ನ್ಯಾಯದಾನದಲ್ಲಿ ಕರ್ನಾಟಕ ಪೊಲೀಸರು ರಾಷ್ಟ್ರದಲ್ಲೇ ಮುಂಚೂಣಿ! ಸಿಎಂ ಶ್ಲಾಘನೆ
ಕರ್ನಾಟಕವು 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಬೆಂಗಳೂರು: ನ್ಯಾಯದಾನ ನೀಡಿಕೆಯಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ಅಗ್ರಸ್ಥಾನದಲ್ಲಿದ್ದಾರೆ ಎಂದು ಟಾಟಾ ಟ್ರಸ್ಟ್ ವರದಿ ಹೇಳಿದೆ. ಮಂಗಳವಾರ ಬಿಡುಗಡೆಯಾದ IJR 2025 ನಾಲ್ಕನೇ ಆವೃತ್ತಿಯಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿನ ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆ, ಜೈಲು ನಿರ್ವಹಣೆ ಮತ್ತು ಕಾನೂನು ನೆರವಿನ ಅಂಶಗಳನ್ನು ಪರಿಗಣಿಸಿ ಈ ವರದಿ ತಯಾರಿಸಲಾಗಿದೆ.
ಕರ್ನಾಟಕವು 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಪೊಲೀಸ್ ಮತ್ತು ನ್ಯಾಯಾಂಗ ಎರಡರಲ್ಲೂ SC, ST ಮತ್ತು OBC ಗಳಿಗೆ ಮೀಸಲಾತಿ ಕೋಟಾ ಪೂರೈಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಎಲ್ಲಾ ದೊಡ್ಡ ರಾಜ್ಯಗಳಲ್ಲಿ ಶೇ. 1.2 ರಷ್ಟು ಕಡಿಮೆ ಅಧಿಕಾರಿ ಮಟ್ಟದ ಖಾಲಿ ಹುದ್ದೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ.
ಕರ್ನಾಟಕದ ನಂತರ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿವೆ. ಅಗ್ರ ಶ್ರೇಯಾಂಕದ ರಾಜ್ಯವಾಗಿದ್ದರೂ, ಜೈಲುಗಳು, ಕಾನೂನು ನೆರವು ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ನೇಮಕ ವಿಚಾರದಲ್ಲಿ ಕರ್ನಾಟಕದ ಸಾಧನೆ ಹಿಂದುಳಿದಿದೆ.
ಕರ್ನಾಟಕದಲ್ಲಿ ಶೇ. 80ರಷ್ಟು ವಿಚಾರಣಾಧೀನ ಕೈದಿಗಳು:
IJR 2025 ರ ಪ್ರಕಾರ, "ಕರ್ನಾಟಕ ಜೈಲುಗಳಲ್ಲಿ ಶೇ. 80 ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ. ಇದು 2015 ರಿಂದ ಅತ್ಯಧಿಕವಾಗಿದೆ. ಗ್ರಾಮ ಮಟ್ಟದಲ್ಲಿ ಕಾನೂನು ನೆರವಿನ ಕೊರತೆ ಇದಕ್ಕೆ ಕಾರಣವಿರಬಹುದು.
ಗ್ರಾಮ ಮಟ್ಟದಲ್ಲಿ ಕಾನೂನು ಸೇವಾ ಕೇಂದ್ರಗಳ ಸಂಖ್ಯೆಯು 157 ರಿಂದ ಈಗ 32 ಕ್ಕೆ ಇಳಿದಿದೆ" ಎಂದು ವರದಿ ಹೇಳುತ್ತದೆ. ರಾಜ್ಯದಲ್ಲಿ ಪೊಲೀಸರ ನೇಮಕಾತಿಯಲ್ಲಿ ಮಹಿಳೆಯರ ಪಾಲನ್ನು ಶೇ. 25 ಇದೆ. ಆದರೆ ವಾಸ್ತವದಲ್ಲಿ ಕರ್ನಾಟಕ ಪೊಲೀಸರಲ್ಲಿ ಪುರುಷ ಪ್ರಾಬಲ್ಯವಿದೆ. ಪೊಲೀಸರಲ್ಲಿ ಶೇ, 9 ರಷ್ಟು ಮತ್ತು ಅಧಿಕಾರಿ ಮಟ್ಟದಲ್ಲಿ ಶೇ. 6 ರಷ್ಟು ಮಹಿಳೆಯರಿದ್ದಾರೆ ಎಂದು ವರದಿ ಹೇಳಿದೆ.
ವಿಪರ್ಯಾಸವೆಂದರೆ, ಒಂದೇ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಮೀಸಲಾದ ಕೋಟಾವನ್ನು ಭರ್ತಿ ಮಾಡಿಲ್ಲ. ವರದಿಯ ಪ್ರಕಾರ, 2.4 ಲಕ್ಷ ಮಹಿಳಾ ಪೊಲೀಸರ ಪೈಕಿ 960 ಮಂದಿ ಮಾತ್ರ ಐಪಿಎಸ್ನಲ್ಲಿದ್ದರೆ, 24,322 ಐಪಿಎಸ್ ಅಧಿಕಾರಿಯೇತರ ಹುದ್ದೆಗಳಾದ ಸಬ್ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಲ್ಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಶ್ಲಾಘನೆ:
ಈ ವರದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆ, ಜೈಲು ನಿರ್ವಹಣೆ ಮತ್ತು ಕಾನೂನು ನೆರವಿನಲ್ಲಿ ದೇಶದ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



