ಬಾಡಿಗೆದಾರರ ಸೋಗಿನಲ್ಲಿ ಹಿರಿಯ ನಾಗರೀಕರ ದರೋಡೆ, ಹತ್ಯೆ: ಆರೋಪಿಗಳ ಪತ್ತೆಗೆ ಸಾರ್ವಜನಿಕರ ನೆರವು ಕೋರಿದ ಪೊಲೀಸರು
ಬಾಡಿಗೆದಾರರ ಸೋಗಿನಲ್ಲಿ ಇಬ್ಬರು ವ್ಯಕ್ತಿಗಳು ಹಿರಿಯ ನಾಗರೀಕರ ದರೋಡೆ ಮಾಡುತ್ತಿದ್ದು, ಇಬ್ಬರ ಪತ್ತೆಗೆ ರಾಮನಗರ ಜಿಲ್ಲೆಯ ತಾವರಕೆರೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಬೆಂಗಳೂರು: ಬಾಡಿಗೆದಾರರ ಸೋಗಿನಲ್ಲಿ ಬಂದು ಹಿರಿಯ ನಾಗರೀಕರ ಹತ್ಯೆ ಮಾಡಿ, ದರೋಡೆ ಮಾಡುತ್ತಿರುವ ಆರೋಪಿಗಳ ಪತ್ತೆಗೆ ರಾಮನಗರ ಜಿಲ್ಲಾ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ಮಹಿಳೆ ಹಾಗೂ ಪುರುಷರಿಬ್ಬರು ಹಿರಿಯ ನಾಗರೀಕರ ದರೋಡೆ ಮಾಡುತ್ತಿದ್ದು, ಇಬ್ಬರ ಪತ್ತೆಗೆ ರಾಮನಗರ ಜಿಲ್ಲೆಯ ತಾವರಕೆರೆ ಪೊಲೀಸರು ವಾಂಟೆಡ್ ನೋಟಿಸ್ ಜಾರಿ ಮಾಡಿದ್ದಾರೆ.
ಟು-ಲೆಟ್ ಬೋರ್ಡ್ ಇರುವ ಮನೆಗಳನ್ನು ನೋಡುವ ಇಬ್ಬರೂ ಆರೋಪಿಗಳು ಬಾಡಿಗೆದಾರರ ಸೋಗಿನಲ್ಲಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಾರೆ. ಮಾಲೀಕರು ಹಿರಿಯ ನಾಗರೀಕರು ಎಂಬುದು ತಿಳಿದುಬಂದರೆ, ದರೋಡೆಗೆ ಸಂಚು ರೂಪಿಸುತ್ತಾರೆ. ದರೋಡೆ ಬಳಿಕ ಮಾಲೀಕರನ್ನು ಮನೆಯಲ್ಲಿ ಕಟ್ಟಿ ಹಾಕಿ, ಬೀಗ ಹಾಕಿ ಪರಾರಿಯಾಗುತ್ತಿದ್ದಾರೆ. ವೃದ್ದೆಯೊಬ್ಬಳ ಕೊಲೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ನಿಖರ ಮಾಹಿತಿ ಸದ್ಯ ಪೊಲೀಸರಿಗೆ ಲಭ್ಯವಾಗಿಲ್ಲ.
ಆಗಸ್ಟ್ 6 ರಂದು ತಾವರೆಕೆರೆ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಗಳು ವಯೋವೃದ್ಧ ದಂಪತಿಯೊಂದಿಗೆ ಮಾತನಾಡುವಾಗ ತಮ್ಮನ್ನು ಆಶಾ ಮತ್ತು ಜೀವನ್ ಎಂದು ಪರಿಚಯಿಸಿಕೊಂಡಿದ್ದಾರೆ. ಇಬ್ಬರೂ ದಂಪತಿಗಳೆಂದು ಹೇಳಿಕೊಂಡಿದ್ದಾರೆ.
ಬಳಿಕ ಸಿದ್ದಗಂಗಪ್ಪ ಮತ್ತು ಅವರ ಪತ್ನಿ ಸಿದ್ದಲಿಂಗಮ್ಮ ಅವರ ಮನೆಯಲ್ಲಿ ದರೋಡೆ ಮಾಡಲು ಹೋಗಿದ್ದು, ಇಬ್ಬರ ಮೇಲೆ ಮೆಣಸಿನ ಪುಡಿ ಎರಚಿ ಹಲ್ಲೆ ನಡೆಸಿ, ಸುಮಾರು 2.25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇಬ್ಬರೂ ಆಗಾಗ್ಗೆ ತಾವಿದ್ದ ಸ್ಥಳಗಳನ್ನು ಬದಲಿಸುತ್ತಿದ್ದು, ಇಬ್ಬರೂ ದಂಪತಿಗಳು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



