ಮೈಸೂರು: ಜೂನ್ ಅಂತ್ಯದ ವೇಳೆಗೆ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭ..!
ಕಾರ್ಖಾನೆಯು ಈ ಬಾರಿ 4.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಈಗಾಗಲೇ 4.53 ಲಕ್ಷ ಟನ್ ಕಬ್ಬಿಗೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಮೈಸೂರು: ಜೂನ್ ಅಂತ್ಯದ ವೇಳೆಗೆ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಭಾನುವಾರ ಹೇಳಿದರು.
ಭಾನುವಾರ ರೈತರು ಮತ್ತು ವಿವಿಧ ಸಂಘಟನೆಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆ ಸರ್ಕಾರದ ಆರ್ಥಿಕ ಬೆಂಬಲವಿಲ್ಲದೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿದರು.
ಕಾರ್ಖಾನೆಯು ಈ ಬಾರಿ 4.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಈಗಾಗಲೇ 4.53 ಲಕ್ಷ ಟನ್ ಕಬ್ಬಿಗೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆ ಆರಂಭಿಸಲು ಯಾವುದೇ ತೊಂದರೆಯಿಲ್ಲ. ಕಳೆದ ಬಾರಿಯಂತೆ ಸರ್ಕಾರದ ನೆರವು ಪಡೆಯದೇ ಈ ಬಾರಿಯೂ ಕಬ್ಬು ಅರೆಯುತ್ತೇವೆ. ಪ್ರತಿದಿನ ಕಾರ್ಖಾನೆಯಲ್ಲಿ ಐದು ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದು, ಕನಿಷ್ಟ 4 ಸಾವಿರ ಟನ್ ಕಬ್ಬು ಅರೆಯುತ್ತೇವೆಂದು ಹೇಳಿದರು.
ಎರಡು ದಶಕಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಕಾರ್ಖಾನೆ ಲಾಭಾಂಶ ಕಂಡಿದೆ. 2 ಲಕ್ಷ ಟನ್ ಕಬ್ಬು ಅರೆದು ಪ್ರತಿ ಟನ್‌ಗೆ 122ನಂತೆ 2.44 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷ ಆಗಸ್ಟ್ 5ರಂದು ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯ ಪ್ರಾರಂಭವಾಗಿ 25000 ಮೆಟ್ರಿಕ್ ಟನ್ ಕಬ್ಬಿನ ಗುರಿಯ ಪೈಕಿ 2,01,900 ಮೆಟ್ರಿಕ್ ಟನ್ ಕಬ್ಬು (ಶೇ 97.5) ನುರಿಸಲಾಗಿದೆ ಎಂದು ತಿಳಿಸಿದರು.
ದಿನಕ್ಕೆ 5,000 ಟನ್ ಕಬ್ಬು ಅರೆಯುವ ಸಾಮರ್ಥ್ಯವಿರುವ ಬಾಯ್ಲಿಂಗ್ ಹೌಸ್ ಸ್ಥಾಪಿಸಲು ರೂ.60 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಮಧ್ಯೆ, ಅಸ್ತಿತ್ವದಲ್ಲಿರುವ ಬಾಯ್ಲಿಂಗ್ ಹೌಸ್ ದುರಸ್ತಿ ಕಾರ್ಯ ಕೈಗೊಳ್ಳಲು ಕಾರ್ಖಾನೆಯು ರೂ.2 ರಿಂದ ರೂ.3 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ಪ್ರಸ್ತುತ, ಕಾರ್ಖಾನೆಯು ದಿನಕ್ಕೆ 3,500 ಟನ್ ಕಬ್ಬು ಅರೆಯಲು ಒಂದು ಗಿರಣಿಯನ್ನು ಸ್ಥಾಪಿಸಿದ್ದು, ಬಾಯ್ಲರ್ ಹೌಸ್ ಅನ್ನು ಮೇಲ್ದರ್ಜೆಗೇರಿಲಾಗಿದೆ. ಇದರಿಂದ ಉತ್ತಮ ಗುಣಮಟ್ಟದ ಸಕ್ಕರೆಯನ್ನು ಉತ್ಪಾದಿಸಲು ಸಹಾಯವಾಗುತ್ತದೆ. ಹಿಂದಿನ ವರ್ಷದ ಸಕ್ಕರೆ ಉತ್ಪಾದನೆಯೂ ಉತ್ತಮ ಗುಣಮಟ್ಟದ್ದಾಗಿದೆ. ಈ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
"ಮೈಶುಗರ್ ಆರ್‌ಬಿ ಟೆಕ್ ಕಂಪನಿಯಿಂದ ನಷ್ಟವನ್ನು ಅನುಭವಿಸಿತು. ರಾಜ್ಯ ಸರ್ಕಾರದ ನಿರ್ದೇಶನದಂತೆ ಆರ್‌ಬಿ ಟೆಕ್‌ಗೆ 3.6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದೀಗ ಈ ನಷ್ಟವನ್ನು ಮೈಶುಗರ್ ಏಜೆನ್ಸಿಯ ಭದ್ರತಾ ಠೇವಣಿಯಿಂದ ಕಡಿತಗೊಳಿಸಲಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



