ಬೆಂಗಳೂರು: ಖ್ಯಾತ ಭೌತಶಾಸ್ತ್ರಜ್ಞೆ ರೋಹಿಣಿ ಗೋಡ್ಬೋಲೆ ನಿಧನ
ಗೋಡ್ಬೋಲೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅದ್ಭುತ ಸಂಶೋಧಕಿ ಮತ್ತು ವಿಜ್ಞಾನದಲ್ಲಿ ಮಹಿಳಾ ಚಾಂಪಿಯನ್ ಆಗಿದ್ದ ಗೋಡ್ಬೋಲೆ ಅವರು 1995 ರಲ್ಲಿ CHEPಗೆ ಸಹ ಪ್ರಾಧ್ಯಾಪಕರಾಗಿ ಸೇರಿಕೊಂಡರು.

ಬೆಂಗಳೂರು: ಖ್ಯಾತ ಭೌತಶಾಸ್ತ್ರಜ್ಞೆ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ಪ್ರೊಫೆಸರ್ ರೋಹಿಣಿ ಎಂ ಗೋಡ್ಬೋಲೆ ಅವರು ಶುಕ್ರವಾರ ನಿಧನರಾಗಿದ್ದಾರೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(IISc)ನ ಸೆಂಟರ್ ಫಾರ್ ಹೈ ಎನರ್ಜಿ ಫಿಸಿಕ್ಸ್(CHEP) ತಿಳಿಸಿದೆ.
ಗೋಡ್ಬೋಲೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅದ್ಭುತ ಸಂಶೋಧಕಿ ಮತ್ತು ವಿಜ್ಞಾನದಲ್ಲಿ ಮಹಿಳಾ ಚಾಂಪಿಯನ್ ಆಗಿದ್ದ ಗೋಡ್ಬೋಲೆ ಅವರು 1995 ರಲ್ಲಿ CHEPಗೆ ಸಹ ಪ್ರಾಧ್ಯಾಪಕರಾಗಿ ಸೇರಿಕೊಂಡರು ಮತ್ತು 1998 ರಿಂದ ಪ್ರಾಧ್ಯಾಪಕರಾಗಿದ್ದರು.
ಜುಲೈ 31, 2021 ರಂದು ಅವರ ನಿವೃತ್ತಿಯ ನಂತರ, ಅವರು ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಗೋಡ್ಬೋಲೆ ಅವರ ನಿಧನಕ್ಕೆ ಅವರ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು 'X' ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ.
ಗೋಡ್ಬೋಲೆ ಅವರ ನಿಧನ "CHEP ಸಮುದಾಯಕ್ಕೆ ಮಾತ್ರವಲ್ಲದೆ ಭೌತಶಾಸ್ತ್ರಕ್ಕೂ ದೊಡ್ಡ ನಷ್ಟ... ಜನ ಅವರನ್ನು ಶ್ರೇಷ್ಠ ಭೌತಶಾಸ್ತ್ರಜ್ಞರಾಗಿ ನೆನಪಿಸಿಕೊಳ್ಳುತ್ತಾರೆ ಮತ್ತು ಸಂಶೋಧನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಯುವ ಜನರನ್ನು ಪ್ರೇರೇಪಿಸಿದ ಶಿಕ್ಷಕಿ" ಎಂದು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(ಐಐಟಿ) ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕರಾದ ಜೋಯ್‌ದೀಪ್ ಚಕ್ರವರ್ತಿ ಅವರು 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್‌ನ ಡೆವಲಪ್‌ಮೆಂಟಲ್ ಬಯಾಲಜಿಸ್ಟ್ ಕೆ ವಿಜಯ ರಾಘವನ್ ಅವರು 'ಎಕ್ಸ್' ನಲ್ಲಿ, ಗೋಡ್ಬೋಲೆ ಅವರು ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ್ದರು ಎಂದಿದ್ದಾರೆ.
ಗೋಡ್ಬೋಲೆ ಅವರು ಒಬ್ಬ ಪ್ರಸಿದ್ಧ ವಿಜ್ಞಾನಿಗಿಂತ ಹೆಚ್ಚು ಎಂದು IISc ಯಲ್ಲಿ ಅವರ ಸಹೋದ್ಯೋಗಿಯಾಗಿದ್ದ ಅರಿಂದಮ್ ಘೋಷ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


