ರಾಜ್ಯ

ಗೀಸರ್‌ ಗ್ಯಾಸ್‌ ಸೋರಿಕೆ: ಸ್ನಾನಕ್ಕೆಂದು ಹೋಗಿದ್ದ ಗೃಹಿಣಿ ಬಾತ್‌ರೂಮ್‌ನಲ್ಲೇ ಸಾವು

ಕೃಷ್ಣಮೂರ್ತಿ ನವೆಂಬರ್ 29 ರಂದು ಬೆಳಿಗ್ಗೆ ಕಚೇರಿಗೆ ಹೋಗಿದ್ದರು. ಈ ನಡುವೆ ಪತ್ನಿ ಭೂಮಿಕಾ ಸ್ನಾನದ ಗೃಹಕ್ಕೆ ಹೋಗಿದ್ದು, ಗ್ಯಾಸ್ ಗೀಸರ್ ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆ ಉಂಟಾಗಿ ವಿಷಕಾರಿ ಹೊಗೆ ಬಂದಿದೆ.

ಗೀಸರ್‌ ಗ್ಯಾಸ್‌ ಸೋರಿಕೆ: ಸ್ನಾನಕ್ಕೆಂದು ಹೋಗಿದ್ದ ಗೃಹಿಣಿ ಬಾತ್‌ರೂಮ್‌ನಲ್ಲೇ ಸಾವು
ಸಂಗ್ರಹ ಚಿತ್ರ
Published On :

ಬೆಂಗಳೂರು: ಸ್ನಾನ ಮಾಡಲು ಬಾತ್‌ರೂಮ್‌ಗೆ ಹೋಗಿದ್ದ ಗೃಹಿಣಿಯೊಬ್ಬರು ಅಲ್ಲಿಯೇ ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದಗುಡ್ಡದಹಳ್ಳಿಯಲ್ಲಿ ಶನಿವಾರ ನಡೆದಿದೆ.

ಮೃತಳನ್ನು ಹಾಸನದ ಭೂಮಿಕಾ (24) ಎಂದು ಗುರ್ತಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಅವರೊಂದಿಗೆ ವಿವಾಹವಾಗದಿದ್ದರು. ಕಳೆದ 15 ದಿನಗಳಿಂದ ತೋಟದಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಪತಿಯೊಂದಿಗೆ ವಾಸವಿದ್ದರು.

ಕೃಷ್ಣಮೂರ್ತಿ ನವೆಂಬರ್ 29 ರಂದು ಬೆಳಿಗ್ಗೆ ಕಚೇರಿಗೆ ಹೋಗಿದ್ದರು. ಈ ನಡುವೆ ಪತ್ನಿ ಭೂಮಿಕಾ ಸ್ನಾನದ ಗೃಹಕ್ಕೆ ಹೋಗಿದ್ದು, ಗ್ಯಾಸ್ ಗೀಸರ್ ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆ ಉಂಟಾಗಿ ವಿಷಕಾರಿ ಹೊಗೆ ಬಂದಿದೆ. ಈ ವಿಷಕಾರಿ ಹೊಗೆಯನ್ನು ಉಸಿರಾಡಿದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ನಡುವೆ ಪತಿ ಕೃಷ್ಣಮೂರ್ತಿ ಸಂಜೆ ಮನೆಗೆ ಹಿಂತಿರುಗಿದಾಗ ಪದೇ ಪದೇ ಬಾಗಿಲು ಬಡಿದರೂ ಮತ್ತು ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಪತ್ನಿ, ಸ್ನಾನಗೃಹದಲ್ಲಿ ಬಿದ್ದಿರುವುದು ಕಂಡುಬಂದಿದೆ. ಈ ಸಂಬಂಧ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.