ರಾಜ್ಯ

ಕುಡಿದು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದ ಆರೋಗ್ಯ ನಿರೀಕ್ಷಕ ನಾರಾಯಣ ರಾಥೋಡ್ ಅಮಾನತು!

ನಾರಾಯಣ ರಾಠೋಡ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿದ್ದು, ಆಸ್ಪತ್ರೆಯ ಕಿಟಕಿಗಳನ್ನು ಒಡೆದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಅಪಾರ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ.

ಕುಡಿದು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದ ಆರೋಗ್ಯ ನಿರೀಕ್ಷಕ ನಾರಾಯಣ ರಾಥೋಡ್ ಅಮಾನತು!
ಆರೋಗ್ಯ ನಿರೀಕ್ಷಕ ನಾರಾಯಾಣ ರಾಥೋಡ್
Published On :

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರನಾಳ್ ಆರೋಗ್ಯ ಕೇಂದ್ರದಲ್ಲಿ ಮದ್ಯ ಸೇವಿಸಿ ಆಸ್ಪತ್ರೆಗೆ ಆಗಮಿಸಿ ಅವಾಂತರ ಸೃಷ್ಟಿಸಿದ್ದ ವೈದ್ಯ ನಾರಾಯಣ ರಾಥೋಡ್ ಆಯುಷ್ ವೈದ್ಯನಲ್ಲ, ಆತ ಆರೋಗ್ಯ ನಿರೀಕ್ಷಣಾಧಿಕಾರಿ ಎಂದು ಆಯುಷ್ ಇಲಾಖೆ ಸ್ಪಷ್ಟಪಡಿಸಿದೆ.

ನಾರಾಯಣ ರಾಠೋಡ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿದ್ದು, ಆಸ್ಪತ್ರೆಯ ಕಿಟಕಿಗಳನ್ನು ಒಡೆದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಅಪಾರ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ನಾರಾಯಣ ರಾಥೋಡ್ ರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಮಾನತ್ತುಗೊಳಿಸಿದ್ದಾರೆ.

Doctor Suspended.pdf

ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕರ್ತವ್ಯದ ವೇಳೆ ಮದ್ಯ ಸೇವಿಸಿ ನಾರಾಯಣ ಗಲಾಟೆ ಮಾಡಿದ್ದರು. ಆತನ ಮೇಲೆ ಮಹಿಳಾ ರೋಗಿಗಳಿಗೆ ಮೌಖಿಕವಾಗಿ ನಿಂದಿಸಿದ ಮಾಡಿದ ಆರೋಪಗಳಿವೆ. ಇತ್ತೀಚಿನ ಘಟನೆಯ ನಂತರ, ಡಾ. ರಾಥೋಡ್ ರನ್ನು ಅಮಾನತುಗೊಳಿಸುವಂತೆ ಸಾರ್ವಜನಿಕರಿಂದ ಮತ್ತು ಆಸ್ಪತ್ರೆಯ ಸಿಬ್ಬಂದಿಯಿಂದ ಒತ್ತಾಯ ಹೆಚ್ಚಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.