ಬೆಂಗಳೂರು: ಕಾಂಗ್ರೆಸ್ ನಾಯಕಿಗೆ 'ಮಿಡಲ್ ಫಿಂಗರ್' ತೋರಿಸಿದ ವ್ಯಕ್ತಿಯ ಬಂಧನ
ಮೈಸೂರು-ಬೆಂಗಳೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವಿಜಯನಗರ ನಿವಾಸಿ ಹರ್ಷ ಎಚ್ ಬಿ ಅವರನ್ನು ಬಂಧಿಸಲಾಗಿದೆ.

ಬೆಂಗಳೂರು: ವಾಹನ ಚಲಾಯಿಸುವಾಗ ಯುವ ಕಾಂಗ್ರೆಸ್ ನಾಯಕಿಯೊಬ್ಬರ ಕಡೆಗೆ ಅಶ್ಲೀಲ ಸನ್ನೆ ಮಾಡಿದ ಆರೋಪದ ಮೇಲೆ 43 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೈಸೂರು-ಬೆಂಗಳೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವಿಜಯನಗರ ನಿವಾಸಿ ಹರ್ಷ ಎಚ್ ಬಿ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮತ್ತು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಪ್ಯಾನೆಲಿಸ್ಟ್ ಅಕ್ಷತಾ ರವಿಕುಮಾರ್ ಅವರು ತಮಗೆ ಅಶ್ಲೀಲ ಸಿಂಬಲ್ ತೋರಿಸಿದ ವ್ಯಕ್ತಿಯ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು.
ಈ ವಿಡಿಯೋ ಆಧರಿಸಿ ದೂರು ದಾಖಲಿಸಿಕೊಂಡಿದ್ದ ಚಾಮರಾಜಪೇಟೆ ಪೊಲೀಸರು, ಇಂದು ಆರೋಪಿಯನ್ನು ಬಂಧಿಸಿದ್ದಾರೆ.
"ಬೆಂಗಳೂರಿನಲ್ಲಿ ಮಹಿಳಾ ಚಾಲಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ... ನನ್ನನ್ನು ನಿಂದಿಸಿದ ನಂತರ, ಆ ವ್ಯಕ್ತಿ ಸಂಚಾರ ನಿಯಮ ಉಲ್ಲಂಘಿಸಿ ಯು-ಟರ್ನ್ ಇಲ್ಲದ ಸ್ಥಳದಲ್ಲಿ ಅಕ್ರಮವಾಗಿ ಯು-ಟರ್ನ್ ತೆಗೆದುಕೊಂಡು ಸಿಗ್ನಲ್ ಜಂಪ್ ಮಾಡಿದರು. ಇದು 26/02/2025 ರಂದು ಸಂಜೆ 4 ಗಂಟೆಗೆ ಮೈಸೂರು-ಬೆಂಗಳೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಈ ನಡೆದಿದೆ. ನಾವು ಇದನ್ನು ನಿರ್ಲಕ್ಷಿಸಬೇಕೇ? ಎಂದು ಅಕ್ಷತಾ ಅವರು 'X' ನಲ್ಲಿ ಪೋಸ್ಟ್ ಮಾಡಿದ್ದರು.
ತನಿಖೆಯಲ್ಲಿ ಪೊಲೀಸರ ಪ್ರಕಾರ, ಹಾರ್ನ್ ಮಾಡಿದ ವಿಚಾರಕ್ಕೆ ನಡುವೆ ಮಾತಿನ ಚಕಮಕಿ ನಡೆಸಿತು. ಅವರು ಕೃತ್ಯದ ವಿಡಿಯೋವನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಘಟನೆಯ ಸಮಯದಲ್ಲಿ ಆ ವ್ಯಕ್ತಿ ತನ್ನ ಕುಟುಂಬದೊಂದಿಗೆ ಇದ್ದರು.
"ಈ ಘಟನೆಯು ತಪ್ಪು ತಿಳುವಳಿಕೆಯಿಂದ ಉಂಟಾಗಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 79 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ನಂತರ ಆರೋಪಿಯನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿಡುವ ಕಾಂಗ್ರೆಸ್ ನಾಯಕಿ ಅಕ್ಷತಾ ರವಿಕುಮಾರ್ ಅವರು, ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಗೋಪಾಲನ್ ಮಾಲ್ ಬಳಿ ಘಟನೆ ನಡೆದಿದೆ. ಹಿಂದೆಯಿಂದ ಬಂದು ಹಾರ್ನ್ ಮಾಡಿದರು. ಆಗ ನನಗೆ ಜಾಗ ಬಿಡಲು ಸಾಧ್ಯವಾಗಿಲ್ಲ. ಏಕಾಏಕಿ ಬಯ್ಯೋದಕ್ಕೆ ಪ್ರಾರಂಭ ಮಾಡಿದರು. ನಾನು ಮತ್ತೆ ಪ್ರಶ್ನೇ ಮಾಡಿದ್ದಕ್ಕೆ ಅಶ್ಲೀಲವಾಗಿ ಬೆರಳು ತೋರಿಸಿದರು. ಆ ಕಾರಣಕ್ಕೆ ನಾನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದೆ ಮತ್ತು ಆತನ ವಿರುದ್ಧ ದೂರು ನೀಡಿದ್ದೇನೆ. ಆ ವ್ಯಕ್ತಿ ಯಾರೆಂದು ಅಥವಾ ಏಕೆ ಹಾಗೆ ಮಾಡಿದನೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


