ರಾಜ್ಯ

Video: ಪುಡಿ ರೌಡಿಗಳ ಅಟ್ಟಹಾಸ; ಬೇಕರಿ ಸಿಬ್ಬಂದಿ ಮೇಲೆ Sprite ಬಾಟಲ್ ನಿಂದ ಹಲ್ಲೆ!

ಬೆಂಗಳೂರಿನ ಹೆಬ್ಬಾಳದ ಭೂಪಸಂದ್ರ ಬಳಿ ಈ ಘಟನೆ ನಡೆದಿದ್ದು, ಬೇಕರಿಯೊಂದಕ್ಕೆ ನುಗ್ಗಿ ಪುಂಡರ ಗುಂಪು ಅಲ್ಲಿನ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

Video: ಪುಡಿ ರೌಡಿಗಳ ಅಟ್ಟಹಾಸ; ಬೇಕರಿ ಸಿಬ್ಬಂದಿ ಮೇಲೆ Sprite ಬಾಟಲ್ ನಿಂದ ಹಲ್ಲೆ!
ಬೇಕರಿ ಸಿಬ್ಬಂದಿ ಮೇಲೆ ಪುಡಿ ರೌಡಿಗಳ ಹಲ್ಲೆ
Published On :

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಬೇಕರಿ ಮೇಲೆ ದಾಳಿ ಮಾಡಿರುವ ಕಿಡಿಗೇಡಿಗಳ ಗುಪೊಂದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಬೆಂಗಳೂರಿನ ಹೆಬ್ಬಾಳದ ಭೂಪಸಂದ್ರ ಬಳಿ ಈ ಘಟನೆ ನಡೆದಿದ್ದು, ಬೇಕರಿಯೊಂದಕ್ಕೆ ನುಗ್ಗಿ ಪುಂಡರ ಗುಂಪು ಅಲ್ಲಿನ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವಿಡಿಯೋ ಅಂಗಡಿಯಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಿನ್ನೆ ರಾತ್ರಿ 9ಗಂಟೆ ವೇಳೆಗೆ ಬೇಕರಿಗೆ ಆಗಮಿಸಿದ ಪುಡಿ ರೌಡಿಗಳ ಗ್ಯಾಂಗ್ ಮೊದಲು ಸಿಗರೇಟ್ ಕೇಳಿದ್ದಾರೆ. ಸಿಬ್ಬಂದಿ ಸಿಗರೇಟ್ ನೀಡಿ ಹಣ ಕೇಳಿದ್ದಕ್ಕೆ ಬೇಕರಿ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ವಿಶ್ವ ಎಂಬಾತ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಮಾತಿಗೆ ಮಾತು ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ.

ಕ್ಷಣಾರ್ಧದಲ್ಲಿ ಸಂಘರ್ಷ ತಾರಕಕ್ಕೆ ತಿರುಗಿ ಇಬ್ಬರು ಕಿಡಿಗೇಡಿಗಳು ಸಿಬ್ಬಂದಿಯನ್ನು ಥಳಿಸಲು ಮುಂದಾಗಿದ್ದಾರೆ. ಬೇಕರಿ ಒಳಗೆ ಇದ್ದ ಯುವಕನ ಮೇಲೆ ಅಲ್ಲೇ ಇದ್ದ ಸ್ಪ್ರೈಟ್ ಬಾಟಲ್ ತೆಗೆದು ಹೊಡೆಯಲು ಯತ್ನಿಸಿದ್ದಾರೆ.

ಅದೃಷ್ಟವಶಾತ್ ಸಿಬ್ಬಂದಿ ಬಾಟಲಿ ಏಟಿನಿಂದ ಪಾರಾಗಿದ್ದು, ಬಾಟಲಿ ತಾಗಿದ್ದರೆ ಆತನ ತಲೆಗೆ ಗಂಭೀರ ಗಾಯವಾಗುತ್ತಿತ್ತು ಎನ್ನಲಾಗಿದೆ. ಪುಂಡರ ಗ್ಯಾಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.