ಪೊಲೀಸ್ ಅಧಿಕಾರಿ ಮೇಲೆ ಕಪಾಳಮೋಕ್ಷಕ್ಕೆ ಸಿದ್ದರಾಮಯ್ಯ ಮುಂದು: ಸ್ಥೈರ್ಯ ಕುಗ್ಗಿಸುವ ನಡತೆ; ಹಿರಿಯ ಅಧಿಕಾರಿಗಳು ತೀವ್ರ ಆಕ್ಷೇಪ
ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳ ಕ್ರಮವನ್ನು ಖಂಡಿಸಿದ್ದಾರೆ. ಈ ಘಟನೆ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ತೀವ್ರವಾಗಿ ಕುಗ್ಗಿಸಿದೆ. ಇದು ಕೇವಲ ಒಬ್ಬ ಪೊಲೀಸ್ ಅಧಿಕಾರಿಯನ್ನು ಮಾತ್ರವಲ್ಲದೆ ಇಡೀ ಪೊಲೀಸ್ ಪಡೆಗೆ ಅವಮಾನವಾಗಿದೆ ಎನ್ನುತ್ತಾರೆ.

ಬೆಂಗಳೂರು: ಕಳೆದ ಸೋಮವಾರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ರ್ಯಾಲಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡುವಂತಹ ಸನ್ನೆ ಮಾಡಿದ್ದು ಖಾಕಿ ಇಲಾಖೆಯನ್ನು ಬೆಚ್ಚಿಬೀಳಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳ ಕ್ರಮವನ್ನು ಖಂಡಿಸಿದ್ದಾರೆ. ಈ ಘಟನೆ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ತೀವ್ರವಾಗಿ ಕುಗ್ಗಿಸಿದೆ. ಇದು ಕೇವಲ ಒಬ್ಬ ಪೊಲೀಸ್ ಅಧಿಕಾರಿಯನ್ನು ಮಾತ್ರವಲ್ಲದೆ ಇಡೀ ಪೊಲೀಸ್ ಪಡೆಗೆ ಅವಮಾನವಾಗಿದೆ ಎನ್ನುತ್ತಾರೆ.
ಕರ್ತವ್ಯದಲ್ಲಿದ್ದ ಹೆಚ್ಚುವರಿ ಎಸ್ಪಿ ದರ್ಜೆಯ ಹಿರಿಯ ಅಧಿಕಾರಿಯನ್ನು ಅವರ ಸಿಬ್ಬಂದಿ ಮತ್ತು ಸಾವಿರಾರು ಜನರ ಮುಂದೆ ಸಿಎಂ ಸಿದ್ದರಾಮಯ್ಯನವರು ಕಪಾಳಮೋಕ್ಷ ಮಾಡುವ ರೀತಿಯಲ್ಲಿ ತೋರಿಸಿದ ವರ್ತನೆ ಪೊಲೀಸ್ ಸಿಬ್ಬಂದಿಯ ಗೌರವಕ್ಕೆ ಅವಮಾನವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಸಿಬ್ಬಂದಿ ಜೊತೆ ಮಾತನಾಡುವಾಗ ಹೇಳುತ್ತಾರೆ. ಪೊಲೀಸ್ ಅಧಿಕಾರಿಗಳನ್ನು ಘನತೆಯಿಂದ ನಡೆಸಿಕೊಳ್ಳದಿದ್ದರೆ, ಅದು ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್ ಸೇವೆಯನ್ನು ನಿರುತ್ಸಾಹಗೊಳಿಸಿದಂತಾಗುತ್ತದೆ ಎನ್ನುತ್ತಾರೆ.
ಮುಖ್ಯಮಂತ್ರಿಗಳ ಇಂತಹ ವರ್ತನೆ ಸರಿಯಲ್ಲ. ಭವಿಷ್ಯದಲ್ಲಿ, ಯುವ ರಾಜಕಾರಣಿಗಳು ಮುಖ್ಯಮಂತ್ರಿಗಳ ಮಾದರಿಯನ್ನು ಅನುಸರಿಸುವುದು ಸರಿಯೇ? ಮುಖ್ಯಮಂತ್ರಿಗಳು ಆ ಕ್ಷಣದಲ್ಲಿ ಕೋಪದಲ್ಲಿ ಕೈ ಎತ್ತಿರಬಹುದು, ಆದರೆ ಭವಿಷ್ಯದ ದೃಷ್ಟಿಯಿಂದ ಇಂತಹ ವಿಷಯಗಳು ಒಳ್ಳೆಯದಲ್ಲ. ರಾಜಕೀಯ ನಾಯಕರು ತಮ್ಮ ಪಕ್ಷದ ಯುವ ನಾಯಕರು, ಕಾರ್ಯಕರ್ತರು, ಸಮಾಜಕ್ಕೆ ಉತ್ತಮ ಮಾದರಿಯನ್ನು ನೀಡಬೇಕು ಎಂದು ಹೇಳುತ್ತಾರೆ.
ಮುಖ್ಯಮಂತ್ರಿಯವರ ಕ್ರಮ ಸ್ವೀಕಾರಾರ್ಹವಲ್ಲದಿದ್ದರೂ, ಪೊಲೀಸ್ ಇಲಾಖೆಯಿಂದ ಯಾವುದೇ ಪ್ರಕರಣ ಅಥವಾ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಡಿಐಜಿ ಶ್ರೇಣಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ, ಏಕೆಂದರೆ ಇದರಲ್ಲಿ ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ ಎನ್ನುತ್ತಾರೆ.
ಮುಖ್ಯಮಂತ್ರಿಯವರ ಈ ಪ್ರತಿಕ್ರಿಯೆಯು ಸಾರ್ವಜನಿಕರಿಗೆ ಮತ್ತು ಪೊಲೀಸ್ ಪಡೆಗೆ ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ರಾಜಕಾರಣಿಗಳು ಅಸಭ್ಯ ಭಾಷೆ ಬಳಸಿದ ಅಥವಾ ಆ ಕ್ಷಣದಲ್ಲಿ ವರ್ತಿಸಿದ ಅನೇಕ ಸಂದರ್ಭಗಳಿವೆ, ಮೊನ್ನೆಯ ಕಾರ್ಯಕ್ರಮದಲ್ಲಿ ಭದ್ರತಾ ಲೋಪವಾಗಿದೆ ಎಂದು ಮುಖ್ಯಮಂತ್ರಿ ಭಾವಿಸಿದ್ದರೆ, ಅವರು ತನಿಖೆಗೆ ಆದೇಶಿಸಬಹುದಿತ್ತು. ಸಾವಿರಾರು ಜನರು ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರ ನಡೆ ಸರಿಯಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



