ಚಿಕಿತ್ಸೆ ಕೊಡಿಸಲು ರಜೆ ಸಿಗಲಿಲ್ಲ, ಮಗ ಬದುಕಿ ಉಳಿಯಲಿಲ್ಲ: ವೈರಲ್ ಆಯ್ತು ವಿಜಯಪುರ ಕಾನ್ಸ್‌ಟೇಬಲ್ ಮನಕಲುಕುವ ಪೋಸ್ಟ್
ಗಾಂಧಿ ಔಕ್ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ A.S.ಬಂಡುಗೊಳ ಅವರ ನವಜಾತ ಶಿಶು ಅನಾರೋಗ್ಯದಿಂದ ಮೃತಪಟ್ಟಿದೆ. ಬೆನ್ನಲ್ಲೇ A.S.ಬಂಡುಗೊಳ ಅವರು ಮಾಡಿರುವ ಮೆಸೇಜ್ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಜಯಪುರ: ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ನನ್ನ ಮಗ ಉಳಿಯಲಿಲ್ಲ… ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು… ನನಗೆ ಬಹಳ ನೋವಾಗಿದೆ ಈ ರೀತಿ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಘಟನೆ ನಡೆದಿದೆ.
ಗಾಂಧಿ ಔಕ್ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ A.S.ಬಂಡುಗೊಳ ಅವರ ನವಜಾತ ಶಿಶು ಅನಾರೋಗ್ಯದಿಂದ ಮೃತಪಟ್ಟಿದೆ. ಬೆನ್ನಲ್ಲೇ A.S.ಬಂಡುಗೊಳ ಅವರು ಮಾಡಿರುವ ಮೆಸೇಜ್ ಭಾರೀ ಚರ್ಚೆಗೆ ಕಾರಣವಾಗಿದೆ.
ಮಗು ನಿಧನ ಬೆನ್ನಲ್ಲೇ ಪೊಲೀಸ್ ಅಧಿಕಾರಿ ಬಂಡುಗೊಳ ಅವರು ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿರುವ ಗ್ರೂಪ್ಗೆ ಮೆಸೇಜ್ ಹಾಕಿದ್ದಾರೆ. ಅದರಲ್ಲಿ ನನಗೆ ರಜೆ ಸಿಗಲಿಲ್ಲ. ಅದರಿಂದ ಮಗನಿಗೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.
ಮೆಸೇಜ್ನಲ್ಲಿ ಏನಿದೆ..?
ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ..
ಕಡೆಗೂ ನನ್ನ ಮಗ ಬದುಕಿ ಉಳಿಯಲಿಲ್ಲ..
ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು..
ನನಗೆ ಬಹಳ ನೋವಾಗಿದೆ..
ಇಂತಿ ನಿಮ್ಮ AS ಬಂಡುಗೋಳ
ಹೀಗೆ ಬರೆದು ಪೊಲೀಸ್ ಸಿಬ್ಬಂದಿ ಇರುವ ಗ್ರೂಪ್ಗೆ ಮೆಸೇಜ್ ಹಾಕಿದ್ದಾರೆ. ಅಲ್ಲದೇ ಐಸಿಯುನಲ್ಲಿದ್ದ ಮಗುವಿನ ಫೋಟೋವನ್ನೂ ಶೇರ್ ಮಾಡಿದ್ದಾರೆ. ಅಂದ್ಹಾಗೆ AS ಬಂಡುಗೋಳ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಈ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ನಿಂದ ಟ್ಯಾಗ್ ಮಾಡಲಾಗಿದೆ
ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, AS ಬಂಡುಗೋಳ ಯಾವುದೇ ರಜೆ ಕೇಳಿಲ್ಲ. ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿ ಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ ರಜೆ ಕೇಳಿಲ್ಲ. ನಿನ್ನೆ ಹಾಗೂ ಇಂದು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


