ಚುನಾವಣೆ ಪ್ರಚಾರದ ವೇಳೆ ಚಿತ್ರ ಬಿಡಿಸಿ ಉಡುಗೊರೆ ನೀಡಿದ್ದ ಬಾಗಲಕೋಟೆ ಯುವತಿ: ಕೊಟ್ಟ ಮಾತಿನಂತೆ ಪತ್ರ ಬರೆದ ಪ್ರಧಾನಿ!
ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರ ನರೇಂದ್ರ ಮೋದಿ ಹಾಗೂ ಅವರ ತಾಯಿ ಇರುವ ಭಾವಚಿತ್ರ ನೀಡಿದ್ದ ಬಾಗಲಕೋಟೆ ಯುವತಿ ನಾಗರತ್ನಾ ಬಸವರಾಜ ಮೇಟಿಯವರಿಗೆ ಮೋದಿ ಅವರು ಧನ್ಯವಾದ ತಿಳಿಸಿ, ಪತ್ರ ಬರೆದಿದ್ದಾರೆ.

ಬಾಗಲಕೋಟೆ: ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರ ನರೇಂದ್ರ ಮೋದಿ ಹಾಗೂ ಅವರ ತಾಯಿ ಇರುವ ಭಾವಚಿತ್ರ ನೀಡಿದ್ದ ಬಾಗಲಕೋಟೆ ಯುವತಿ ನಾಗರತ್ನಾ ಬಸವರಾಜ ಮೇಟಿಯವರಿಗೆ ಮೋದಿ ಅವರು ಧನ್ಯವಾದ ತಿಳಿಸಿ, ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿ ಅವರು ಬಾಗಲಕೋಟೆಯಲ್ಲಿ ಭಾಷಣ ಮಾಡುವ ವೇಳೆ ನಾಗರತ್ನಾ ಅವರು ಫೋಟೋ ಹಿಡಿದು ನಿಂತಿದ್ದರು. ಇದನ್ನು ಗಮನಿಸಿದ ಮೋದಿಯವರು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಫೋಟೊ ತರಿಸಿಕೊಂಡು, ಪತ್ರ ಬರೆಯುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಯುವತಿಗೆ ಪತ್ರ ಬರೆದಿದ್ದಾರೆ.
ಏಪ್ರಿಲ್ 29ರಂದು ಬಾಗಲಕೋಟೆಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮೋದಿ ಅವರಿಗೆ ನಾಗರತ್ನಾ ಅವರು ಚಿತ್ರವನ್ನು ದೂರದಿಂದ ತೋರಿಸಿದ್ದರು. ಆಗ ಮೋದಿ ಅವರು ವಿಶೇಷ ಭದ್ರತಾ ಸಿಬ್ಬಂದಿಗೆ ಚಿತ್ರವನ್ನು ಸಂಗ್ರಹಿಸಿಕೊಳ್ಳುವಂತೆ ತಿಳಿಸಿದ್ದಲ್ಲದೇ, ನಿನ್ನ ಹೆಸರು, ವಿಳಾಸ ಬರೆದು ಕಳುಹಿಸು ಮಗಳೇ, ನಾನು ನಿನಗೆ ಖಂಡಿತವಾಗಿಯೂ ಪತ್ರ ಕಳುಹಿಸುತ್ತೇನೆಂದು ಹೇಳಿದ್ದರು.
ಈ ಕಲಾತ್ಮಕ ಚಿತ್ರವು ಮಾನವನ ಭಾವನೆಗಳ ಪ್ರಾಮುಖ್ಯತೆ ತೋರಿಸುತ್ತದೆ. ಹೊಸ ಭಾರತ ಮತ್ತು ಯುವಶಕ್ತಿಯ ಭವಿಷ್ಯ ನಿರ್ಮಾಣಕ್ಕೆ ನನ್ನನ್ನು ಪ್ರೇರೇಪಿಸುತ್ತದೆ. ಕೌಶಲ ಹಾಗೂ ರಚನಾತ್ಮಕ ಚಟುವಟಿಕೆಯನ್ನು ನಿಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಿ. ಶುಭವಾಗಲಿ’ ಎಂದು ಮೋದಿ ಹಾರೈಸಿದ್ದಾರೆ.
ಮೋದಿಯವರ ಪತ್ರಕ್ಕೆ ನಾಗರತ್ನಾ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದು, ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



