ರಾಜ್ಯ

ಗದಗ: 6 ತಿಂಗಳ ಹಿಂದೆ ಯುವತಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್; ಪ್ರೇಯಸಿ ಕೊಂದು ಜಮೀನಿನಲ್ಲಿ ಹೂತಿದ್ದ ಪ್ರಿಯಕರ, ಬಂಧನ

2025ರ ಜ.12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ಗದಗ ಪುಟ್ಟರಾಜನಗರದ ನಿವಾಸಿ ಬಸವರಾಜ ಅಂಗಡಿ ತಮ್ಮ ತಂಗಿ ಮಧುಶ್ರೀ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿದ್ದರು.

ಗದಗ: 6 ತಿಂಗಳ ಹಿಂದೆ ಯುವತಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್; ಪ್ರೇಯಸಿ ಕೊಂದು ಜಮೀನಿನಲ್ಲಿ ಹೂತಿದ್ದ ಪ್ರಿಯಕರ, ಬಂಧನ
ಸಂಗ್ರಹ ಚಿತ್ರ
Published On :

ಗದಗ: ಗದಗದಲ್ಲಿ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಪ್ರಕರಣ ಭಾರೀ ಟ್ವಿಸ್ಟ್ ಸಿಕ್ಕಿದೆ. ಯುವತಿಯನ್ನು ಆಕೆಯ ಪ್ರಿಯಕರನೇ ಹತ್ಯೆ ಮಾಡಿ ತನ್ನ ಜಮೀನಿನಲ್ಲೇ ಹೂತು ಹಾಕಿದ್ದು, ಪ್ರಕರಣ ಸಂಬಂಧ ಗದಗ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ನಾರಾಯಣಪುರ ಗ್ರಾಮದ ನಿವಾಸಿಗಳಾದ ಸತೀಶ್ ಹಿರೇಮಠ ಮತ್ತು ಮಧುಶ್ರೀ ಅಂಗಡಿ ಇಬ್ಬರೂ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಕುಟುಂಬಗಳು ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ ಸತೀಶ್ ನಿಂದ ಮಧುಳನ್ನು ದೂರ ಮಾಡುವ ಪ್ರಯತ್ನದಲ್ಲಿ ಯುವತಿಯ ಕುಟುಂಬ ಮಧುಳನ್ನು ಚಿಕ್ಕಪ್ಪನ ಮನೆಗೆ ಕಳುಹಿಸಲಿದ್ದರೂ. ಅದಾಗ್ಯೂ ಸತೀಶ್ ಬೈಕ್ ನಲ್ಲಿ ಅಲ್ಲಿಗೆ ಹೋಗಿ ಮಧುಳನ್ನು ಭೇಟಿ ಮಾಡಿದ್ದು, ಅಲ್ಲಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.

ಬಳಿಕ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ವೇಲ್‌ನಿಂದ ಮಧು ಅವರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ತನ್ನ ಜಮೀನಿನಲ್ಲೇ ಹೂತುಹಾಕಿದ್ದಾನೆ.

ಈ ನಡುವೆ 2025ರ ಜ.12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ಗದಗ ಪುಟ್ಟರಾಜನಗರದ ನಿವಾಸಿ ಬಸವರಾಜ ಅಂಗಡಿ ತಮ್ಮ ತಂಗಿ ಮಧುಶ್ರೀ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿದ್ದರು.

ಬಳಿಕ ಪೊಲೀಸರು ಸತೀಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಆತ ಮಧುಳನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾನ. ಈ ನಡುವೆ ಪ್ರತ್ಯದರ್ಶಿಯೊಬ್ಬರು ಡಿಸೆಂಬರ್ 16 ರಂದು ಇಬ್ಬರನ್ನು ಒಟ್ಟಿಗೆ ನೋಡಿದ್ದಾಗಿ ಹೇಳಿದ್ದಾರೆ. ಬಳಿಕ ಸತೀಶನ ಮೇಲೆ ಸಂಶಯಗೊಂಡ ಪೊಲೀಸರು, ಆತನ ಮೊಬೈಲ್ ಲೊಕೇಶನ್ ಮತ್ತು ಆತನ ಮೇಲೆ ನಿಗಾ ಇಟ್ಟಾರೆ.

ಮತ್ತೊಂಡೆದೆ ಆತ ನೀಡಿದ ಹೇಳಿಕೆಗೂ ಘಟನೆ ನಡೆದ ದಿನ ಆತ ಇದ್ದ ಸ್ಥಳದ ಮೊಬೈಲ್ ಲೊಕೇಶನ್‌ಗೂ ತಾಳೆಯಾಗದಿರುವುದು ಸಂಶಯ ಹೆಚ್ಚಾಗುವಂತೆ ಮಾಡಿದೆ. ಬಳಿಕ ಆತನನ್ನು ಮತ್ತಷ್ಟು ತೀವ್ರವಾಗಿ ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಾಯಿ ಬಿಟ್ಟಿದ್ದಾನೆ.

ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ಮಾತನಾಡಿ, ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣವನ್ನು ಭೇದಿಸಲು ನಮಗೆ ಸಹಾಯ ಮಾಡಿದವು. ನಮ್ಮ ಪೊಲೀಸ್ ತಂಡವು ಶ್ಲಾಘನೀಯ ಕೆಲಸ ಮಾಡಿದೆ ಮತ್ತು ಪೊಲೀಸರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.