ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿನ 309 ಅಕ್ರಮ ಮನೆಗಳು ನೆಲಸಮ!
ಮುಂದಿನ ವಾರ ಈ ಮನೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತೇವೆ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಗುರುತಿಸಿದ್ದೇವೆ. ಅಲ್ಲಿ ನೆಲೆಸಿರುವವರಿಗೆ ಜಾಗ ಖಾಲಿ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು .

ಬೆಂಗಳೂರು: ಉತ್ತರ ಬೆಂಗಳೂರಿನ ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ 309 ಮನೆಗಳು ಮತ್ತು ಅಪಾರ್ಟ್‌ಮೆಂಟ್ ಸಮುಚ್ಚಯವನ್ನು ನೆಲಸಮಗೊಳಿಸಲು ಸಜ್ಜಾಗಿದೆ.
ಮಾಸ್ಟರ್ ಪ್ಲಾನ್ ಉಲ್ಲಂಘಿಸಿ ಅವುಗಳನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಹೈಕೋರ್ಟ್‌ನ ಆದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಶಸ್ತ್ರಸಜ್ಜಿತವಾಗಿದ್ದು, ಶೀಘ್ರದಲ್ಲೇ ನೋಟಿಸ್‌ಗಳನ್ನು ನೀಡಲಿದೆ. ಈ ಮನೆಗಳು ಮತ್ತು ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳನ್ನು ಆದಷ್ಟು ಬೇಗ ಖಾಲಿ ಮಾಡುವಂತೆ ಸೂಚಿಸಿದೆ.
ಮುಂದಿನ ವಾರ ಈ ಮನೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತೇವೆ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಗುರುತಿಸಿದ್ದೇವೆ. ಅಲ್ಲಿ ನೆಲೆಸಿರುವವರಿಗೆ ಜಾಗ ಖಾಲಿ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2007ರ ಪರಿಷ್ಕೃತ ಮಹಾಯೋಜನೆಯನ್ನು (ಆರ್‌ಎಂಪಿ) ಉಲ್ಲಂಘಿಸಿ ಬಡಾವಣೆಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿ ಹೇಳಿದರು, ನಗರಕ್ಕೆ ಹೊಸ ಮಾಸ್ಟರ್ ಪ್ಲಾನ್ ಇನ್ನೂ ಅಂತಿಮಗೊಳ್ಳದ ಕಾರಣ ಬಿಡಿಎ ಇದನ್ನು ಅನುಸರಿಸುತ್ತಿದೆ.
ಆರ್‌ಎಂಪಿ ಪ್ರಕಾರ ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಲೇಔಟ್‌ಗಳು 30 ಮೀಟರ್ ಮತ್ತು 45 ಮೀಟರ್ (ಕೆಲವು ಸ್ಥಳಗಳಲ್ಲಿ) ಅಗಲದ ರಸ್ತೆಗಳನ್ನು ಹೊಂದಿರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹದಿನೇಳು ಗ್ರಾಮಗಳನ್ನು ಬಡಾವಣೆಗೆ ಸೇರಿಸಲಾಗಿದೆ. ಅಲ್ಲಿ ಮನೆ ಕಟ್ಟಿಕೊಂಡಿರುವವರು ಬಿಡಿಎಯಿಂದ ಅನುಮತಿ ಪಡೆದಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ನಗರ ಯೋಜನಾ ವಿಭಾಗಕ್ಕೆ ಈ ವಿಷಯ ತಿಳಿದಿದ್ದರೇ ಅವರು ಕಟ್ಟಡದ ಯೋಜನೆಗಳನ್ನು ಅನುಮೋದಿಸುತ್ತಿರಲಿಲ್ಲ. ಅವು ಸಣ್ಣಪುಟ್ಟ ಉಲ್ಲಂಘನೆಗಳಲ್ಲಎಂದಿದ್ದಾರೆ. ಮೂರು ತಿಂಗಳ ಗಡುವಿನ ನಂತರ ಮನೆಗಳನ್ನು ನೆಲಸಮಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


