ರಾಜ್ಯ

ಬೆಂಗಳೂರು ಮೆಟ್ರೋ ಹಂತ-3: ಸುಂಕದಕಟ್ಟೆಯಲ್ಲಿ ಡಿಪೋ ನಿರ್ಮಾಣಕ್ಕೆ ಕಾನೂನು ತೊಡಕು; ಹೈಕೋರ್ಟ್ ನಲ್ಲಿ ಜಮೀನು ವಿವಾದ!

ಹಂತ-3 ಎರಡು ಮಾರ್ಗಗಳಲ್ಲಿ 31 ನಿಲ್ದಾಣಗಳನ್ನು ಒಳಗೊಂಡಿದೆ. ಕಾರಿಡಾರ್ 1: ಜೆಪಿ ನಗರ ಹಂತ 4 ರಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಉದ್ದವಿದೆ. ಕಾರಿಡಾರ್ 2 ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀವರೆಗೆ ಮಾಗಡಿ ರಸ್ತೆಯಲ್ಲಿ ಸಾಗುತ್ತದೆ.

ಬೆಂಗಳೂರು ಮೆಟ್ರೋ ಹಂತ-3: ಸುಂಕದಕಟ್ಟೆಯಲ್ಲಿ ಡಿಪೋ ನಿರ್ಮಾಣಕ್ಕೆ ಕಾನೂನು ತೊಡಕು; ಹೈಕೋರ್ಟ್ ನಲ್ಲಿ ಜಮೀನು ವಿವಾದ!
ಡಿಪೋಗಾಗಿ ಸುಂಕದಕಟ್ಟೆಯಲ್ಲಿ ಗುರುತಿಸಲಾದ ಜಮೀನು
Published On :

ಬೆಂಗಳೂರು: ಕೇಂದ್ರ ಮತ್ತು ರಾಜ್ಯದಿಂದ ಅನುಮೋದಿಸಲಾದ ನಮ್ಮ ಮೆಟ್ರೋ ಹಂತ-3 ಅನುಷ್ಠಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು BMRCL ವೇಗಗೊಳಿಸಿರುವಂತೆಯೇ, ಡಿಪೋ ನಿರ್ಮಿಸಲು ಅಗತ್ಯವಿರುವ ಜಮೀನು ವಿವಾದ ಹೈಕೋರ್ಟ್‌ನಲ್ಲಿದೆ.

ಸುಂಕದಕಟ್ಟೆಯಲ್ಲಿನ ಜಮೀನು ತನಗೆ ಸೇರಿದ್ದು ಎಂದು ರಾಜ್ಯ ಸರ್ಕಾರ ಮತ್ತು ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ಹೇಳುತ್ತಿವೆ.

ಸುಂಕದಕಟ್ಟೆಯಲ್ಲಿ ಡಿಪೋ: ಹಂತ-3 ಎರಡು ಮಾರ್ಗಗಳಲ್ಲಿ 31 ನಿಲ್ದಾಣಗಳನ್ನು ಒಳಗೊಂಡಿದೆ. ಕಾರಿಡಾರ್ 1: ಜೆಪಿ ನಗರ ಹಂತ 4 ರಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಉದ್ದವಿದೆ. ಕಾರಿಡಾರ್ 2 ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀವರೆಗೆ ಮಾಗಡಿ ರಸ್ತೆಯಲ್ಲಿ ಸಾಗುತ್ತದೆ. ಸುಂಕದಕಟ್ಟೆಯಲ್ಲಿ ಎರಡೂ ಲೈನ್‌ಗಳ ಡಿಪೋಗೆ ಯೋಜನೆ ರೂಪಿಸಲಾಗಿದೆ.

ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್

ಈ ಕುರಿತು TNIE ಜೊತೆಗೆ ಮಾತನಾಡಿದ BMRCLಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ (ಪ್ರಭಾರ) ಡಾ.ಯತೀಶ್ ಉಳ್ಳಾಲ್, ಸುಂಕದಕಟ್ಟೆಯಲ್ಲಿ ಡಿಪೋ ಮಾಡಲು ನಮಗೆ 78.5 ಎಕರೆ ಜಮೀನು ಬೇಕು. ಡಿಪಿಆರ್ ತಯಾರಿಸುವಾಗ ಸರ್ಕಾರಿ ಭೂಮಿಯಾಗಿದೆ ಎಂದು ಭೂ ನ್ಯಾಯಮಂಡಳಿ ಘೋಷಿಸಿತು. ಅಲ್ಲದೆ ಇದೇ ಭೂಮಿಯನ್ನು APMC ಮಾರುಕಟ್ಟೆ ಉದ್ದೇಶಕ್ಕಾಗಿ ವಶಕ್ಕೆ ಪಡೆಯಲು 1994 ರಲ್ಲಿ ಬೆಂಗಳೂರು ನಗರ ಜಿಲ್ಲೆ ವಿಶೇಷ ಭೂ ಸ್ವಾಧೀನ ಅಧಿಕಾರಿ ನೋಟಿಫಿಕೇಷನ್ ಕೂಡಾ ಹೊರಡಿಸಿದ್ದಾರೆ. ಆದರೆ ಈ ಭೂಮಿ ತನ್ನದು ಎಂದು ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದೆ. ಒಂದು ವೇಳೆ ಆ ಜಮೀನು ಟ್ರಸ್ಟ್ ಗೆ ಸೇರಿದರೆ ನ್ಯಾಯಯತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸೂಚನೆ: ರಿಟ್ ಅರ್ಜಿಗೆ ಸ್ಪಂದಿಸಿದ ಕರ್ನಾಟಕ ಹೈಕೋರ್ಟ್ 2025ರ ಫೆ.2ರಂದು ರಾಜ್ಯ ಸರಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಪರ ತೀರ್ಪು ನೀಡಿ, ಈ ಜಮೀನು ಎಪಿಎಂಸಿಗೆ ಸೇರಿದ್ದು ಎಂದು ತಿಳಿಸಿತ್ತು. ಈ ತೀರ್ಪಿನ ವಿರುದ್ಧ ಟ್ರಸ್ಟ್ ಮೇಲ್ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.

1960ರಲ್ಲಿ ಸುಂಕದಕಟ್ಟೆಯಲ್ಲಿ 200 ಎಕರೆಗೂ ಹೆಚ್ಚು ಜಾಗವನ್ನು ಖಾಸಗಿ ಮಾಲೀಕರಿಂದ ಖರೀದಿಸಿದ್ದೇವೆ ಎಂಬುದು ಟ್ರಸ್ಟ್‌ನ ವಾದ. "ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಿದೆ ಎಂದು GM ವಿವರಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.