ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ದ್ವಿಚಕ್ರ ಸವಾರನ ವಿರುದ್ಧ ದೂರು ದಾಖಲು, ಕಾಮುಕನಿಗಾಗಿ ಪೊಲೀಸರ ಹುಡುಕಾಟ
ಯುವತಿ ಇಕೋ ವರ್ಲ್ಡ್ ಮುಖ್ಯ ಗೇಟ್ ಬಳಿ ನಡೆದು ಹೋಗುತ್ತಿದ್ದು, ಈ ವೇಳೆ ನೇರಳೆ ಬಣ್ಣದ ಟಿ ಶರ್ಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದಿದ್ದಾನೆ.

ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದ ಕಾಮುಕನೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ದೇವರಬೀಸನಹಳ್ಳಿ ಇಕೋ ವರ್ಲ್ಡ್ ಮುಖ್ಯ ಗೇಟ್ ಬಳಿ ಏ.30ರಂದು ನಡೆದಿದೆ.
26 ವರ್ಷದ ಯುವತಿ ಇಕೋ ವರ್ಲ್ಡ್ ಮುಖ್ಯ ಗೇಟ್ ಬಳಿ ನಡೆದು ಹೋಗುತ್ತಿದ್ದು, ಈ ವೇಳೆ ನೇರಳೆ ಬಣ್ಣದ ಟಿ ಶರ್ಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದಿದ್ದಾನೆ. ಈ ವೇಳೆ ಏಕಾಏಕಿ ಯುವತಿಯ ಬೆನ್ನ ಕೆಳ ಭಾಗಕ್ಕೆ ಕೈನಿಂದ ಜೋರಾಗಿ ಹೊಡೆದು ಮುಂದೆ ಹೋಗಿದ್ದಾನೆ.
ಬಳಿಕ ಸ್ವಲ್ಪ ದೂರು ಮುಂದೆ ಹೋಗಿ ತಿರುವು ಪಡೆದು ಮತ್ತೆ ಯುವತಿ ಬಳಿ ಬಂದಿರುವ ಅಪರಿಚಿತ, ಮತ್ತೊಮ್ಮೆ ಯುವತಿ ಹಿಂಭಾಗಕ್ಕೆ ಕೈನಿಂದ ಜೋರಾಗಿ ಹೊಡೆದು ಪರಾರಿಯಾಗಿದ್ದಾನೆ. ಅಪರಿಚಿತ ವ್ಯಕ್ತಿಯ ಧರಿಸಿದ್ದ ನೇರಳೆ ಬಣ್ಣದ ಟಿ ಶರ್ಟ್ ಮೇಲೆ ಈಟ್ ಕ್ಲಬ್ ಎಂಬ ಬರಹ ಇರುವುದು ಕಂಡು ಬಂದಿತ್ತು ಯುವದಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಘಟನೆ ವೇಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇತರರ ನೆರವು ಕೇಳಲಾಗಿತ್ತು. ಆದರೆ, ಯಾರೊಬ್ಬರೂ ಸಹಾಯ ಮಾಡಲಿಲ್ಲ ಎಂದೂ ಯುವಿ ಹೇಳಿಕೊಂಡಿದ್ದಾಳೆ.
ಈ ಸಂಬಂಧ ಮಾರತ್ತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾಮುಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆರೋಪಿ ವಿರುದ್ಧ ಬಿಎನ್'ಎಸ್ ಸೆಕ್ಷನ್ 74 ಮತ್ತು 78 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಪರಿಚಿತನ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



