Karnataka: ಸೌಂದರ್ಯ ವರ್ಧಕಗಳು ಸೇರಿ 15 ಔಷಧಿಗಳಿಗೆ ಆರೋಗ್ಯ ಇಲಾಖೆ ನಿಷೇಧ!
ಜ್ವರಕ್ಕೆ ಬಳಕೆ ಮಾಡುವ ಪ್ಯಾರಾಸಿಟಮೋಲ್, ಮೈಸೂರು ಮೂಲದ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ ಹಲವು ಉತ್ಪನ್ನಗಳಿವೆ. ಅಸುರಕ್ಷಿತ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಪ್ಯಾರಾಸಿಟಮೋಲ್ ಸೇರಿದಂತೆ 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ಬಳಕೆಗೆ ನಿರ್ಬಂಧ ಹೇರಿದೆ.
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ (Medicine) ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಜ್ವರಕ್ಕೆ ಬಳಕೆ ಮಾಡುವ ಪ್ಯಾರಾಸಿಟಮೋಲ್, ಮೈಸೂರು ಮೂಲದ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ ಹಲವು ಉತ್ಪನ್ನಗಳಿವೆ. ಅಸುರಕ್ಷಿತ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆಗೆ ಒಳಪಡಿಸಿತ್ತು. ತಪಾಸಣೆಯಲ್ಲಿ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ 15 ಕಾಂತಿವರ್ಧಕ ಔಷಧ ಹಾಗೂ ಔಷಧಿಗಳು ಅಸುರಕ್ಷಿತ ಎಂದು ವರದಿ ಬಂದಿದೆ.
ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ ಕಂಪನಿಗಳು ಈ ಪಟ್ಟಿಯಲ್ಲಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಸುರಕ್ಷಿತ ಔಷಧಿ ಮತ್ತು ಕಾಂತಿವರ್ಧಕಗಳ ಬಳಕೆ ಮತ್ತು ಮಾರಾಟ ಮಾಡದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಔಷಧಿ ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ಹೋಂನವರು ಈ ಪಟ್ಟಿಯಲ್ಲಿರುವ ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ದಾಸ್ತಾನು ಮಾಡುವುದನ್ನು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮನವಿಗೆ ಸ್ಪಂದಿಸದ ಸರ್ಕಾರ: ಆಂತರಿಕ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜಾಗೃತ ದಳ ರಚಿಸಲು ಲೋಕಾಯುಕ್ತ ಚಿಂತನೆ
ಪಟ್ಟಿಯಲ್ಲಿರುವ ಔಷಧಿಗಳು ಇಂತಿವೆ
ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್ ಪ್ರೈ. ಲಿಮಿಟೆಡ್.
ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೇ. ಟಾಮ್ ಬ್ರಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
ಪೋಮೋಲ್-650 (ಪ್ಯಾರಾಸಿಟಮೋಲ್ ಟ್ಯಾಬ್ಲೆಟಸ್ ಐ.ಪಿ 650 ಎಂಜಿ)- ಮೇ. ಅಬಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
ಮಿಟು ಕ್ಯೂ7 ಸಿರಪ್ – ಮೆ. ಬಯೋನ್ ಥೆರಾಪ್ಯಾಟಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್
ಸ್ಟೈರಲ್ ಡಿಲ್ಯೈಯಂಟ್ ಪಾರ್ ರೆಕಾನೋಸ್ಟಿಟಿಶ್ಯೂನ್ ಆಪ್ ಎನ್ಡಿ, ಐಬಿ, ಐಬಿಡಿ ಆ್ಯಂಡ್ ಕಾಂಬಿನೇಷನ್ ವ್ಯಾಕ್ಸಿನ್ಸ್ ಫಾರ್ ಪೌಲ್ಟ್ರೀ (ವೆಟರ್ನರಿ) ಮಲ್ಟಿ ಡೋಸ್ ವಿಲಾ 200 ಎಂಲ್ – ಮೇ. ಸೇಫ್ ಪೇರೆಂಟರಲ್ಸ್ ಪ್ರೈ. ಲಿಮಿಟೆಡ್.
ಸ್ಪಾನ್ಪ್ಲಾಕ್ಸ್-ಓಡ್ ಟ್ಯಾಬ್ಲೆಟ್ಸ್ (ಓಪ್ಲಾಕ್ಸಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ) – ಮೆ. ಇಂಡೋರಾಮ ಹೇಲ್ತ್ ಕೇಸ್ ಪ್ರೈ ಲಿಮಿಟಿಡ್.
ಪ್ಯಾಂಟೋಕೋಟ್-ಡಿಎಸ್ಆರ್ (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ-ರಿಜಿಸ್ಟೆಂಟ್ & ಡೋಮ್ಫೆರಿಡನ್ ಪ್ರೋಕಾಂಗಡ್ ರಿಲಿಸ್ ಕ್ಯಾಪ್ಸೂಲ್ಸ್ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್
ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್.
ಅಲ್ಪಾ ಲಿಪೋಯಿಕ್ ಆಸಿಡ್, ಪೋಲಿಕ್ ಆಸಿಡ್, ಮಿಥೈಲ್ ಕೋಬಾಲಮಿನ್, ವಿಟಮಿನ್ ಬಿ6 & ವಿಟಮಿನ್ ಡಿ3ಟ್ಯಾಬ್ಲೆಟ್ಸ್ – ಮೇ. ಇಸ್ಟ್ ಆಪ್ರಿಕನ್ (ಇಂಡಿಯಾ) ಓವರ್ಸಿಸ್.
ಓ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್ – ಮೇ. ಎನ್. ರಂಗರಾವ್ & ಸನ್ಸ್ ಪ್ರೈ ಲಿಮಿಟೆಡ್.
ಪಿರಾಸಿಡ್-ಓ ಸಸ್ಪೆನ್ಶನ್ (ಸಲ್ಕ್ರಾಲ್ಫೇಟ್ & ಆಕ್ಸೆಟಾಕೈನ್ ಸಸ್ಪೆನ್ಶನ್) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್ ಪ್ರೈ ಲಿಮಿಟೆಡ್.
ಗ್ಲಿಮಿಜ್-2 (ಗ್ಲಿಮಿಫೆರೈಡ್ ಟ್ಯಾಬ್ಲೆಟ್ಸ್ ಐಪಿ 2ಎಂಜಿ) – ಮೆ. ಕೆಎನ್ಎಂ ಫಾರ್ಮಾ ಪ್ರೈ. ಲಿಮಿಟೆಡ್.
ಐರನ್ ಸುಕ್ರೋಸ್ ಇನ್ಜೆಕ್ಷನ್ ಯುಎಸ್ಪಿ 100ಎಂಜಿ (ಐರೋಗೈನ್) – ಮೆ. ರೀಗೈನ್ ಲ್ಯಾಬೋರೇಟರಿಸ್
ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್ ಪಾರ್ ಇನ್ಜೆಕ್ಷನ್ ಆರ್ಎಲ್ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್ ಇಂಡಿಯಾ
ಆರೋಗ್ಯ ಸಚಿವರ ಟ್ವೀಟ್
ಇನ್ನು ಇದೇ ವಿಚಾರವಾಗಿ ಎಕ್ಸ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂರಾವ್, 'ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೆಳಗಿನ ಔಷಧಗಳು/ಸೌಂದರ್ಯವರ್ಧಕಗಳನ್ನು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಆಸ್ಪತ್ರೆ, ಔಷಧ ಮಳಿಗೆಗಳಲ್ಲಿ ಯಾವುದೇ ಸಂಗ್ರಹ ಇದ್ದರೆ, ನಿಮ್ಮ ಸ್ಥಳೀಯ ಔಷಧ ನಿರೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರಿಗೆ ತಕ್ಷಣವೇ ತಿಳಿಸಿ.
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ದಯವಿಟ್ಟು ಈ ಕೆಳಗೆ ಪಟ್ಟಿ ಮಾಡಲಾದ ಬ್ಯಾಚ್‌ನ ಔಷಧಗಳು/ಸೌಂದರ್ಯವರ್ಧಕಗಳನ್ನು ಬಳಸಬೇಡಿ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


