ರಾಜ್ಯ

ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ; 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಹಿಮಾ-ಅರುಣ್ಯ!

ಫೆಬ್ರವರಿ 14ರಂದು ಆರು ವರ್ಷದ 'ಹಿಮಾ' ಹೆಸರಿನ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕಟಿಸಿದೆ.

ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ; 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಹಿಮಾ-ಅರುಣ್ಯ!
ಸಂಗ್ರಹ ಚಿತ್ರ — PTI
Published On :

ಬೆಂಗಳೂರು: ಫೆಬ್ರವರಿ 14ರಂದು ಆರು ವರ್ಷದ 'ಹಿಮಾ' ಹೆಸರಿನ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕಟಿಸಿದೆ.

ಅಧಿಕಾರಿಗಳ ಪ್ರಕಾರ, 'ಹಿಮಾ' 2024ರ ಜೂನ್ ನಲ್ಲಿ ತನ್ನ ಮೊದಲ ಮರಿಗಳಿಗೆ ಜನ್ಮ ನೀಡಿತು. ಇದೀಗ ಎರಡನೇ ಬಾರಿಗೆ ಮರಿಗಳನ್ನು ಹಾಕಿದೆ. ತಾಯಿ ಮತ್ತು ಮರಿಗಳು ಎರಡೂ ಆರೋಗ್ಯವಾಗಿವೆ.

ಫೆಬ್ರವರಿ 16ರಂದು 'ಅರುಣ್ಯ' ಹೆಸರಿನ ಹುಲಿ ಮೊದಲ ಬಾರಿಗೆ ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮರಿಗಳನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಚೆನ್ನೈನ ಅರಿಗ್ನಾರ್ ಅನ್ನಾ ಪ್ರಾಣಿಶಾಸ್ತ್ರ ಉದ್ಯಾನವನದಿಂದ ತರಿಸಿಕೊಳ್ಳಲಾಗಿತ್ತು. ತಾಯಿ ಮತ್ತು ಮರಿಗಳು ಎರಡೂ ಆರೋಗ್ಯವಾಗಿವೆ ಎಂದು ಜೈವಿಕ ಉದ್ಯಾನವನವು ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.