ಕನಕಪುರ: ಮಗುವಿಗೆ ಚಾಕುವಿನಿಂದ ಬರೆ, ಡೈಪರ್ ಗೆ ಖಾರದಪುಡಿ ಹಾಕಿ ಅಂಗನವಾಡಿ ಸಹಾಯಕಿ ಕ್ರೌರ್ಯ
ಅಂಗನವಾಡಿ ಮುಗಿದ ಮೇಲೆ ಮಗನನ್ನು ಕರೆ ತರಲು ದೀಕ್ಷಿತ್ ತಾಯಿ ಚೈತ್ರಬಾಯಿ ಅಂಗನವಾಡಿ ಬಳಿ ಹೋದಾಗ ಮಗು ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ, ಕೈ ಮೇಲೆ ಬರೆ ಹಾಕಿರುವುದು ಹಾಗೂ ಡೈಪರ್ಗೆ ಖಾರದಪುಡಿ ತುಂಬಿರುವುದು ಕಂಡು ಬಂದಿದೆ.

ಕನಕಪುರ: ಎರಡೂವರೆ ವರ್ಷದ ಮಗುವಿಗೆ ಅಂಗನವಾಡಿ ಸಹಾಯಕಿ ಒಬ್ಬರು ಚಾಕುವಿನಿಂದ ಬರೆ ಹಾಕಿ ಡೈಪರ್ ಗೆ ಖಾರದಪುಡಿ ಹಾಕಿ ಕ್ರೌರ್ಯ ಮೆರೆದಿರುವ ಆರೋಪ ಕೇಳಿಬಂದಿದೆ.
ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಜ್ಯೋತಿ ಮತ್ತು ರಮೇಶ್ ನಾಯ್ಕ್ ಅವರ ಮಗ ದೀಕ್ಷಿತ್ (2.5) ಸಂತ್ರಸ್ತ ಬಾಲಕ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಕ್ಷಿತ್ ಎಂಬ ಮಗುವಿನ ಮೇಲೆ ಅಮಾನವೀಯತೆಯಿಂದ ಕೈ ಮೇಲೆ ಕಾದ ಚಾಕುವಿನಿಂದ ಬರೆ ಹಾಕಿದ್ದಲ್ಲದೆ ಡೈಪರ್ ಗೆ ಖಾರದಪುಡಿ ಹಾಕಿದ್ದಾಳೆ.
ಮಂಗಳವಾರ ಅಂಗನವಾಡಿ ಮುಗಿದ ಮೇಲೆ ಮಗನನ್ನು ಕರೆ ತರಲು ದೀಕ್ಷಿತ್ ತಾಯಿ ಚೈತ್ರಬಾಯಿ ಅಂಗನವಾಡಿ ಬಳಿ ಹೋದಾಗ ಮಗು ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ, ಕೈ ಮೇಲೆ ಬರೆ ಹಾಕಿರುವುದು ಹಾಗೂ ಡೈಪರ್ಗೆ ಖಾರದಪುಡಿ ತುಂಬಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ.
ಕೃತ್ಯ ಎಸಗಿದ ಅಂಗನವಾಡಿ ಸಹಾಯಕಿ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಸಿಡಿಪಿಒ ವಿ.ನಾರಾಯಣ್ ತಿಳಿಸಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಚಂದ್ರಮ್ಮ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಮನೆಯಲ್ಲಿನ ಒತ್ತಡದಿಂದ ಮಗುವಿಗೆ ಈ ರೀತಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅಂಗನವಾಡಿ ಸಹಾಯಕಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



