ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಟೆಕ್ಕಿ ಭೇಟಿಗೆ ಆಹ್ವಾನ; 2 ಲಕ್ಷ ರೂ ಸುಲಿಗೆ ಮಾಡಿದ್ದ 6 ಮಂದಿ ಬಂಧನ
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದು, ಸ್ನೇಹಿತರ ಜೊತೆ ಸೇರಿ 2 ಲಕ್ಷ ರೂ. ದರೋಡೆ ಮಾಡಿದ್ದಾರೆ.

ಬೆಂಗಳೂರು: ಡೇಟಿಂಗ್ ಆ್ಯಪ್‌ನ ಮೂಲಕ ಪರಿಚಯವಾಗಿದ್ದ ಉದ್ಯೋಗಿಯನ್ನು ಭೇಟಿಗೆ ಆಹ್ವಾನಿಸಿ, ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಂಗೀತಾ ಸಹಾನಿ (36), ಬೀರಬಲ್ ಮಜ್ಜಗಿ(21), ಅಭಿಷೇಕ್(19), ಶ್ಯಾಮ್ ಸುಂದರ್ ಪಾಂಡೆ(20), ರಾಜು ಮಾನೆ (34) ಹಾಗೂ ಶರಣಬಸಪ್ಪ ಬಾಳಿಗೆರ್ (50) ಬಂಧಿತರು. ತೆಲಂಗಾಣ ರಾಜ್ಯದ ರಾಕೇಶ್ ರೆಡ್ಡಿ ಅವರು ನೀಡಿದ ದೂರು ಆಧರಿಸಿ ನಗರದ ವಿವಿಧ ಸ್ಥಳಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದು, ಸ್ನೇಹಿತರ ಜೊತೆ ಸೇರಿ 2 ಲಕ್ಷ ರೂ. ದರೋಡೆ ಮಾಡಿದ್ದಾರೆ. 15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ರಾಕೇಶ್ ರೆಡ್ಡಿ ಅವರು ಮಹದೇವಪುರದಲ್ಲಿ ಇರುವ ಬೋಯಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಂದ ಆರೋಪಿಗಳು ₹2 ಲಕ್ಷ ಸುಲಿಗೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.
ದೂರುದಾರರಿಗೆ ಡೇಟಿಂಗ್ ಆ್ಯಪ್‌ವೊಂದರ ಮೂಲಕ ತಿಂಗಳ ಹಿಂದೆ ಆರೋಪಿ ಸಂಗೀತಾ ಪರಿಚಯವಾಗಿತ್ತು. ಆಕೆ ತನ್ನನ್ನು ರಾಜಸ್ಥಾನದ ರಾಕಿ ಎಂದು ಪರಿಚಯಿಸಿಕೊಂಡಿದ್ದಳು. ತಾನು ಅವಿವಾಹಿತಳಾಗಿದ್ದು, ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಳು. ಸಂಗೀತಾ ತನ್ನ ಯಲಹಂಕದ ಮನೆಯಲ್ಲಿಗೆ ಆಹ್ವಾನಿಸಿ, ಲೈಂಗಿಕ ಕ್ರಿಯೆಗೆ ಪ್ರಲೋಭನೆ ನೀಡಿದ್ದಾಳೆ. ಈ ವೇಳೆ, ತನ್ನ ಬ್ಯಾಗ್‌ನಲ್ಲಿ ಬೇಕಿಂಗ್ ಸೋಡಾ ಇಟ್ಟುಕೊಂಡು, ಇದು ಡ್ರಗ್ಸ್ ಎಂದು ಆತನ ಮುಂದೆ ನಾಟಕವಾಡಿದ್ದಾಳೆ.
ಮನೆಯಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಉಳಿದ ಆರೋಪಿಗಳು ಆ ಮನೆಗೆ ಪ್ರವೇಶಿಸಿದ್ದರು. ನಾವು ಮನೆಯ ಮಾಲೀಕರು. ಮನೆಯಲ್ಲಿ ಮದ್ಯಪಾನ ಮಾಡುವಂತಿಲ್ಲ ಎನ್ನುತ್ತಾ ಸಂಗೀತಾ ಹಾಗೂ ದೂರುದಾರರ ಬ್ಯಾಗ್‌ಗಳನ್ನು ಪರಿಶೀಲಿಸಲು ಮುಂದಾಗಿದ್ದರು. ಆಗ ಬ್ಯಾಗ್‌ನಲ್ಲಿ ಬಿಳಿ ಬಣ್ಣದ ಪೌಡರ್ ಸಿಕ್ಕಿತ್ತು. ಆ ಪೌಡರ್ ಅನ್ನು ಡ್ರಗ್ಸ್ ಎಂದು ತೋರಿಸಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಂಧಿತರ ಪೈಕಿ, ಒಬ್ಬ ಆರೋಪಿಯ ವಿರುದ್ಧ 2023ರಲ್ಲಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಇಂಥಹದ್ದೇ ಪ್ರಕರಣ ದಾಖಲಾಗಿತ್ತು. ಆರೋಪಿ ಸಂಗೀತಾ ಸಹಾನಿ ಉತ್ತರ ಪ್ರದೇಶ ಮೂಲದವಳಾಗಿದ್ದು, ಈ ಹಿಂದೆ ಡಾನ್ಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದರು.
ಈ ವಿಷಯವನ್ನೂ ಯಾರಿಗೂ ತಿಳಿಸುವುದಿಲ್ಲ ಎಂದು ಹೇಳಿದ್ದ ಆರೋಪಿಗಳು ₹15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆಗ ದೂರುದಾರರು ತಮ್ಮ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದರು. ಕೊನೆಗೆ ₹2 ಲಕ್ಷ ಕೊಡುವುದಾಗಿ ರಾಕೇಶ್ ರೆಡ್ಡಿ ಹೇಳಿದರು. ಆರೋಪಿಗಳ ಮಾತಿನಂತೆ ಹಂತ ಹಂತವಾಗಿ ದೂರುದಾರರು ಒಟ್ಟು ₹2 ಲಕ್ಷ ವರ್ಗಾಯಿಸಿದ್ದರು. ಬಳಿಕ ರಾಕೇಶ್ ಅವರನ್ನು ಬೈಕ್‌ನಲ್ಲಿ ಕರೆದೊಯ್ದು ವೀರಸಂದ್ರ ಬಳಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.
ಬ್ಯಾಗ್‌ನಲ್ಲಿ ಅಡುಗೆ ಸೋಡಾವನ್ನು ಸಂಗೀತಾ ಸಹಾನಿ ಮೊದಲೇ ಬಚ್ಚಿಟ್ಟುಕೊಂಡಿದ್ದಳು. ದೂರುದಾರರನ್ನು ಕೊಠಡಿಗೆ ಕರೆತಂದಾಗ ನಾಟಕವಾಡುವಂತೆ ಪ್ರಕರಣದ ಸೂತ್ರಧಾರ ಶರಣಬಸಪ್ಪ ಬಾಳಿಗೆರ್ ಸೂಚಿಸಿದ್ದ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



