ಹೆಚ್ಎಎಲ್'ಗೆ ಪಿಎಂ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ ಭೇಟಿ: ಯೋಜನೆಗಳ ಪರಿಶೀಲನೆ
ಇಸ್ರೋ ಅಧ್ಯಕ್ಷ ವಿ ನಾರಾಯಣನ್, ಹೆಚ್ಎಎಲ್ ಹಿರಿಯ ಅಧಿಕಾರಿಗಳು SSLV ತಂತ್ರಜ್ಞಾನ ಸೇರಿದಂತೆ ಇತರ ಯೋಜನೆಗಳ ಬಗ್ಗೆ ವಿವರಿಸಿದರು.

ಬೆಂಗಳೂರು: ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಗೆ ಭೇಟಿ ನೀಡಿ ಹಲವಾರು ಪ್ರಮುಖ ಸ್ಥಳೀಯ ರಕ್ಷಣಾ ಯೋಜನೆಗಳನ್ನು ಪರಿಶೀಲಿಸಿದರು.
ಪಿ ಕೆ ಮಿಶ್ರಾ ಅವರೊಂದಿಗೆ ಹೆಚ್ಎಎಲ್ ಸಿಎಂಡಿ ಡಿ ಕೆ ಸುನಿಲ್ ಮತ್ತು ಮಂಡಳಿಯ ಸದಸ್ಯರು ಸಾಥ್ ನೀಡಿದ್ದರು.
ಮಿಶ್ರಾ ಅವರು, ಎಲ್'ಸಿಎ ಎಂಕೆ 2 ಹ್ಯಾಂಗರ್, ತೇಜಸ್ ಅಸೆಂಬ್ಲಿ ಮತ್ತು ಏರೋಸ್ಪೇಸ್ ವಿಭಾಗಗಳಿಗೆ ಭೇಟಿ ನೀಡಿದರು. ಈ ವೇಳೆ ಎಲ್'ಸಿಎ ತೇಜಸ್ ಎಂಕೆ 1ಎ ನಿರ್ಮಾಣವನ್ನು ಪರಿಶೀಲಿಸಿದರು.
ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಗೆ ಹೆಚ್ಎಎಲ್ ಪ್ರಚಂಡ್. LUH, ಧ್ರುವ್ ಮತ್ತು HTT 40 ಸೇರಿದಂತೆ ಸ್ಥಳೀಯ ಯೋಜನೆಗಳನ್ನು ಪ್ರಸ್ತುತ ಪಡಿಸಲಾಯಿತು.
ಮಿಶ್ರಾ ಅವರು ಏರೋಸ್ಪೇಸ್ ವಿಭಾಗದಲ್ಲಿ, GSLV Mk III, PSLV ಬಿಡಿ ಭಾಗಗಳು ಮತ್ತು HAL ನ ಗಗಯಾನ್ ಮಿಷನ್ ಘಟಕಗಳಿಗೆ ಭೇಟಿ ನೀಡಿದರು.
ಇಸ್ರೋ ಅಧ್ಯಕ್ಷ ವಿ ನಾರಾಯಣನ್, ಹೆಚ್ಎಎಲ್ ಹಿರಿಯ ಅಧಿಕಾರಿಗಳು SSLV ತಂತ್ರಜ್ಞಾನ ಸೇರಿದಂತೆ ಇತರ ಯೋಜನೆಗಳ ಬಗ್ಗೆ ವಿವರಿಸಿದರು. ಈ ವೇಳೆ ಭಾರತದ ರಕ್ಷಣಾ ಸ್ವಾವಲಂಬನೆಯನ್ನು ಬಲಪಡಿಸುವಲ್ಲಿ ಹೆಚ್ಎಎಲ್ ಪಾತ್ರವನ್ನು ಮಿಶ್ರಾ ಅವರು ಶ್ಲಾಘಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



