ಜಾಗೃತಿ ಅಭಿಯಾನ ಬಳಿಕ ನಗರದಲ್ಲಿ Cybercrime ಪ್ರಕರಣಗಳು ಇಳಿಕೆ..!
ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಶೇ.30ರಷ್ಟು ಇಳಿಕೆಯಾಗಿದ್ದು, ಇದರ ಜೊತೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಪ್ರಕರಣಗಳಲ್ಲಿ ಶೇಕಡಾ 12 ರಷ್ಟು ಮತ್ತು ಆಸ್ತಿ ಸಂಬಂಧಿತ ಅಪರಾಧಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ಬೆಂಗಳೂರು: ಹಿಂದಿನ ಎರಡು ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇಕಡಾ 30ರಷ್ಟು ಇಳಿಕೆ ಕಂಡುಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಶೇ.30ರಷ್ಟು ಇಳಿಕೆಯಾಗಿದ್ದು, ಇದರ ಜೊತೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಪ್ರಕರಣಗಳಲ್ಲಿ ಶೇಕಡಾ 12 ರಷ್ಟು ಮತ್ತು ಆಸ್ತಿ ಸಂಬಂಧಿತ ಅಪರಾಧಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಹೇಳಿದರು.
2023 ರ ಮೊದಲ ಮೂರು ತಿಂಗಳಲ್ಲಿ ನಗರದಲ್ಲಿ 3,588 ಸೈಬರ್ ಅಪರಾಧ ಪ್ರಕರಣಗಳು, 2024 ರಲ್ಲಿ 4,679 ಪ್ರಕರಣಗಳು ದಾಖಲಾಗಿದ್ದವ. 2025 ರಲ್ಲಿ 2,838 ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಗಂಭೀರ ಅಪರಾಧಗಳು ಮತ್ತು ಆಸ್ತಿ ಅಪರಾಧಗಳು ಕೂಡ ಕಡಿಮೆಯಾಗಿವೆ, ದರೋಡೆ ಪ್ರಕರಣಗಳಲ್ಲಿ ಶೇಕಡಾ 73 ರಷ್ಟು, ಡಕಾಯಿತಿಗಳಲ್ಲಿ ಶೇಕಡಾ 71 ರಷ್ಟು ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಶೇಕಡಾ 57 ರಷ್ಟು ಇಳಿಕೆಯಾಗಿದೆ.
ಜಾಗೃತಿ ಅಭಿಯಾನಗಳಿಂದಾಗಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. OTP ಮತ್ತು KYC ವಂಚನೆ ಪ್ರಕರಣಗಳೂ ಕೂಡ ಕಡಿಮೆಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಆನ್‌ಲೈನ್ ಪೊಲೀಸ್ ಅಭಿಯಾನಗಳ ಬೃಹತ್ ಜಾಗೃತಿ ಅಭಿಯಾನಗಳ ಕಳೆದ ವರ್ಷ ಭೀತಿಯನ್ನುಂಟುಮಾಡಿದ್ದ ಡಿಜಿಟಲ್ ಅರೆಸ್ಟ್ ಮತ್ತು ಫೆಡ್‌ಎಕ್ಸ್ ವಂಚನೆಗಳೂ ಕೂಡ ಇಳಿಕೆ ಕಂಡಿವೆ.
ಅಪರಾಧ ದರಗಳಲ್ಲಿನ ಒಟ್ಟಾರೆ ಕುಸಿತಕ್ಕೆ ಸುಧಾರಿತ ಪೊಲೀಸ್ ತಂತ್ರಗಳು, ಪ್ರಮುಖ ನಗರ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕ ಸುರಕ್ಷತಾ ಜಾಗೃತಿ ಉಪಕ್ರಮಗಳು ಕಾರಣವಾಗಿವೆ ಎಂದು ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



