ಬೆಂಗಳೂರು ದಂಪತಿಯ ಪರಿಸರ ಸ್ನೇಹಿ 'Breathing House'; ನೆಟ್ಟಿಗರು ಫಿದಾ, ಸುಮಾರು 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡ Video!
ಪ್ರಿಯಂ ಸಾರಸತ್ವ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ತ್ಯಾಜ್ಯ ಬಾಟಲಿಗಳಿಂದ ಆಕರ್ಷಕವಾಗಿ ನಿರ್ಮಿಸಲಾದ ಮಣ್ಣಿನ ಹೊರ ಗೋಡೆ ಗಮನ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿಯೇ 'ಕೈ ಪಂಪ್' ಇದ್ದು, ಅದಕ್ಕೆ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಹೃದಯಭಾಗದಲ್ಲಿರುವ ಸ್ಥಳೀಯ ದಂಪತಿಯ ಆಕರ್ಷಕ ಪರಿಸರ ಸ್ನೇಹಿ ಮನೆಯೊಂದರ ವಿಡಿಯೋ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಕಂಟೆಂಟ್ ಕ್ರಿಯೆಟರ್ ಪ್ರಿಯಂ ಸಾರಸತ್ವ್ ತೋರಿಸಿರುವ ಈ ಉಸಿರಿನ ಮನೆ("breathing house) ವಿಡಿಯೋ ಸುಮಾರು 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ.
ಪ್ರಿಯಂ ಸಾರಸತ್ವ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ತ್ಯಾಜ್ಯ ಬಾಟಲಿಗಳಿಂದ ಆಕರ್ಷಕವಾಗಿ ನಿರ್ಮಿಸಲಾದ ಮಣ್ಣಿನ ಹೊರ ಗೋಡೆ ಗಮನ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿಯೇ 'ಕೈ ಪಂಪ್' ಇದ್ದು, ಅದಕ್ಕೆ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.
ತದ ನಂತರ ಮನೆ ಒಳಗಡೆ ನೈಸರ್ಗಿಕ ಕೊಳ (natural pond) "ಉಸಿರಾಡುವ" ಮಣ್ಣಿನ ಗೋಡೆಗಳು ವಿಶೇಷ ಅನುಭವ ನೀಡುತ್ತವೆ. ತಾಪಮಾನವನ್ನು ಸಮತೋಲನಗೊಳಿಸಲು ನೆರವಾಗುವಂತೆ ಈ ಗೋಡೆಗಳನ್ನು ಕಟ್ಟಲಾಗಿದೆ.
ಡೈನಿಂಗ್ ಹಾಲ್ ನಲ್ಲಿ ರಾಜಸ್ಥಾನದಿಂದ ತರಲಾದ 150 ವರ್ಷಗಳಷ್ಟು ಹಳೆಯದಾದ ಬಾಗಿಲು ಇದೆ. ಹಿತಕರ ವಾತಾವರಣ ಹೆಚ್ಚಿಸಲು ಛಾವಣಿಯ ಮೇಲೆ ಮಣ್ಣಿನ ಮಡಕೆಗಳನ್ನು ತಲೆಕೆಳಗಾಗಿ ಜೋಡಿಸಲಾಗಿದೆ. ಧ್ಯಾನ್ಯಕ್ಕೆ ಅನುಕೂಲಕರವಾಗುವಂತೆ ಸಾಂಪ್ರಾದಾಯಿಕ ಅಂಶಗಳೊಂದಿಗೆ ಸರಳವಾಗಿ ಮನೆ ಕಟ್ಟಲಾಗಿದ್ದು, ಇದಕ್ಕೆ ಸತ್ಯ ಚಿತ್ತ' ಅಥವಾ 'ನಿಜವಾದ ಪ್ರಜ್ಞೆ' ಎಂದು ಹೆಸರು ಇಡಲಾಗಿದೆ.
ಮಹಡಿ ಮೇಲೆ ಸ್ಕೈಲೈಟ್, ರಾಟೆ ವ್ಯವಸ್ಥೆ ಇದ್ದು, ಕುಟುಂಬ ಸದಸ್ಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾದ ಕೊಠಡಿಗಳಿವೆ. ವಾಣಿಜ್ಯೋದ್ಯಮಿ ಮತ್ತು ಐಟಿ ವೃತ್ತಿಪರರು ಆಗಿರುವ ದಂಪತಿ, ತಮ್ಮ ಮನಗೆ ಬೇಕಾದ ಎಲ್ಲಾ ಆಧುನಿಕ ಸೌಕರ್ಯಗಳನ್ನು ಒದಗಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಮನೆಯನ್ನು ಶ್ಲಾಘಿಸಿದ್ದಾರೆ. ಇದು ಅದ್ಭುತ ಪರಿಕಲ್ಪನೆ ಮತ್ತು ಪ್ರಕೃತಿ ಮತ್ತು ತಂತ್ರಜ್ಞಾನದ ಅದ್ಭುತ ಸಂಯೋಜನೆಯಾಗಿದೆ ಎಂದಿದ್ದಾರೆ. ಮತ್ತೆ ಕೆಲವರುಮನೆಯಲ್ಲಿ ಕಂಡುಬರುವ ಸಂಪ್ರದಾಯ ಮತ್ತು ಆಧುನಿಕತೆಯ ಸಾಮರಸ್ಯದ ಮಿಶ್ರಣವನ್ನು ಮೆಚ್ಚಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


