ಬೆಂಗಳೂರು: 16 ವರ್ಷದ ಬಾಲಕನ ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ ಸುಲಿಗೆಗೆ ಅಪ್ರಾಪ್ತರು ಯತ್ನ!
ಬಾಲಕನನ್ನು ವಿಲ್ಸನ್ ಗಾರ್ಡನ್ ಬಳಿಯ ಪಾರ್ಕಿಂಗ್ ಪ್ರದೇಶಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಐದು ಹುಡುಗರ ಗುಂಪೊಂದು ಅವನ ಮೇಲೆ ಹಲ್ಲೆ ನಡೆಸಿ ಅವನ ಬಟ್ಟೆಯನ್ನು ಬಿಚ್ಚುವಂತೆ ಒತ್ತಾಯಿಸಿದರು.

ಬೆಂಗಳೂರು: 16 ವರ್ಷದ ಬಾಲಕನ ನಗ್ನ ವಿಡಿಯೋ ಮಾಡಿ ನಂತರ ಹಣ ಸುಲಿಗೆ ಮಾಡಲು ಯತ್ನಿಸಿದ ಆತನ ಸ್ನೇಹಿತರ ವಿರುದ್ಧ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ವರದಿಗಳ ಪ್ರಕಾರ, ಆರೋಪಿಗಳೆಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದು, ಅವರು ಸಂತ್ರಸ್ತ ಬಾಲಕನ ಶಾಲಾ ಸ್ನೇಹಿತರೂ ಅಲ್ಲ, ಸ್ಥಳೀಯ ಸ್ನೇಹಿತರಲ್ಲ. ಸಾಮಾಜಿಕ ಮಾಧ್ಯಮದ ಮೂಲಕ ಶಂಕಿತರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಬಾಲಕನನ್ನು ವಿಲ್ಸನ್ ಗಾರ್ಡನ್ ಬಳಿಯ ಪಾರ್ಕಿಂಗ್ ಪ್ರದೇಶಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಐದು ಹುಡುಗರ ಗುಂಪೊಂದು ಅವನ ಮೇಲೆ ಹಲ್ಲೆ ನಡೆಸಿ ಅವನ ಬಟ್ಟೆಯನ್ನು ಬಿಚ್ಚುವಂತೆ ಒತ್ತಾಯಿಸಿದರು. ನಾನು ಹುಡುಗಿಯರ ನಗ್ನ ವಿಡಿಯೋ ಮಾಡುತ್ತೇನೆ ಹಾಗೂ ಅವರಲ್ಲಿ ಒಬ್ಬರಿಂದ 50,000 ರೂ.ಗಳನ್ನು ಸಂಗ್ರಹಿಸಿದ್ದೇನೆ ಎಂದು ಬಾಲಕನಿಂದ ಬಲವಂತವಾಗಿ ಹೇಳಿಸಲಾಯಿತು,
ಆ ಗ್ಯಾಂಗ್ ಅಪ್ರಾಪ್ತನಿಗೆ 10,000 ರೂ. ನೀಡದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿತು. ಘಟನೆಯ ಬಗ್ಗೆ ತನ್ನ ತಾಯಿ ಅಥವಾ ಪೊಲೀಸರಿಗೆ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಏಪ್ರಿಲ್ 5 ರಂದು ನಡೆದಿದ್ದು, ಏಪ್ರಿಲ್ 25 ರಂದು ದೂರು ದಾಖಲಾಗಿದೆ. ಏಪ್ರಿಲ್ 5 ರಂದು ಸಂತ್ರಸ್ತ ತನ್ನ ತಾಯಿಗೆ ಊಟಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಅವನು ಹಿಂತಿರುಗಿದ ನಂತರ, ಘಟನೆಯ ಬಗ್ಗೆ ತನ್ನ ತಾಯಿಗೆ ತಿಳಿಸಿದನು. ಆದರೆ ಭಯದಿಂದ ಮಹಿಳೆ ದೂರು ದಾಖಲಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತ ಬಾಲಕ ಪ್ರತಿಷ್ಠಿತ ಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿ. ತನ್ನ ಮಗನಿಗೆ ಪರಿಚಿತವಾಗಿರುವ ಹುಡುಗಿಯೊಬ್ಬಳು ಇಡೀ ಘಟನೆಯ ಹಿಂದಿದ್ದಾಳೆ ಎಂದು ದೂರುದಾರರು ಹೇಳಿಕೊಂಡಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ನಾವು ಇನ್ನೂ ಪರಿಶೀಲಿಸುತ್ತಿದ್ದೇವೆ.
ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಈ ತಿಂಗಳ ಮೊದಲ ವಾರದಲ್ಲಿ ಈ ಘಟನೆ ನಡೆದಿದ್ದು, ಸುಮಾರು 20 ದಿನಗಳ ನಂತರ ದೂರು ದಾಖಲಾಗಿದೆ. ದೂರು ದಾಖಲಿಸುವಲ್ಲಿನ ವಿಳಂಬವನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಶಂಕಿತರು ಅಪ್ರಾಪ್ತ ವಯಸ್ಕರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಆಗ್ನೇಯ ವಿಭಾಗದ ಪೊಲೀಸರು ಹಲವು ಸೆಕ್ಷನ್ ಸೇರಿದಂತೆ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



