ಬೆಂಗಳೂರು: ಮದರಸಾದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದೈಹಿಕ ಹಲ್ಲೆ, ಆರೋಪಿ ಬಂಧನ
ಸಂತ್ರಸ್ತೆಯ ತಾಯಿ ಬುಧವಾರ ನೀಡಿದ ದೂರಿನಲ್ಲಿ, ತನ್ನ ಮಗಳನ್ನು ಮದರಸಾದಲ್ಲಿ ಐದನೇ ತರಗತಿಗೆ ಮತ್ತು ಅದರ ಹಾಸ್ಟೆಲ್‌ನಲ್ಲಿ 2024ರ ಜುಲೈನಲ್ಲಿ ಸೇರಿಸಲಾಯಿತು ಎಂದು ತಿಳಿಸಿದ್ದಾರೆ.

ಬೆಂಗಳೂರು: ಇಲ್ಲಿನ ಮದರಸಾವೊಂದರಲ್ಲಿ 11 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಫೆಬ್ರುವರಿ 16 ರಂದು ಹೆಗಡೆ ನಗರದಲ್ಲಿ ನಡೆದ ಘಟನೆ ಮದರಸಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸಂತ್ರಸ್ತೆಯ ತಾಯಿ ಬುಧವಾರ ನೀಡಿದ ದೂರಿನಲ್ಲಿ, ತನ್ನ ಮಗಳನ್ನು ಮದರಸಾದಲ್ಲಿ ಐದನೇ ತರಗತಿಗೆ ಮತ್ತು ಅದರ ಹಾಸ್ಟೆಲ್‌ನಲ್ಲಿ 2024ರ ಜುಲೈನಲ್ಲಿ ಸೇರಿಸಲಾಯಿತು. ಕ್ಷುಲ್ಲಕ ವಿಚಾರಕ್ಕೆ ಮನಬಂದಂತೆ ಬಾಲಕಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಹಾಸ್ಟೆಲ್ ಉಸ್ತುವಾರಿಯ ಪುತ್ರ ಮೊಹಮ್ಮದ್ ಹಸನ್ ಆಗಾಗ ಹಾಸ್ಟೆಲ್‌ಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರುವರಿ 16 ರಂದು ಸಂಜೆ 4.30 ರ ಸುಮಾರಿಗೆ ಬಾಲಕಿಯನ್ನು ಕಚೇರಿಗೆ ಕರೆಸಲಾಗಿದೆ. ಈ ವೇಳೆ ಆಟವಾಡುವಾಗ ಅಕ್ಕಿಯನ್ನು ಕೆಳಗೆ ಸುರಿದು ಮತ್ತು ಇತರ ಹಾಸ್ಟೆಲ್ ಹುಡುಗಿಯರೊಂದಿಗೆ ಜಗಳವಾಡಿದ ಆರೋಪದ ಮೇಲೆ ಹಸನ್ ಬಾಲಕಿಗೆ ಥಳಿಸಿದ್ದಾನೆ. ಕೆಳಗೆ ಬಿದ್ದ ಬಾಲಕಿಗೆ ಒದ್ದಿದ್ದಾನೆ.
ಕೊತ್ತನೂರು ಪೊಲೀಸ್ ಠಾಣೆಯು ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯಕ್ಕೆ ಶಿಕ್ಷೆ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


