Chakravarty Sulibele ಗೆ ಕುಂದಾಪುರ ಪೊಲೀಸ್ ನೊಟೀಸ್; ರಾಜಕೀಯ ಮಾತನಾಡದಂತೆ ಸೂಚನೆ!
ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬುದು ಯಾವಾಗಿನಿಂದ ಜಾರಿಯಾಗಿದೆ ಎಂದು ಸೂಲಿಬೆಲೆ ಪ್ರಶ್ನಿಸಿದ್ದಾರೆ.

ಕುಂದಾಪುರ: ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ತಾಕೀತು ಮಾಡಿ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕುಂದಾಪುರ ಪೊಲೀಸರು ನೋಟಿಸ್ ನೀಡಿದ್ದಾರೆ.
ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಂದ `ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಚಾರವಾಗಿ ಜೂ.20, 21 ಮತ್ತು 22 ರಂದು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಪೊಲೀಸ್ ಅಧಿಕಾರಿಗಳು, ರಾಜಕೀಯ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಆಯೋಜಕರಿಗೆ ಹಾಗೂ ಸುಲಿಬೆಲೆಯವರಿಗೆ ನೀಡಿರುವ ನೊಟೀಸ್ ನಲ್ಲಿ ಷರತ್ತು ವಿಧಿಸಿದ್ದಾರೆ.
ತಮಗೆ ನೊಟೀಸ್ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬುದು ಯಾವಾಗಿನಿಂದ ಜಾರಿಯಾಗಿದೆ ಎಂದು ಪ್ರಶ್ನಿಸಿದ್ದಾರೆ.
ಇದು ನನ್ನನ್ನು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನವಾಗಿದೆ. ನನಗೆ ನೋಟಿಸ್ ಹೊಸತಲ್ಲ, ಬಹಳ ಕಡೆಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಈ ಬಾರಿ ರಾಜಕೀಯ ಮಾತನಾಡಬಾರದು, ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದಿದ್ದಾರೆ. ನೆಹರು, ಇಂದಿರಾ, ರಾಜೀವ್ ಕುರಿತಂತೆ ಮಾತನಾಡಬಾರದು ಎಂದು ಅರ್ಥವೇ? ಘಜ್ನಿ, ಘೋರಿ, ಔರಂಗಜೇಬ್ ಮುಂತಾದ ಕ್ರೂರಿಗಳ ತೇಜೋವಧೆ ಮಾಡಬಾರದೆಂದು ಅರ್ಥವೇ? ಕುಂದಾಪುರ ಪೊಲೀಸರೇ ಮಾಹಿತಿ ಕೊಟ್ಟರೆ ಉತ್ತಮ. ನಾನು ಕುಂದಾಪುರಕ್ಕೆ ಬರಬಾರದೆಂದು ಹೇಳುವವರು ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ, ನಾನು ಕುಂದಾಪುರಕ್ಕೆ ಹೋಗೇ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಹೇಳುತ್ತಿರುವವರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕ ನಿರಂಜನ್ ಶೆಟ್ಟಿ, NSUI ನವರು ಚಕ್ರವರ್ತಿ ಸೂಲಿಬೆಲೆಯವರು ಕುಂದಾಪುರಕ್ಕೆ ಬರಬಾರದು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಕಾಶ್ಮೀರದ ವಿಚಾರ ಮಾತನಾಡದೇ ಅಖಂಡ ಭಾರತದ ಬಗ್ಗೆ ಉಪನ್ಯಾಸ ಅಸಾಧ್ಯ. ಕಾಶ್ಮೀರ ಕಾಂಗ್ರೆಸ್ ಕಾಲದಲ್ಲಿ ಸಮಸ್ಯೆ ಆಗಿ ಉಳಿದಿತ್ತು. ಈ ವಿಚಾರ ಜನರಿಗೆ ತಿಳಿಯಬಾರದು ಅನ್ನೋದು ಇವರ ಉದ್ದೇಶ ಇರಬಹುದು. ಕಾಂಗ್ರೆಸ್ ಬಣ್ಣ ಬಯಲಾಗುತ್ತೆ ಎನ್ನುವ ಕಾರಣಕ್ಕೆ ತಡೆಯಲು ಮುಂದಾಗಿದ್ದಾರೆ. ನಾವು ಕಾರ್ಯಕ್ರಮ ಮಾಡಿಯೇ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



