ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ APSRTC ಚಾಲಕನ ಮೇಲೆ KSRTC ಡ್ರೈವರ್ ಹಲ್ಲೆ; ಅಮಾನತು
ಬೆಂಗಳೂರು ಬಸ್ ನಿಲ್ದಾಣದಲ್ಲಿ ಚಾಲಕರ ನಡುವೆ ವಾಗ್ವಾಗ ಆರಂಭವಾಯಿತು. ಪ್ರೊದಟ್ಟೂರು ಡಿಪೋದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಅಂದ್ರ ಪ್ರದೇಶ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಬೆಂಗಳೂರಿನಲ್ಲಿ ಕೆಎಸ್ ಆರ್ ಟಿ ಸಿ ಚಾಲಕ ಹಲ್ಲೆ ನಡೆಸಿದ್ದು, ಈ ಸಂಬಂಧ KSRTC ಚಾಲಕ ಅಮಾನತುಗೊಳಿಸಲಾಗಿದೆ.
ಬೆಂಗಳೂರು ಬಸ್ ನಿಲ್ದಾಣದಲ್ಲಿ ಚಾಲಕರ ನಡುವೆ ವಾಗ್ವಾಗ ಆರಂಭವಾಯಿತು. ಪ್ರೊದಟ್ಟೂರು ಡಿಪೋದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ರಾತ್ರಿ 10:45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದ್ದ ಕೆಎಸ್ ಆರ್‌ಟಿಸಿ ಚಾಲಕ ಹನುಮಂತು ಬೆಲಿವಿಡಿ ಅವರನ್ನು ಅಮಾನತುಗೊಳಿಸಲಾಗಿದೆ.
ಕದಿರಿ ಡಿಪೋದ ಆರ್‌ಟಿಸಿ ಚಾಲಕ ಎನ್‌ಆರ್‌ಎಸ್ ರೆಡ್ಡಿ ತಮ್ಮ ಬಸ್ ಅನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿದ್ದರು. ಈ ವೇಳೆ ಹನುಮಂತು ತಪ್ಪು ಮಾರ್ಗದಿಂದ ಆ ಪ್ರದೇಶಕ್ಕೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಘರ್ಷಣೆ ಪ್ರಾರಂಭವಾಯಿತು. ಕದಿರಿ ಬಸ್ ತನ್ನ ದಾರಿಯನ್ನು ತಡೆಯುತ್ತಿದ್ದರಿಂದ ಸಿಟ್ಟಿಗೆದ್ದ ಹನುಮಂತು ಚಾಲಕನಿಗೆ ನಿಂದಿಸಿದ್ದಾರೆ. ಈ ವೇಳೆ ಕಡಪ ಮತ್ತು ಪ್ರೊದಟ್ಟೂರು ಆರ್‌ಟಿಸಿ ಚಾಲಕರು ಕದಿರಿ ಚಾಲಕನಿಗೆ ಬೆಂಬಲ ನೀಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ವಾಗ್ವಾದದ ಸಮಯದಲ್ಲಿ, ಹನುಮಂತು ಎನ್‌ಆರ್‌ಎಸ್ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿ, ವೋಲ್ವೋ ಬಸ್ ಗೇರ್ ಲಿವರ್‌ನಿಂದ ಅವರ ತಲೆಗೆ ಹೊಡೆದು ತೀವ್ರ ಗಾಯಗಳಾಗಿದ್ದವು. ರಾತ್ರಿ 11:20 ಕ್ಕೆ, ಸಹ ಚಾಲಕರು ಮತ್ತು ರೆಡ್ಡಿ ಅವರನ್ನು ಚಿಕಿತ್ಸೆಗಾಗಿ ಶ್ರೀನಿವಾಸ ಆಸ್ಪತ್ರೆಗೆ ಕರೆದೊಯ್ದರು.
ಪ್ರಾಥಮಿಕ ಆರೈಕೆಯ ನಂತರ, ಅವರನ್ನು ರನ್ನಿಂಗ್ ರೂಮ್‌ಗೆ ಸ್ಥಳಾಂತರಿಸಲಾಯಿತು. ಶುಕ್ರವಾರ, ಕೆಎಸ್ ಆರ್ ಟಿಸಿ ಅಧಿಕಾರಿಗಳು ರೆಡ್ಡಿ ಅವರನ್ನು ವಿಚಾರಣೆಗೆ ಕರೆದಿದ್ದರು. ಈ ವೇಳೆ ತಲೆ ಸುತ್ತುತ್ತಿದೆ ಎಂದು ರೆಡ್ಡಿ ತಿಳಿಸಿದ್ದಾರೆ, ಆ ನಂತರ ಮಲ್ಲಿಗೆ ಆಸ್ಪತ್ರೆಗೆ ಸಿಟಿ ಸ್ಕ್ಯಾನ್‌ಗಾಗಿ ಕರೆದೊಯ್ಯಲಾಯಿತು, ಪರೀಕ್ಷೆ ನಂತರ ಅವರಿಗೆ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿಲ್ಲ ಎಂದು ತಿಳಿಸಲಾಯಿತು.
ಜಿಲ್ಲಾ ಸಾರ್ವಜನಿಕ ಸಾರಿಗೆ ಅಧಿಕಾರಿ ಗೋಪಾಲ್ ರೆಡ್ಡಿ ಅವರು ಆರ್‌ಟಿಸಿ ಎಂಡಿ ದ್ವಾರಕಾ ತಿರುಮಲ ರಾವ್ ಮತ್ತು ಕಡಪ ಆರ್‌ಟಿಸಿ ವಲಯ ಅಧ್ಯಕ್ಷ ಪೂಲಾ ನಾಗರಾಜು ಅವರಿಗೆ ಮಾಹಿತಿ ನೀಡಿದರು, ಅವರು ರೆಡ್ಡಿಗೆ ವೈದ್ಯಕೀಯ ಆರೈಕೆ ಮತ್ತು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಗಾಯಗೊಂಡ ಚಾಲಕನನ್ನು ಭೇಟಿ ಮಾಡಿದ ನಾಗರಾಜು ಧೈರ್ಯ ತುಂಬಿದರು.
ಕರ್ನಾಟಕ ಆರ್‌ಟಿಸಿ ಅಧಿಕಾರಿಗಳು ಹನುಮಂತು ಬೆಲಿವಿಡಿ ಅವರನ್ನು ಅಮಾನತುಗೊಳಿಸಿದರು. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಆರ್‌ಟಿಸಿ ಅಗತ್ಯ ಸಹಾಯವನ್ನು ನೀಡಲಿದೆ ಎಂದು ಗೋಪಾಲ್ ರೆಡ್ಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



