ಈಗ ದೃಷ್ಟಿ ವಿಶೇಷಚೇತನರು ಸಹ ಭಾರತದ ಸಂವಿಧಾನವನ್ನು ಓದಬಹುದು!
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಸಿಐಐ ಯಂಗ್ ಇಂಡಿಯನ್ಸ್(ಯಿ) ಬೆಂಗಳೂರಿನ ಸಹಯೋಗದೊಂದಿಗೆ ಸಂವಿಧಾನದ ಬ್ರೈಲ್-ಲಿಪಿಯ ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ.

ಬೆಂಗಳೂರು: ಭಾರತ ಸಂವಿಧಾನ ಜಾರಿಯಾಗಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ಸಂವಿಧಾನದ ಬ್ರೈಲ್-ಲಿಪಿ(ದೃಷ್ಟಿಹೀನರು ಬಳಸುವ ಸ್ಪರ್ಶ ಬರವಣಿಗೆಯ ವ್ಯವಸ್ಥೆ) ಆವೃತ್ತಿಯನ್ನು ಬಿಡುಗಡೆ ಮಾಡಿದರು.
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಸಿಐಐ ಯಂಗ್ ಇಂಡಿಯನ್ಸ್(ಯಿ) ಬೆಂಗಳೂರಿನ ಸಹಯೋಗದೊಂದಿಗೆ ಸಂವಿಧಾನದ ಬ್ರೈಲ್-ಲಿಪಿಯ ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ.
"ಈ ಉಪಕ್ರಮವು ದೃಷ್ಟಿ ವಿಶೇಷಚೇತನರು ಅಥವಾ ದೃಷ್ಟಿ ಕಡಿಮೆ ಇರುವ ನಾಗರಿಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ" ಎಂದು ಶಂಕರ ಐ ಫೌಂಡೇಶನ್ ಇಂಡಿಯಾ ಮತ್ತು ವೈದ್ಯಕೀಯ ಆಡಳಿತ, ಗುಣಮಟ್ಟ ಮತ್ತು ಶಿಕ್ಷಣದ ಅಧ್ಯಕ್ಷ ಡಾ. ಕೌಶಿಕ್ ಮುರಳಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರೈಲ್ ಆವೃತ್ತಿಯನ್ನು ಪ್ರಮುಖ ಸಂಸ್ಥೆಗಳಿಗೆ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



