ಟಿಬೆಟಿಯನ್ 14ನೇ ಧರ್ಮಗುರು ದಲೈಲಾಮಾ ಬೈಲಕುಪ್ಪೆಗೆ ಆಗಮಿನ; 1 ತಿಂಗಳು ವಾಸ್ತವ್ಯ
ಹಿಮಾಚಲ ಪ್ರದೇಶದ ಧರ್ಮಶಾಲಾ ಟಿಬೆಟಿಯನ್ ಕೇಂದ್ರದಲ್ಲಿ ತೀವ್ರ ಶೀತ ವಾತಾವರಣದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿಗಾಗಿ ಬೈಲಕುಪ್ಪೆಗೆ ಆಗಮಿಸಿರುವುದಾಗಿ ಟಿಬೆಟಿಯನ್ ಶಿಬಿರದ ಪ್ರತಿನಿಧಿ ಜಿಗ್ಮೆ ಸುಲ್ತಾನಿಮ್ ಅವರು ಹೇಳಿದ್ದಾರೆ.

ಮಡಿಕೇರಿ: ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಅವರು ಅವರು ಬೈಲಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಭಾನುವಾರ ಆಗಮಿಸಿದ್ದು, ಶಿಬಿರದಲ್ಲಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ದಲೈಲಾಮಾ ಅವರು ಬೈಲಕುಪ್ಪೆಯ ಟಿಡಿಎಲ್ ಶಾಲಾ ಮೈದಾನಕ್ಕೆ ಭಾನುವಾರ ಮಧ್ಯಾಹ್ನ ಆಗಮಿಸಿದರು. ಈ ವೇಳೆ ದಲೈ ಲಾಮಾ ಅವರನ್ನು ಮೈಸೂರು ಜಿಲ್ಲಾಡಳಿತ ಮತ್ತು ಶಿಬಿರದ ಪ್ರತಿನಿಧಿಗಳು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಕೋರಿದರು. ದಲೈಲಾಮಾ ಅವರು ಶಿಬಿರದಲ್ಲಿರುವ ತಶಿಲೊಂಪೊ ಬೌದ್ಧ ದೇವಾಲಯದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಟಿಬೆಟಿಯನ್ ಕೇಂದ್ರದಲ್ಲಿ ತೀವ್ರ ಶೀತ ವಾತಾವರಣದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿಗಾಗಿ ಬೈಲಕುಪ್ಪೆಗೆ ಆಗಮಿಸಿರುವುದಾಗಿ ಟಿಬೆಟಿಯನ್ ಶಿಬಿರದ ಪ್ರತಿನಿಧಿ ಜಿಗ್ಮೆ ಸುಲ್ತಾನಿಮ್ ಅವರು ಹೇಳಿದ್ದಾರೆ.
ದಲೈ ಲಾಮಾ ಇತ್ತೀಚೆಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಲಕುಪ್ಪೆಗೆ ಆಗಮಿಸಿದ್ದಾರೆಂದು ತಿಳಿದುಬಂದಿದೆ,
ಎಂಟು ವರ್ಷಗಳಲ್ಲಿ ದಲೈಲಾಮಾ ಅವರು ಬೈಲಕುಪ್ಪೆ ಶಿಬಿರಕ್ಕೆ 26ನೇ ಬಾರಿ ಭೇಟಿ ನೀಡಿದ್ದಾರೆ. ಈ ಬಾರಿಯ ಭೇಟಿಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಮೂಲಗಳು ದೃಢಪಡಿಸಿವೆ. ಮೈಸೂರು ಜಿಲ್ಲಾ ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



