ರಾಜ್ಯ

ಬೆಂಗಳೂರು: ಮತ್ತೆ ಒಂದಾದ ಮಂಜು-ಲೀಲಾ; ಗಂಡನ ಸೇರಲು ಸಮ್ಮತಿಸಿದ ಪ್ರಿಯಕರ!

ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು ಪ್ರಿಯಕರ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದನು.

ಬೆಂಗಳೂರು: ಮತ್ತೆ ಒಂದಾದ ಮಂಜು-ಲೀಲಾ; ಗಂಡನ ಸೇರಲು ಸಮ್ಮತಿಸಿದ ಪ್ರಿಯಕರ!
Published On :

ಬೆಂಗಳೂರು: ಗಂಡ ಮತ್ತು ಮೂರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಹೋಗಿದ್ದ ಲೀಲಾ ಮತ್ತೆ ಗಂಡನನ್ನು ಸೇರಿಕೊಂಡಿದ್ದಾಳೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು ಪ್ರಿಯಕರ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದಾನೆ. ಕೆಲ ತಿಂಗಳ ಹಿಂದಷ್ಟೇ ಲೀಲಾ ಪತಿ ಮಂಜುನನ್ನು ಬಿಟ್ಟು ಪ್ರಿಯಕರ ಸಂತು ಜೊತೆ ಹೋಗಿದ್ದಳು. ಹೀಗಾಗಿ ಮಂಜು ಮಾಧ್ಯಮಗಳ ಮುಂದೆ ಬಂದು ಪತ್ನಿಗೆ ಮರಳಿ ಬರುವಂತೆ ಮನವಿ ಮಾಡಿದ್ದನು. ಈ ವಿಚಾರವಾಗಿ ಭಾರೀ ಹೈಡ್ರಾಮ ನಡೆದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಫುಲ್ ಹಲ್​ಚಲ್ ಸೃಷ್ಟಿಸಿತ್ತು. ಇದೀಗ ಲೀಲಾ ಮನಸ್ಸು ಬದಲಿಸಿ ಪತಿಯನ್ನ ಸೇರಿದ್ದಾಳೆ. ಮಹಿಳಾ ಹೋರಾಟಗಾರ್ತಿ ಸಂಧ್ಯಾ ಎಂಬುವರು ಮಂಜು-ಲೀಲಾಳನ್ನು ಮತ್ತೆ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.