ಬನ್ನೇರುಘಟ್ಟ ಮೃಗಾಲಯದ ಟಿಕೆಟ್ ದರ ಏರಿಕೆ: ಪರಿಷ್ಕೃತ ದರ ಆಗಸ್ಟ್ 1ರಿಂದ ಜಾರಿ
ಪ್ರಾಣಿ ಆಹಾರ, ನಿರ್ವಹಣೆ, ಮತ್ತು ಸಿಬ್ಬಂದಿಯ ವೇತನದಲ್ಲಿ ಹೆಚ್ಚಳವಾದ ಕಾರಣದಿಂದಾಗಿ ದರ ಏರಿಕೆ ಅಗತ್ಯವಾಯಿತು.

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ) ಆಡಳಿತ ಮಂಡಳಿಯು ಮಂಗಳವಾರ ಮೃಗಾಲಯದ ಟಿಕೆಟ್ ದರಗಳನ್ನು ಪರಿಷ್ಕರಿಸಿದ್ದು, ಹೊಸ ದರ ಆಗಸ್ಟ್ 1, 2025 ರಿಂದ ಜಾರಿಗೆ ಬರಲಿದೆ.
ಆಡಳಿತ ಮಂಡಳಿಯು ಟಿಕೆಟ್ ದರವನ್ನು ವಯಸ್ಕರಿಗೆ 20 ರೂ. ಮತ್ತು ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ 10 ರೂ. ಹೆಚ್ಚಿಸಿದೆ. ಆದರೆ, ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಪ್ರವೇಶದ ಟಿಕೆಟ್ ದರಗಳನ್ನು ಹೆಚ್ಚಳ ಮಾಡಿಲ್ಲ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಯೊಂದಿಗಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ಅವರು ತಿಳಿಸಿದ್ದಾರೆ.
ಪ್ರಾಣಿ ಆಹಾರ, ನಿರ್ವಹಣೆ, ಮತ್ತು ಸಿಬ್ಬಂದಿಯ ವೇತನದಲ್ಲಿ ಹೆಚ್ಚಳವಾದ ಕಾರಣದಿಂದಾಗಿ ದರ ಏರಿಕೆ ಅಗತ್ಯವಾಯಿತು. ಬನ್ನೇರುಘಟ್ಟ ಜೈವಿಕ ಉದ್ಯಾನವನವು ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರಿಂದ ಬರುವ ಟಿಕೆಟ್ ಹಣವೇ ಇದರ ಪ್ರಮುಖ ಆದಾಯ ಮೂಲವಾಗಿದೆ.
ಇದರಂತೆ, ಮೃಗಾಲಯ ಪ್ರಾಧಿಕಾರ ಶೇಕಡಾ 50ರಷ್ಟು ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಶೇಕಡಾ 20ರಷ್ಟು ಮಾತ್ರ ಒಪ್ಪಿಗೆ ನೀಡಿದೆ. ಆಗಸ್ಟ್ 1ರಿಂದ ಈ ಹೊಸ ದರಗಳು ಜಾರಿಗೆ ಬರಲಿವೆ ಎಂದು ಮೃಗಾಲಯ ಪ್ರಾಧಿಕಾರ ಪ್ರಕಟಿಸಿದೆ.
ನೂತನ ದರಗಳು ಇಂತಿವೆ...
ವಯಸ್ಕರಿಗೆ ಟಿಕೆಟ್ ದರ ಈಗಿನ ರೂ.100ರಿಂದ ರೂ.120ಕ್ಕೆ ಏರಿಕೆ
ಮಕ್ಕಳಿಗೆ ಟಿಕೆಟ್ ದರ ರೂ.50 ರಿಂದ ರೂ60ಕ್ಕೆ ಏರಿಕೆ
ಹಿರಿಯ ನಾಗರಿಕರಿಗೆ ಟಿಕೆಟ್ ದರ ರೂ.60 ರಿಂದ ರೂ.70ಕ್ಕೆ ಏರಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


