ಮಾಡುವ ವಿಚಾರಕ್ಕೆ ರಾತ್ರಿ ಪಾಳಿ ಕೆಲಸಗಾರರ ನಡುವೆ ಆರಂಭವಾದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಗೋವಿಂದರಾಜ ನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸೋಮಲ ವಂಶಿ (24) ಎಂಬಾತ ತನ್ನ ಸಹೋದ್ಯೋಗಿ ಭೀಮೇಶ್ ಬಾಬು (41) ಎಂಬುವವರನ್ನು ಹತ್ಯೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ.

ಮೂಲಗಳ ಪ್ರಕಾರ ಗೋವಿಂದರಾಜ ನಗರ ಠಾಣೆ ವ್ಯಾಪ್ತಿಯಲ್ಲಿರುವ ಸಿನಿಮಾ ಚಿತ್ರೀಕರಣದ ವಿಡಿಯೋಗಳನ್ನು ದಿನದ ಆಧಾರದಲ್ಲಿ ಸಂಗ್ರಹಿಸಿಡುವ ಕಂಪನಿಯಲ್ಲಿ ವಿಜಯವಾಡ ಮೂಲದ ಸೋಮಲ ವಂಶಿ ಹಾಗೂ ಚಿತ್ರದುರ್ಗ ಮೂಲದ ಭೀಮೇಶ್ ಬಾಬು ಕೆಲಸ ಮಾಡಿಕೊಂಡಿದ್ದರು.

ಕಚೇರಿಯಲ್ಲಿ ರಾತ್ರಿ ತಂಗುತ್ತಿದ್ದ ಈ ಇಬ್ಬರ ನಡುವೆ ತಡರಾತ್ರಿ 1:30ರ ಸುಮಾರಿಗೆ ಲೈಟ್ ಆಫ್ ಮಾಡುವ ವಿಚಾರದಲ್ಲಿ ಪರಸ್ಪರ ಜಗಳ ಆರಂಭವಾಗಿದೆ. ಈ ಸಮಯದಲ್ಲಿ ಕೋಪಗೊಂಡ ಸೋಮಲ ವಂಶಿ ಕಚೇರಿಯಲ್ಲಿದ್ದ ಡಂಬೆಲ್‌ನಿಂದ ಭೀಮೇಶ್ ಬಾಬುವಿನ ಹಣೆಯ ಮೇಲೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಭೀಮೇಶ್ ಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪೊಲೀಸರಿಗೆ ಆರೋಪಿ ಶರಣು

ಕೃತ್ಯದ ಬಳಿಕ ಆರೋಪಿ ಸೋಮಲ ವಂಶಿ ಸ್ವತಃ ತಾತೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.