ಸಿದ್ದರಾಮಯ್ಯ ನಂತರ ಈಗ ಜಿಟಿ ದೇವೇಗೌಡ ಬುಡಕ್ಕೆ ಮುಡಾ ಹಗರಣ: JDS ಶಾಸಕನ ವಿರುದ್ಧ ಇಡಿ, ಲೋಕಾಯುಕ್ತಕ್ಕೆ ದೂರು!
ಜಿಟಿ ದೇವೇಗೌಡ ವಿರುದ್ಧವೂ ಸಹ ಅಕ್ರಮವಾಗಿ 50:50 ಅನುಪಾತದಲ್ಲಿ ಸುಮಾರು 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಮೈಸೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿಕೃಷ್ಣ ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಿದ್ದು ಇದೀಗ ಜೆಡಿಎಸ್ ಶಾಸಕ ಜಟಿ ದೇವೇಗೌಡ ವಿರುದ್ಧ ಇಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಜಿಟಿ ದೇವೇಗೌಡ ವಿರುದ್ಧವೂ ಸಹ ಅಕ್ರಮವಾಗಿ 50:50 ಅನುಪಾತದಲ್ಲಿ ಸುಮಾರು 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜಿಟಿ ದೇವೇಗೌಡ ಅವರು ತಮ್ಮ ಸಹೋದರಿಯ ಮಗ ಮಹೇಂದ್ರ ಹೆಸರಿನಲ್ಲಿ ಬೇನಾಮಿಯಾಗಿ ಪರಿಹಾರ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ದೇವನೂರು ಗ್ರಾಮದ ಗುಂಗ್ರಾಲ್ ಛತ್ರದ ಸರ್ವೆ ನಂ.81/2 ರಲ್ಲಿದ್ದ ಮಹೇಂದ್ರಗೆ ಸೇರಿದ 2.22 ಎಕರೆ ಭೂಮಿಯನ್ನು ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ ಯಾವಾಗ ಆ ಭೂಮಿ ವಶಪಡಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಇಲ್ಲ. ಅಷ್ಟೆ ಅಲ್ಲದೆ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3ನೇ ಹಂತದಲ್ಲಿ ಬದಲಿ ನಿವೇಶನ ಮಂಜೂರು ಕೂಡ ಮಾಡಲಾಗಿದೆ. ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವಇಚ್ಛೆಯಿಂದ ಭೂಮಿ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದು ಆಗಿದ್ದು, ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ ಗಳು ಮಾತ್ರ. ಅದರಂತೆ 4060 ಮತ್ತು 4030ರ 3600 ಚದರ ಅಡಿ ಮಾತ್ರ ಪರಿಹಾರವಾಗಿ ಸಿಗಬೇಕಾಗಿತ್ತು. ಆದರೆ, ಅವರಿಗೆ ಪರಿಹಾರವಾಗಿ 19 ನಿವೇಶನಗಳನ್ನು ನೀಡಲಾಗಿದೆ ಆರೋಪಿಸಿದ್ದಾರೆ.

JDS ನೂತನ ರಾಜ್ಯಾಧ್ಯಕ್ಷ ಆಯ್ಕೆ: ಶಾಸಕರಿಗೆ HDK ಬೆಲೆ ಕೊಡಲ್ಲ, ಅಂದುಕೊಂಡಿದ್ದನ್ನೇ ಮಾಡುತ್ತಾರೆ- ಜಿಟಿ ದೇವೇಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


